ದಕ್ಷಿಣ ಆಫ್ರಿಕಾದ ಕೃಪೆ: ಭಾರತ ತಂಡ ಮತ್ತೊಮ್ಮೆ ನಂ.1

Posted By:
Subscribe to Oneindia Kannada

ಬೆಂಗಳೂರು, ಜ. 27: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮತ್ತೊಮ್ಮೆ ನಂ.1 ಸ್ಥಾನಕ್ಕೇರಿದೆ.

ಭಾರತ ನಂ.1 ಸ್ಥಾನಕ್ಕೇರಲು ಈ ಬಾರಿ ದಕ್ಷಿಣ ಆಫ್ರಿಕಾ ತಂಡ ಕಾರಣವಾಗಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ ಗೆದ್ದರೂ 2-1 ಅಂತರದಲ್ಲಿ ಸರಣಿ ಕಳೆದುಕೊಂಡಿದೆ.
ಟಿ20 ಪಂದ್ಯದ ಸ್ಕೋರ್ ಕಾರ್ಡ್
ಇದಕ್ಕೂ ಮುನ್ನ ಜನವರಿ 16 ರಂದು ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಏಳು ವಿಕೆಟ್ ಗಳಿಂದ ಸೋಲುತ್ತಿದ್ದಂತೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಕುಸಿದು, ಭಾರತ ಮೇಲಕ್ಕೇರಲು ಅವಕಾಶ ಮಾಡಿಕೊಟ್ಟಿತು.

ಈ ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯವನ್ನು 37ರನ್ ಗಳಿಂದ ಗೆದ್ದ ಸಂತಸದಲ್ಲಿರುವಾಗಲೇ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಸಂತೋಷದ ಸುದ್ದಿ ಸಿಕ್ಕಿದೆ.

ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಅಫ್ರಿಕಾ ತಂಡ 280ರನ್ ಗಳ ಬೃಹತ್ ಅಂತರದ ಗೆಲುವು ದಾಖಲಿಸಿದರೂ ಟೆಸ್ಟ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು.

Team India return to No.1 Test spot in the world

ದಕ್ಷಿಣ ಆಫ್ರಿಕಾ -ಇಂಗ್ಲೆಂಡ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ 3-0 ಸರಣಿ ಗೆದ್ದ ಬಳಿಕ ಭಾರತ ಶ್ರೇಯಾಂಕ ಪಟ್ಟಿಯಲ್ಲಿ ಮೇಲಕ್ಕೇರಿತ್ತು.

ಟೀಂ ಇಂಡಿಯಾ ನಾಲ್ಕು ವರ್ಷಗಳ ಬಳಿಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ. 2011ರಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ನಂತರ ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ವೈಟ್ ವಾಶ್ ಮಾಡಿಸಿಕೊಂಡಿತು. ಮುಂದಿನ ತಿಂಗಳು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಫಲಿತಾಂಶದ ಮೇಲೆ ಭಾರತ ಶ್ರೇಯಾಂಕ ಪಟ್ಟಿ ಅವಲಂಬಿಸಿದೆ. ವೆಲ್ಲಿಂಗ್ಟನ್ ನಲ್ಲಿ ಫೆ.12 ರಂದು ಮೊದಲ ಟೆಸ್ಟ್ ನಡೆಯಲಿದೆ.

1. ಭಾರತ
2. ಆಸ್ಟ್ರೇಲಿಯಾ
3. ದಕ್ಷಿಣ ಆಫ್ರಿಕಾ
4. ಪಾಕಿಸ್ತಾನ
5. ಇಂಗ್ಲೆಂಡ್
6. ನ್ಯೂಜಿಲೆಂಡ್
7. ಶ್ರೀಲಂಕಾ
8. ವೆಸ್ಟ್ ಇಂಡೀಸ್
9. ಬಾಂಗ್ಲಾದೇಶ
10. ಜಿಂಬಾಬ್ವೆ
(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following their 37-run triumph over Australia in the first match of the three-match Twenty20 International (T20I) cricket series in Adelaide on Tuesday, India's day got even better as they were named the new top ranked Test team after England completed a 2-1 series victory over former leaders South Africa.
Please Wait while comments are loading...