ಕ್ರಿಕೆಟ್ ನಲ್ಲಿ ಇನ್ಮುಂದೆ ಹೆಲ್ಮೆಟ್ ಧರಿಸುವುದು ಕಡ್ಡಾಯ

Posted By:
Subscribe to Oneindia Kannada

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಐಸಿಸಿ ಹೊಸ ನಿಯಮ ಜಾರಿಗೆ ತಂದಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬ್ಯಾಟ್ಸ್​ಮನ್​ಗಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಮಹಿಳಾ ಕ್ರಿಕೆಟ್​ಗೂ ಇದು ಅನ್ವಯವಾಗಲಿದೆ.

ಈ ಹೊಸ ನಿಯಮವನ್ನು ಜನವರಿ 1ರಂದೇ ಐಸಿಸಿಯ ವಸ್ತ್ರಸಂಹಿತೆ ನಿಬಂಧನೆಯಲ್ಲಿ ಅಳವಡಿಸಲಾಗಿದ್ದು, ಫೆಬ್ರವರಿ 1ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರನ್ವಯ ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿರಲಿದೆ. ಅಲ್ಲದೆ ಈ ಹೆಲ್ಮೆಟ್ ಹೊಸ ಬ್ರಿಟಿಷ್ ಸ್ಟ್ಯಾಂಡರ್ಡ್ ನಿಬಂಧನೆಗಳಿಗೆ ಒಳಪಟ್ಟಿರುವುದು ಕೂಡ ಕಡ್ಡಾಯವಾಗಿದೆ.

ICC introduces new helmet regulations for cricketers

ಎಲ್ಲ ಬ್ಯಾಟ್ಸ್​ಮನ್​ಗಳು ಹೆಲ್ಮೆಟ್ ಧರಿಸುವ ಮೂಲಕ ಸುರಕ್ಷಿತವಾಗಿರ ಬೇಕೆಂಬುದು ಈ ನಿಯಮ ಜಾರಿಗೆ ಕಾರಣ ಎಂದು ಐಸಿಸಿ ಜನರಲ್ ಮ್ಯಾನೇಜರ್ (ಕ್ರಿಕೆಟ್) ಜೆಫ್ ಅಲ್ಲರ್​ಡೈಸ್ ತಿಳಿಸಿದ್ದಾರೆ. ಕಳೆದ ವರ್ಷ ಜೂನ್​ನಲ್ಲಿ ಐಸಿಸಿ ಕ್ರಿಕೆಟ್ ಸಮಿತಿ ಹೆಲ್ಮೆಟ್ ಕಡ್ಡಾಯಗೊಳಿಸುವ ಬಗ್ಗೆ ಶಿಫಾರಸು ಸಲ್ಲಿಸಿತ್ತು.

ನಿಯಮ ಪಾಲಿಸದಿದ್ದರೆ ನಿಷೇಧ:
'ಹೆಲ್ಮೆಟ್ ಕಡ್ಡಾಯ' ನಿಯಮವನ್ನು ಬ್ಯಾಟ್ಸ್​ಮನ್ ಪಾಲಿಸದಿದ್ದರೆ ಶಿಕ್ಷೆಯನ್ನೂ ವಿಧಿಸಲಾಗುವುದು. ಫೆ. 1ರ ನಂತರ ಬ್ಯಾಟ್ಸ್ ಮನ್ ಮೊದಲ 2 ಪಂದ್ಯಗಳ ವೇಳೆ ಈ ನಿಯಮ ಪಾಲಿಸದೇ ಇದ್ದಾಗ ಎಚ್ಚರಿಕೆ ನೀಡಲಾಗುವುದು. ನಂತರ 3ನೇ ಬಾರಿ ಈ ನಿಯಮ ಉಲ್ಲಂಘಿಸಿದಾಗ 1 ಪಂದ್ಯ ನಿಷೇಧ ಶಿಕ್ಷೆ ವಿಧಿಸಲಾಗುವುದು ಎಂದು ಐಸಿಸಿ ತಿಳಿಸಿದೆ. 2014ರ ನವೆಂಬರ್​ನಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ಫಿಲ್ ಹ್ಯೂಸ್ ಬೌನ್ಸರ್​ನಲ್ಲಿ ಚೆಂಡೇಟು ತಿಂದು ಮೃತಪಟ್ಟ ಬಳಿಕ ಕ್ರಿಕೆಟ್​ನಲ್ಲಿ ಸುರಕ್ಷತೆಯ ಕಾಳಜಿ ಹೆಚ್ಚಾಗಿರುವುದು ಗಮನಾರ್ಹ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The International Cricket Council (ICC) on Sunday (Jan 15) announced the introduction of new regulations that make it compulsory for batsmen to wear helmets which adhere to the highest safety standards when electing to wear a helmet in men's and women's international matches.
Please Wait while comments are loading...