ಟಿ20 ಶ್ರೇಯಾಂಕ : ಅಗ್ರಸ್ಥಾನಕ್ಕೇರಿದ ನಾಯಕ ವಿರಾಟ್ ಕೊಹ್ಲಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 02: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾ ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

ಆಸ್ಟ್ರೇಲಿಯಾದ ಅರೋನ್ ಫಿಂಚ್ ಎರಡನೇ ಸ್ಥಾನ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಮೂರನೆ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರು ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹಾಗೂ ಟೆಸ್ಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಮೂರು ಮಾದರಿಯಲ್ಲೂ ಟಾಪ್ 5ರೊಳಗೆ ಕಾಣಿಸಿಕೊಂಡಿರುವ ಏಕೈಕ ಆಟಗಾರರೆನಿಸಿದ್ದಾರೆ.[ಕೆಎಲ್ ರಾಹುಲ್ ರಂತೆ ಸ್ಮಾರ್ಟ್ ಆಗಿರ್ಬೇಕಿತ್ತು : ಕೊಹ್ಲಿ]

ಕೆಎಲ್ ರಾಹುಲ್ ಅವರು 15 ಅಂಕ ಗಳಿಸಿ 15ನೇ ಸ್ಥಾನಕ್ಕೆರಿದರೆ, ಟಿ20ಯಲ್ಲಿ 6 ವಿಕೆಟ್ ಕಿತ್ತು ದಾಖಲೆ ಬರೆದ ಯಜುವೇಂದ್ರ ಚಾಹಲ್ 86ನೇ ಸ್ಥಾನಕ್ಕೆ ಬಂದಿದ್ದಾರೆ. ಯಾರ್ಕರ್ ತಜ್ಞ ಜಸ್ಪ್ರೀತ್ ಬೂಮ್ರಾ ಎರಡನೇ ಸ್ಥಾನಕ್ಕೇರಿದ್ದಾರೆ.

ಟಿ20ಯಲ್ಲಿ ಕೊಹ್ಲಿ ಕಿಂಗ್

ಟಿ20ಯಲ್ಲಿ ಕೊಹ್ಲಿ ಕಿಂಗ್

ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾದ ಅರೋನ್ ಫಿಂಚ್ ಗಿಂತ 28 ಅಂಕ ಮುಂದಿದ್ದಾರೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಇದ್ದಾರೆ.

ಟಾಪ್ 5 ಬ್ಯಾಟ್ಸ್ ಮನ್

ಟಾಪ್ 5 ಬ್ಯಾಟ್ಸ್ ಮನ್

ಇಂಗ್ಲೆಂಡ್ ಹಾಗೂ ಭಾರತ ಟಿ20 ಸರಣಿ ಮುಕ್ತಾಯ (ಫೆ.2) ರಂತೆ ಎಣಿಕೆ
1. ವಿರಾಟ್ ಕೊಹ್ಲಿ (ಭಾರತ) 799 ಅಂಕಗಳು
2. ಅರೋನ್ ಫಿಂಚ್ (ಆಸ್ಟ್ರೇಲಿಯಾ) -771
3. ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ) -763
4. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)-758
5. ಜೋ ರೂಟ್ (ಇಂಗ್ಲೆಂಡ್)- 743

ಟಾಪ್ 5 ಟಿ 20 ಬೌಲರ್ ಗಳು

ಟಾಪ್ 5 ಟಿ 20 ಬೌಲರ್ ಗಳು

1. ಇಮ್ರಾನ್ ತಾಹೀರ್ (ದಕ್ಷಿಣ ಆಫ್ರಿಕಾ) 768 ಅಂಕಗಳು
2. ಜಸ್ಪ್ರೀತ್ ಬೂಮ್ರಾ (ಭಾರತ) -764
3. ಸ್ಯಾಮುಯೆಲ್ ಬದ್ರಿ (ವೆಸ್ಟ್ ಇಂಡೀಸ್) 723
4. ಇಮಾದ್ ವಾಸಿಂ (ಪಾಕಿಸ್ತಾನ) 718
5. ರಶೀದ್ ಖಾನ್ (ಅಫ್ಘಾನಿಸ್ತಾನ) - 701

ಟಾಪ್ 5 ತಂಡಗಳು

ಟಾಪ್ 5 ತಂಡಗಳು

1. ನ್ಯೂಜಿಲೆಂಡ್ 129
2. ಭಾರತ 124 (+1)
3. ವೆಸ್ಟ್ ಇಂಡೀಸ್ 116
4. ದಕ್ಷಿಣ ಆಫ್ರಿಕಾ 115 (-4)
5. ಆಸ್ಟ್ರೇಲಿಯಾ 115

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Batting masterclass Virat Kohli has maintained his domination in latest ICC rankings of T20 batsmen by remaining at top spot.
Please Wait while comments are loading...