ಐಸಿಸಿ ಶ್ರೇಯಾಂಕ: ದ.ಆಫ್ರಿಕಾಗೆ ಅಗ್ರಸ್ಥಾನ, ಭಾರತಕ್ಕೆ 4ನೇ ಸ್ಥಾನ

Written By: Ramesh
Subscribe to Oneindia Kannada

ದುಬೈ, ಫೆಬ್ರವರಿ. 12 : ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಏಕದಿನ ತಂಡಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದೆ.

ಈ ಮೊದಲು ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ದಕ್ಷಿಣ ಆಫ್ರಿಕಾ ತಂಡ ಕೇವಲ ನಾಲ್ಕು ಪಾಯಿಂಟ್ಸ್ ಗಳಿಂದ ಹಿಂದಿಕ್ಕಿದೆ. ನ್ಯೂಜಿಲೆಂಡ್ ವಿರುದ್ದದ ಸರಣಿ ಯಲ್ಲಿ ಆಸ್ಟ್ರೇಲಿಯಾ 0-2ರಲ್ಲಿ ಹಿನ್ನಡೆ ಅನುಭವಿಸಿದೆ. ಇದರಿಂದ ದಕ್ಷಿಣ ಆಫ್ರಿಕಾ 119 ಅಂಕಗಳನ್ನು ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡ ಗಳು ಕ್ರಮವಾಗಿ 118 ಮತ್ತು 113 ಅಂಕಗಳೊಂದಿಗೆ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ವಿರಾಟ್‌ ಕೊಹ್ಲಿನಾಯಕತ್ವದ ಟೀಂ ಇಂಡಿಯಾ 112 ಪಾಯಿಂಟ್ಸ್ ಗಳಿಂದ ನಾಲ್ಕನೇ ಸ್ಥಾನದಲ್ಲಿದೆ.

ICC ODI Rankings: South Africa reclaim No. 1 spot; India 4th

ತಮ್ಮ ತಂಡ ಅಗ್ರಸ್ಥಾನಕ್ಕೇರಿರುವ ಬಗ್ಗೆ ಪ್ರತಿಕ್ರಿಯಿಸಿರುವ ಎಬಿಡಿ ವಿಲಿಯರ್ಸ್, 'ನಮ್ಮ ತಂಡ ಏಕದಿನ ರಾಕಿಂಗ್ ನಲ್ಲಿ ಅಗ್ರಸ್ಥಾನಕ್ಕೆ ಮರಳುವ ಪ್ರಯತ್ನದಲ್ಲಿದೆ.

ಇದಕ್ಕಾಗಿ ಸಾಕಷ್ಟು ಪರಿಶ್ರಮ ಹಾಕಬೇಕು. ನ್ಯೂಜಿಲೆಂಡ್ ತಂಡವನ್ನು ಮೊದಲ ಸ್ಥಾನದಲ್ಲಿ ನೋಡಲು ಉತ್ಸುಕನಾಗಿದ್ದೇನೆ' ಎಂದು ಹೇಳಿದ್ದಾರೆ.

ಟಾಪ್ 10 ತಂಡಗಳ ಅಂಕಗಳು
1. ದಕ್ಷಿಣ ಆಫ್ರಿಕಾ 119
2. ಆಸ್ಟ್ರೇಲಿಯಾ 118
3. ನ್ಯೂಜಿಲೆಂಡ್ 113
4. ಭಾರತ 112
5. ಇಂಗ್ಲೆಂಡ್ 107
6. ಶ್ರೀಲಂಕಾ 98
7. ಭಾಂಗ್ಲದೇಶ 91
8. ಪಾಕಿಸ್ತಾನ 89
9. ವೆಸ್ಟ್ ಇಂಡೀಸ್ 87
10. ಅಪಘಾನಿಸ್ತಾನ 52

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Africa have returned to the top of the ICC ODI Team Rankings after sweeping aside Sri Lanka 5-0 at Centurion on Friday (February 10). India are at 4th position.
Please Wait while comments are loading...