ವಿಶ್ವ ಟಿ20 ಇನ್ಮುಂದೆ 2 ವರ್ಷಕ್ಕೊಮ್ಮೆ ಆಯೋಜನೆ ಪಕ್ಕಾ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ದುಬೈ, ಮೇ 27: 4 ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್ ಟಿ20 ಟೂರ್ನಿಯನ್ನು ಇನ್ನು ಮುಂದೆ ಖಂಡಿತವಾಗಿಯೂ 2 ವರ್ಷಕ್ಕೊಮ್ಮೆ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಚಿಂತನೆ ನಡೆಸಿದೆ. ಐಸಿಸಿ ವೇಳಾಪಟ್ಟಿ ಪ್ರಕಾರ ಮುಂದಿನ ಟಿ20 ವಿಶ್ವಕಪ್ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದೆ.

2 ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ಆಯೋಜಿಸಲು ಐಸಿಸಿ ಮುಂದಾದರೆ 2018 ರ ವಿಶ್ವ ಟ್ವೆಂಟಿ20 ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಬೇಕು ಎನ್ನುವ ಬಗ್ಗೆ ಐಸಿಸಿ ಚಿಂತನೆ ನಡೆಸಿದೆ.

2018 ರ ವಿಶ್ವ ಟಿ-20 ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಆಫ್ರಿಕಾ ಕ್ರಿಕೆಟ್ ಬೋರ್ಡ್ (ಸಿಎಸ್ ಎ)ಬಳಿ ಐಸಿಸಿ ಚರ್ಚೆ ನಡೆಸಿವೆ ಎನ್ನಲಾಗಿದೆ. 2007 ರಲ್ಲಿ ಮೊದಲ ಅಂತಾರಾಷ್ಟ್ರೀಯ ಟಿ-20 ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು.

ICC hopeful of World T20 return in 2018

2016 ರ ವಿಶ್ವ ಕಪ್ ಭಾರತದಲ್ಲಿ ಯಶಸ್ವಿಯಾಗಿ ನಡೆದ ಬೆನ್ನಲ್ಲಿಯೇ 2 ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ನಡೆಸುವ ನಿರ್ಧಾರಕ್ಕೆ ಐಸಿಸಿ ಬಂದಿದೆ. ಭಾರತದಲ್ಲಿ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ವಿಶ್ವ ಟಿ-20 2016 ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧ ಭಾರತ ಆಡಿದ ಪಂದ್ಯಗಳನ್ನು ಹಾಗೂ ಸೆಮಿಫೈನಲ್ ಪಂದ್ಯವನ್ನು 8 ಮಿಲಿಯನ್ ಜನ ವೀಕ್ಷಿಸಿದ್ದರು.

2016 ಟೂರ್ನಿಯ ದೃಶ್ಯವಾಳಿಗಳನ್ನು 750 ಕೋಟಿಗೂ ಅಧಿಕ ಜನರು ಆನ್ ಲೈನ್ ನಲ್ಲಿ ವೀಕ್ಷಿಸಿದ್ದಾರೆ. 2015ರ ಏಕದಿನ ವಿಶ್ವಕಪ್ ವೇಳೆ 25೦ ಮಿಲಿಯನ್ ಜನರು ಆನ್ ಲೈನ್ ನಲ್ಲಿ ಪಂದ್ಯಗಳನ್ನು ವೀಕ್ಷಣೆ ಮಾಡಿದ್ದರು ಎಂದು ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ICC will take a further step towards ensuring the World Twenty20 returns in 2018 when senior figures meet with Star Sports later today. South Africa is believed to be the preferred option to host the 2018 WT20,
Please Wait while comments are loading...