ಟಿ20: ಟೀಂ ಇಂಡಿಯಾ ಶ್ರೇಯಾಂಕ ಪಟ್ಟಿಯಲ್ಲಿ ನಂ.1

Posted By:
Subscribe to Oneindia Kannada

ಸಿಡ್ನಿ, ಜ. 31: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್(3-0) ಮಾಡುವ ಮೂಲಕ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಸೀಸ್ ವಿರುದ್ಧ ಮೂರು ಟಿ20 ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿದ ಧೋನಿ ನೇತೃತ್ವದ ತಂಡ ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಳ್ಳಬೇಕಿದೆ.

ಜನವರಿ 26ರಿಂದ ಆರಂಭವಾಗಿ ಜನವರಿ 31ರಂದು ಮುಕ್ತಾಯವಾದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿದ್ದ ಅಗ್ರಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡವನ್ನು ಕೆಳಗಿಳಿಸಿದೆ. ಅಲ್ಲದೆ, ಆಸ್ಟ್ರೇಲಿಯಾ ತಂಡವನ್ನು ಶ್ರೇಯಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ದೂಡಿದೆ.[ಆಸ್ಟ್ರೇಲಿಯ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ]

ವೆಸ್ಟ್ ಇಂಡೀಸ್ ತಂಡ ಸದ್ಯ 118 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 120 ಅಂಕಗಳೊಂದಿಗೆ ಭಾರತ ಮೊದಲ ಸ್ಥಾನಕ್ಕೆ ಬಂದಿದೆ.

India become No. 1 in T20Is after clean sweep over Australia

ಸಿಡ್ನಿ ಟಿ20 ಪಂದ್ಯದಲ್ಲಿ ಕೊನೆ ಓವರ್ ನಲ್ಲಿ ಆಂಡ್ರ್ಯೂ ಟೈ ಎಸೆತಗಳಲ್ಲಿ 17ರನ್ ಬೇಕಿತ್ತು. ರೈನಾ 25 ಎಸೆತಗಳಲ್ಲಿ 45ರನ್ ಚೆಚ್ಚಿ ಗೆಲುವು ತಂದು ಕೊಟ್ಟರು. ಶೇನ್ ವಾಟ್ಸನ್ ಅವ್ರು 71 ಎಸೆತಗಳಲ್ಲಿ 124ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ಪ್ರಯೋಜನಕ್ಕೆ ಬರಲಿಲ್ಲ.

ಜನವರಿ 31, 2016ರ ಅನ್ವಯ ಐಸಿಸಿ ಟಿ20ಐ ಶ್ರೇಯಾಂಕ ಪಟ್ಟಿ:

1. ಭಾರತ (120 ಅಂಕಗಳು)
2. ವೆಸ್ಟ್ ಇಂಡೀಸ್(118)
3. ಶ್ರೀಲಂಕಾ (118)
4. ಇಂಗ್ಲೆಂಡ್ (117)
5. ನ್ಯೂಜಿಲೆಂಡ್ (116)
6. ದಕ್ಷಿಣ ಆಫ್ರಿಕಾ (115)
7. ಪಾಕಿಸ್ತಾನ (113)
8. ಆಸ್ಟ್ರೇಲಿಯಾ (110)
9. ಆಫ್ಘಾನಿಸ್ತಾನ (80)
10. ಸ್ಕಾಟ್ಲೆಂಡ್(66)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India today became the number one side in the world in Twenty20 Internationals after making a 3-0 clean sweep over Australia in the third and final match here at the Sydney Cricket Ground (SCG).
Please Wait while comments are loading...