ಐಸಿಸಿ ಶ್ರೇಯಾಂಕ : ಟೀಂ ಇಂಡಿಯಾ 3ನೇ ಸ್ಥಾನದಲ್ಲಿ ಸ್ಥಿರ

Posted By:
Subscribe to Oneindia Kannada

ದುಬೈ, ಸೆ. 24: ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ 3ನೇ ಸ್ಥಾನದಲ್ಲೇ ಮುಂದುವರೆದಿದೆ. ಭಾರತ 110 ಅಂಕ ಗಳಿಸಿದ್ದರೆ, 124 ಅಂಕಗಳೊಂದಿಗೆ ಆಸ್ಟ್ರೇಲಿಯಾ ಅಗ್ರ ಸ್ಥಾನದಲ್ಲಿದೆ. 113 ಅಂಕ ಪಡೆದಿರುವ ನ್ಯೂಜಿಲೆಂಡ್ ದ್ವಿತೀಯ ಸ್ಥಾನದಲ್ಲಿದೆ.

ಸದ್ಯ 4ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಜೊತೆ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 12ರವರೆಗೆ 5 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದ್ದು. ಇದರಲ್ಲಿ ಉತ್ತಮ ಪ್ರದರ್ಶನ ತೋರಿದರೆ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಸ್ಥಾನಕ್ಕೇರಲಿದೆ. 5 ಪಂದ್ಯಗಳ ಸರಣಿಯಲ್ಲಿ 4 ಪಂದ್ಯವನ್ನು ಗೆದ್ದರೂ ದಕ್ಷಿಣ ಆಫ್ರಿಕಾ 114 ಪಾಯಿಂಟ್ ಜೊತೆ ದ್ವಿತೀಯ ಸ್ಥಾನಕ್ಕೇರುವುದು ಖಚಿತ.

ICC ODI rankings: Team India remain third, Virat Kohli second in batting charts

ಏಕದಿನ ಬ್ಯಾಟಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 813 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 887 ಪಾಯಿಂಟ್ ಗಳೊಂದಿಗೆ ದಕ್ಷಿಣ ಆಫ್ರಿಕಾದ ಎ.ಬಿ.ಡಿ ವಿಲಿಯರ್ಸ್ ಪ್ರಥಮ ಸ್ಥಾನದಲ್ಲಿದ್ದರೆ, ಅದೇ ತಂಡದ ಹಾಶಿಂ ಆಮ್ಲ 778 ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ 7ನೇ ಸ್ಥಾನದಲ್ಲಿದ್ದರೆ, ಶಿಖರ್ ಧವನ್ 8ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ಹಾಗೂ ಆಲ್ ರೌಂಡರ್ ವಿಭಾಗದಲ್ಲಿ ಭಾರತದ ಯಾವ ಆಟಗಾರರೂ ಸ್ಥಾನ ಪಡೆದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India remained at third position while batting mainstay Virat Kohli held the second spot in the latest ICC ODI rankings released on September 23.
Please Wait while comments are loading...