ಇಂಗ್ಲೆಂಡಿನ ಕೃಪೆ: ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ.1

Posted By:
Subscribe to Oneindia Kannada

ಬೆಂಗಳೂರು, ಜ.17: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಂ.1 ಸ್ಥಾನಕ್ಕೇರಿದೆ. ಭಾರತ ನಂ.1 ಸ್ಥಾನಕ್ಕೇರಲು ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ತಂಡ ಜಯ ದಾಖಲಿಸಿದ್ದೇ ಕಾರಣವಾಗಿದೆ.

ಜೋಹಾನ್ಸ್ ಬರ್ಗ್ ನಲ್ಲಿ ಜನವರಿ 16 ರಂದು ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಏಳು ವಿಕೆಟ್ ಗಳಿಂದ ಸೋಲುತ್ತಿದ್ದಂತೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಕುಸಿದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 0-2 ಅಂತರದಲ್ಲಿ ಸರಣಿಯಲ್ಲಿ ಗೆಲುವು ದಾಖಲಿಸಿದೆ.

ICC Rankings: India become No. 1 Test side in the world

ದಕ್ಷಿಣ ಆಫ್ರಿಕಾ -ಇಂಗ್ಲೆಂಡ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ 3-0 ಸರಣಿ ಗೆದ್ದ ಬಳಿಕ ಭಾರತ ಶ್ರೇಯಾಂಕ ಪಟ್ಟಿಯಲ್ಲಿ ಮೇಲಕ್ಕೇರಿತ್ತು.


ಟೀಂ ಇಂಡಿಯಾ ನಾಲ್ಕು ವರ್ಷಗಳ ಬಳಿಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ. 2011ರಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ನಂತರ ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ವೈಟ್ ವಾಶ್ ಮಾಡಿಸಿಕೊಂಡಿತು.

ಮುಂದಿನ ತಿಂಗಳು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಫಲಿತಾಂಶದ ಮೇಲೆ ಭಾರತ ಶ್ರೇಯಾಂಕ ಪಟ್ಟಿ ಅವಲಂಬಿಸಿದೆ. ವೆಲ್ಲಿಂಗ್ಟನ್ ನಲ್ಲಿ ಫೆ.12 ರಂದು ಮೊದಲ ಟೆಸ್ಟ್ ನಡೆಯಲಿದೆ.

ಜನವರಿ 16, 2016ರಂತೆ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ

1. ಭಾರತ (110 ಅಂಕಗಳು)
2. ಆಸ್ಟ್ರೇಲಿಯಾ (109)
3. ದಕ್ಷಿಣ ಆಫ್ರಿಕಾ (107)
4. ಪಾಕಿಸ್ತಾನ (106)
5. ಇಂಗ್ಲೆಂಡ್ (104)
6. ನ್ಯೂಜಿಲೆಂಡ್ (100)
7. ಶ್ರೀಲಂಕಾ (89)
8. ವೆಸ್ಟ್ ಇಂಡೀಸ್ (76)
9. ಬಾಂಗ್ಲಾದೇಶ (47)
10. ಜಿಂಬಾಬ್ವೆ (5)
(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: India become No. 1 in Tests
English summary
India have become the number one Test side in the world again after South Africa lost 0-2 to England yesterday (January 16) in Johannesburg.
Please Wait while comments are loading...