ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿ ಎಫೆಕ್ಟ್: ಪಾಕ್ ಶ್ರೇಯಾಂಕದಲ್ಲಿ ಏರಿಕೆ

ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಪಾಕಿಸ್ತಾನ. ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಗಳಲ್ಲಿ ಕ್ರಮವಾಗಿ ಇಂಗ್ಲೆಂಡ್, ಭಾರತ ಮಣಿಸಿದ್ದಕ್ಕೆ ಒಟ್ಟು 95 ಅಂಕಗಳನ್ನು ಪಡೆದ ಪಾಕಿಸ್ತಾನ.

ದುಬೈ, ಜೂನ್ 19: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಸೋಮವಾರ (ಜೂನ್ 19) ಬಿಡುಗಡೆಗೊಳಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ತಂಡ 6ನೇ ಸ್ಥಾನಕ್ಕೇರಿದೆ.

ಭಾನುವಾರ (ಜೂನ್ 18) ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ತನಗಿಂತಲೂ ಅಗ್ರ ಶ್ರೇಯಾಂಕ ಹೊಂದಿದ್ದ ಭಾರತ ತಂಡವನ್ನು ಸೋಲಿಸುವ ಮೂಲಕ ಪಾಕಿಸ್ತಾನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಕೊಹ್ಲಿ ಮಾತುಗಳನ್ನು ಮೆಚ್ಚಿಕೊಂಡ ಪಾಕಿಸ್ತಾನ ಜನತೆಕೊಹ್ಲಿ ಮಾತುಗಳನ್ನು ಮೆಚ್ಚಿಕೊಂಡ ಪಾಕಿಸ್ತಾನ ಜನತೆ

ICC ODI Team Rankings: Pakistan move to 6th after CT win, India 3rd

ಇದಲ್ಲದೆ, ಇದೇ ಟೂರ್ನಿಯ ಸೆಮಿಫೈನಲ್ ನಲ್ಲಿ ಶ್ರೇಯಾಂಕ ಪಟ್ಟಿಯ 2ನೇ ತಂಡವಾದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಹೀಗಾಗಿ, ಪಾಕಿಸ್ತಾನಕ್ಕೆ ಒಟ್ಟು 95 ಅಂಕಗಳು ಲಭ್ಯವಾಗಿದ್ದು, ಈ ಸಾಧನೆಯೇ ಆ ತಂಡವನ್ನು ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕೊಂಡೊಯ್ದಿದೆ.

ಇನ್ನು, ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಸೋತರೂ, ಭಾರತದ ಸ್ಥಾನ ಅಬಾಧಿತವಾಗಿದ್ದು, ಅದು ತಾನು ಹಿಂದೆ ಹೊಂದಿದ್ದ 3ನೇ ಸ್ಥಾನದಲ್ಲೇ ಮುಂದುವರಿದಿದೆ.

ಪಾಕಿಸ್ತಾನ ವಿರುದ್ಧ ಹೀನಾಯ ಸೋಲು: ಭಾರತ ಮಾಡಿದ 5 ತಪ್ಪುಗಳುಪಾಕಿಸ್ತಾನ ವಿರುದ್ಧ ಹೀನಾಯ ಸೋಲು: ಭಾರತ ಮಾಡಿದ 5 ತಪ್ಪುಗಳು

ನೂತನ ಶ್ರೇಯಾಂಕ ಪಟ್ಟಿ ಇಂತಿದೆ.

1. ದಕ್ಷಿಣ ಆಫ್ರಿಕಾ

2. ಆಸ್ಟ್ರೇಲಿಯಾ

3. ಭಾರತ

4. ಇಂಗ್ಲೆಂಡ್

5. ನ್ಯೂಜಿಲೆಂಡ್

6. ಪಾಕಿಸ್ತಾನ

7. ಬಾಂಗ್ಲಾದೇಶ

8. ಶ್ರೀಲಂಕಾ

9. ವೆಸ್ಟ್ ಇಂಡೀಸ್

10. ಆಫ್ಘಾನಿಸ್ತಾನ

11. ಜಿಂಬಾಬ್ವೆ

12. ಐರ್ಲೆಂಡ್

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X