ಭಾರತದ ರವಿಚಂದ್ರನ್ ಅಶ್ವಿನ್ ವಿಶ್ವ ನಂ.1 ಆಲ್ ರೌಂಡರ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್. 13 : ಭಾರತದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರು ಸೋಮವಾರ ಬಿಡುಗಡೆಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಲ್ ರೌಂಡರ್ ಪಟ್ಟಿಯಲ್ಲಿ ಮತ್ತೆ ನಂ. 1 ಸ್ಥಾನಕ್ಕೇರಿದ್ದಾರೆ.

ಈ ಮೊದಲು ನಂಬರ್ ಒನ್ ಆಲ್ ರೌಂಡರ್ ಸ್ಥಾನದಲ್ಲಿದ್ದ ಅಶ್ವಿನ್ ಅವರನ್ನು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಹಿಂದಿಕ್ಕಿದ್ದರು. ಸೋಮವಾರ ಪ್ರಕಟಗೊಂಡ ಐಸಿಸಿ ಪಟ್ಟಿಯಲ್ಲಿ ಅಶ್ವಿನ್ ಅವರು ಶಕೀಬ್ ಅವರನ್ನು ಹಿಂದಿಕ್ಕಿ 434 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು. [ಕೊಹ್ಲಿಯಿಂದ ಹ್ಯಾಟ್ರಿಕ್, ಆರ್ ಅಶ್ವಿನ್ ಗೆ ಎರಡನೇ ಅನುಭವ]

ಭಾರತದ ಮತ್ತೊಬ್ಬ ಸ್ಪಿನ್ನರ್ ರವಿಂದ್ರ ಜಡೇಜಾ ಅವರು ಆಲ್ ರೌಂಡರ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ರವಿಂದ್ರ ಜಡೇಜಾ ಅವರ ಜತೆ ಅಗ್ರಸ್ಥಾನವನ್ನು ಹಂಚಿಕೊಂಡಿರುವ ಅಶ್ವಿನ್ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಆಸೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಬಳಿಸಿದ್ದ ಅಶ್ವಿನ್ ಭಾರತದ ಗೆಲುವಿನ ರೂವಾರಿಯಾದರು. ಇನ್ನುಳಿದ ಆಲ್ ರೌಂಡರ್ ಆಟಗಾರರ ಪಾಯಿಂಟ್ಸ್ ಪಟ್ಟಿ ಇಲ್ಲಿದೆ.

ಟಾಪ್ 5 ಆಲ್ ರೌಂಡರ್ ಪಟ್ಟಿ

ಟಾಪ್ 5 ಆಲ್ ರೌಂಡರ್ ಪಟ್ಟಿ

1. ರವಿಚಂದ್ರನ್ ಅಶ್ವಿನ್ (ಭಾರತ)-434
2. ಶಕೀಬ್ ಅಲ್ ಹಸನ್(ಬಾಂಗ್ಲಾದೇಶ)-431
3. ರವೀಂದ್ರ ಜಡೇಜಾ(ಭಾರತ)-360
4. ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ)-332
5. ಬೆನ್ ಸ್ಟೋಕ್ಸ್(ಇಂಗ್ಲೆಂಡ್)-327

ಬೌಲಿಂಗ್ ನಲ್ಲೂ ಅಶ್ವಿನ್ ನಂಬರ್ ಒನ್

ಬೌಲಿಂಗ್ ನಲ್ಲೂ ಅಶ್ವಿನ್ ನಂಬರ್ ಒನ್

ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ (ಐಸಿಸಿ) ಟೆಸ್ಟ್ ಬೌಲರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಜತೆಗೀಗ ಭಾರತದ ಮತ್ತೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಸೇರಿಕೊಂಡಿದ್ದಾರೆ.

ಮುತ್ತಯ್ಯ ದಾಖಲೆಯನ್ನು ಮುರಿದ ಅಶ್ವಿನ್

ಮುತ್ತಯ್ಯ ದಾಖಲೆಯನ್ನು ಮುರಿದ ಅಶ್ವಿನ್

ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು 100 ಪಂದ್ಯಗಳಲ್ಲಿ ಮಾಡಿದ ಸಾಧನೆಯನ್ನು ಅಶ್ವಿನ್ ಅವರು 88 ಇನ್ನಿಂಗ್ಸ್ ನಲ್ಲೇ ಸಾಧಿಸಿದ್ದಾರೆ. ನ್ಯೂಜಿಲೆಂಡ್ ನ ವೆಗಿ ರಿಚರ್ಡ್ ಹ್ಯಾಡ್ಲಿ ಅವರು 111 ಇನ್ನಿಂಗ್ಸ್ ನಲ್ಲಿ ಈ ಗುರಿ ಮುಟ್ಟಿದ್ದರು.

ಕಪಿಲ್ ದೇವ್ ದಾಖಲೆ ಮುರಿದ ಆರ್ ಅಶ್ವಿನ್

ಕಪಿಲ್ ದೇವ್ ದಾಖಲೆ ಮುರಿದ ಆರ್ ಅಶ್ವಿನ್

ಕಪಿಲ್ ದೇವ್ ಅವರು ತವರಿನ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆಯನ್ನು ಅಶ್ವಿನ್ ಅವರು ಅಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಚೆಲ್ ಸ್ಟಾಕ್ ವಿಕೆಟ್ ಕೀಳುತ್ತಿದ್ದಂತೆ, ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's star offspinner Ravichandran Ashwin has reclaimed the top position in the ICC Test All-rounders' Rankings released today (March 13).
Please Wait while comments are loading...