ಭಾರತವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ

Posted By:
Subscribe to Oneindia Kannada

ಲಂಡನ್, ಜೂನ್ 18: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಟೂರ್ನಮೆಂಟ್ ನ ಅಂತಿಮ ಹಣಾಹಣಿ ಆರಂಭವಾಗಿದೆ. ಭಾನುವಾರ(ಜೂನ್ 18)ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಸಮರದ ವರದಿ ಇಲ್ಲಿದೆ...ಭಾರತವನ್ನು ಸೋಲಿಸಿ ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿ ಗೆದ್ದು ಸಂಭ್ರಮಿಸಿದೆ.

ಚಾಂಪಿಯನ್ಸ್ ಟ್ರೋಫಿ : ಗ್ಯಾಲರಿ

ಟೀಂ ಇಂಡಿಯಾ ಚೇಸಿಂಗ್ :

* ರೋಹಿತ್ ಶರ್ಮ 0, ವಿರಾಟ್ ಕೊಹ್ಲಿ 5, ಎಂಎಸ್ ಧೋನಿ 4, ಕೇಧಾರ್ ಜಾಧವ್ 9ರನ್ ಗಳಿಸಿ ವೈಫಲ್ಯ್
* ಶಿಖರ್ ಧವನ್ 21ರನ್ ಗಳಿಸಿ ಮೊಹಮ್ಮದ್ ಅಮೀರ್ ಗೆ ವಿಕೆಟ್ ಒಪ್ಪಿಸಿದರು.
* ಯುವರಾಜ್ ಸಿಂಗ್ 22ರನ್ ಗಳಿಸಿ ಶಾಬಾದ್ ಖಾನ್ ಗೆ ಎಲ್ ಬಿ
* ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 43 ಎಸೆತಗಳಲ್ಲಿ 76ರನ್(4 ಬೌಂಡರಿ, 6 ಸಿಕ್ಸರ್) ಬಾರಿಸಿ ಉತ್ತಮ ಹೋರಾಟ, ರವೀಂದ್ರ ಜಡೇಜರಿಂದ ಆದ ಪ್ರಮಾದಕ್ಕೆ ರನೌಟ್ .
* ಜಡೇಜ 15ರನ್ ಗಳಿಸಿ ಜುನೈದ್ ಖಾನ್ ಗೆ ವಿಕೆಟ್ ಒಪ್ಪಿಸಿದರು.

ಪಾಕಿಸ್ತಾನ ಇನ್ನಿಂಗ್ಸ್ :
* ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆಲ್ಲಲು ಭಾರತಕ್ಕೆ 339 ರನ್ ಟಾರ್ಗೆಟ್
* ಭಾರತ ವಿರುದ್ಧ 50 ಓವರ್ ಗಳಲ್ಲಿ ಪಾಕಿಸ್ತಾನ 338/4 ಸ್ಕೋರ್
* ಫಖಾರ್ ಜಮಾನ್ ಆಕರ್ಷಕ ಶತಕ, ಹಫೀಜ್ 57, ಅಜರ್ ಅಲಿ 59, ಬಾಬರ್ 46 ಉಪಯುಕ್ತ ಆಟ
* 112ರನ್ ಗಳಿಸಿ ಫಖಾರ್ ಜಮಾನ್ ಔಟ್.

ಟ್ವಿಟ್ಟರಲ್ಲಿ ಕ್ರಿಕೆಟ್ ಹುಚ್ಚು : ಭಾರತ-ಪಾಕ್ ಪಂದ್ಯ ಅಚ್ಚು ಮೆಚ್ಚು!

