ಏಕದಿನ ಶ್ರೇಯಾಂಕ: ಭಾರತವನ್ನು ಹಿಂದಿಕ್ಕಿದ ದಕ್ಷಿಣ ಆಫ್ರಿಕಾ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 19: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗುರುವಾರ ಹೊಸ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು, ಪಟ್ಟಿಯಲ್ಲಿ ಭಾರತ ತಂಡ 2ನೇ ಸ್ಥಾನಕ್ಕೆ ಕುಸಿದಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಐಸಿಸಿ ಶ್ರೇಯಾಂಕ ರೇಟಿಂಗ್ಸ್ ನಲ್ಲಿ ಸಮಬಲ ಸಾಧಿಸಿದ್ದು, ಎರಡೂ ತಂಡಗಳು ತಲಾ 120 ರೇಟಿಂಗ್ಸ್ ನ್ನು ಹೊಂದಿದೆ. ಆದರೆ, ಅಂಕಗಳಿಕೆಯಲ್ಲಿ ಭಾರತವನ್ನು ಹಿಂದಿಕ್ಕಿರುವ ದಕ್ಷಿಣ ಆಫ್ರಿಕಾ ತಂಡ ಒಟ್ಟು 6, 244 ಅಂಕಗಳೊಂದಿಗೆ ಆಗ್ರ ಸ್ಥಾನಕ್ಕೇರಿದೆ.

ICC ODI Rankings: South Africa reclaim top spot after win vs Bangladesh

ಎರಡನೇ ಸ್ಥಾನದಲ್ಲಿರುವ ಭಾರತ ಒಟ್ಟು 5,993 ಅಂಕಗಳನ್ನು ಹೊಂದಿದ್ದು 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಭಾರತ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ 5-1 ಅಂತರದಿಂದ ಸರಣಿ ಗೆದ್ದು ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತ್ತು.

ಪ್ರಸ್ತುತ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಉತ್ತಮ ಪ್ರದರ್ಶನ ತೋರುತ್ತಿರುವುದು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ನೆರವಾಗಿದೆ.

ಬುಧವಾರ ಬಾಂಗ್ಲಾ ವಿರುದ್ಧ ಆಫ್ರಿಕಾದ ಎಬಿಡಿ ವಿಲಿಯರ್ಸ್ ಕೇವಲ 104 ಎಸೆತಗಳಲ್ಲಿ ಬರೋಬ್ಬರಿ 176 ರನ್ ಗಳನ್ನು ಬಾರಿಸಿ ಮಿಂಚಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The South Africa cricket team clinched the no.1 spot in the ICC ODI ranking after beating Bangladesh on Oct 18th. The Team India india lose 2nd spot in the Rankings.
Please Wait while comments are loading...