* ಚೊಚ್ಚಲ ಶತಕ ಸಿಡಿಸಿದ ಪಾಕಿಸ್ತಾನ ಫಖಾರ್ ಜಮಾನ್ 92 ಎಸೆತಗಳಲ್ಲಿ 100 ರನ್ ಸಿಡಿಸಿದ್ದಾರೆ. ಬೂಮ್ರಾ ಬೌಲಿಂಗ್ ನಲ್ಲಿ ಜೀವದಾನ ಪಡೆದಿದ್ದ ಜಮಾನ್.
* 71 ಎಸೆತಗಳಲ್ಲಿ 59ರನ್ ಗಳಿಸಿದ್ದ ಅಜರ್ ಅಲಿ ರನೌಟ್
* 23 ಓವರ್ ಗಳಲ್ಲಿ ಸ್ಕೋರ್ 128 ರನ್ ಆಗಿದ್ದಾಗ ಔಟ್
* 5 ಓವರ್ ಗಳಲ್ಲಿ 27ರನ್ ಗಳಿಸಿದೆ (ಫಖಾರ್ ಜಮಾನ್ 12, ಅಜರ್ ಅಲಿ 7)
* ಬೂಮ್ರಾ ಓವರ್ ನಲ್ಲಿ ಕ್ಯಾಚಿತ್ತು ಔಟಾಗಿದ್ದ ಜಮಾನ್ ಗೆ ಜೀವದಾನ ಸಿಕ್ಕಿದೆ. ಬೂಮ್ರಾ ನೋಬಾಲ್ ಮಾಡಿದ್ದಾರೆ.
* ಮೊದಲ ಓವರ್ ಮೇಡನ್ ಎಸೆದ ಭುವನೇಶ್ವರ್ ಕುಮಾರ್.

ಆಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಆಯೋಜನೆಯ ಟೂರ್ನಮೆಂಟ್ ನಲ್ಲಿ ಎರಡನೇ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ.

ಅಸಲಿ ಯುವರಾಜನನ್ನು ಪತ್ತೆ ಹಚ್ಚಿ ನೋಡೋಣ!

ಟಾಸ್ ವರದಿ: ಪಾಕಿಸ್ತಾನ ನಾಯಕ ಸರ್ಫರಾಜ್ ಅಹ್ಮದ್ ಕಾಯಿನ್ ಸ್ಪಿನ್ ಮಾಡಿದರು. ಕೊಹ್ಲಿ ಹೆಡ್ ಎಂದು ಹೇಳಿ, ಟಾಸ್ ಗೆದ್ದು, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ICC Champions Trophy Final: Unchanged India invite Pakistan to bat first

ಇದಕ್ಕೂ ಮುನ್ನ 2007ರಲ್ಲಿ ವಿಶ್ವ ಟಿ20 ಚಾಂಪಿಯನ್ಸ್ ನ ಉದ್ಘಾಟನಾ ಟೂರ್ನಮೆಂಟ್ ನಲ್ಲಿ ಸೆಣಸಾಡಿದ್ದವು. ಆ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ರೋಚಕ ಜಯ ದಾಖಲಿಸಿತ್ತು.

ಯುವರಾಜ್ ಸಾಧನೆ:

ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ, ಸತತ ಎರಡನೇ ಬಾರಿಗೆ ಫೈನಲ್ ತಲುಪಿದೆ. 2013ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಭಾರತ ಕಪ್ ಎತ್ತಿತ್ತು.

ತಂಡ ಇಂತಿದೆ:

ಲೈವ್ ಪ್ರಸಾರ: ಸ್ಟಾರ್ ಸ್ಫೋರ್ಟ್ ನೆಟ್ವರ್ಕ್ (ಹಿಂದಿ, ತಮಿಳು ಭಾಷೆಯಲ್ಲೂ ಕಾಮೆಂಟ್ರಿ ಲಭ್ಯ), ದೂರದರ್ಶನ, ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲೂ ಪಂದ್ಯ ವೀಕ್ಷಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ICC Champions Trophy Final: All-round Pakistan rout India by 180 runs to lift Champions Trophy 2017 here on Sunday (June 18)
Please Wait while comments are loading...