ಭಾರತ-ಪಾಕ್ ಸಮರದ ಕಾಮೆಂಟ್ರಿ ಕನ್ನಡದಲ್ಲೇಕಿಲ್ಲ?

Posted By:
Subscribe to Oneindia Kannada

ಲಂಡನ್, ಜೂನ್ 16: ಐಸಿಸಿ ಚಾಂಪಿಯನ್ಸ್ ಟ್ರೋಫಿ ರೋಚಕ ಅಂತ್ಯಕ್ಕೆ ಸಿದ್ಧವಾಗುತ್ತಿದೆ. ಭಾನುವಾರ(ಜೂನ್ 18)ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಸಮರದ ಕಾಮೆಂಟ್ರಿಯನ್ನು ಹಿಂದಿಯಲ್ಲದೆ ತಮಿಳು ಭಾಷೆಯಲ್ಲೂ ಪಡೆಯಬಹುದಾಗಿದೆ. ಆದರೆ, ಕನ್ನಡಿಗರಿಗೆ ಮಾತ್ರ ಈ ಸೌಲಭ್ಯವನ್ನು ಸ್ಟಾರ್ ನೆಟ್ವರ್ಕ್ ಕೊಟ್ಟಿಲ್ಲ. ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ ಪಂದ್ಯದ ಬಗ್ಗೆ ಮಾಹಿತಿ ಇಲ್ಲಿದೆ...

ಆಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಆಯೋಜನೆಯ ಟೂರ್ನಮೆಂಟ್ ನಲ್ಲಿ ಎರಡನೇ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ. ಇದಕ್ಕೂ ಮುನ್ನ 2007ರಲ್ಲಿ ವಿಶ್ವ ಟಿ20 ಚಾಂಪಿಯನ್ಸ್ ನ ಉದ್ಘಾಟನಾ ಟೂರ್ನಮೆಂಟ್ ನಲ್ಲಿ ಸೆಣಸಾಡಿದ್ದವು. ಆ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ರೋಚಕ ಜಯ ದಾಖಲಿಸಿತ್ತು.

ಕೊಹ್ಲಿ ನಾಲಗೆ ಹೊರಹಾಕಿ ಸಂಭ್ರಮಿಸಿದ್ದಕ್ಕೆ ಏನರ್ಥ?

ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ, ಸತತ ಎರಡನೇ ಬಾರಿಗೆ ಫೈನಲ್ ತಲುಪಿದೆ. 2013ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಭಾರತ ಕಪ್ ಎತ್ತಿತ್ತು.

ಇನ್ನೊಂದೆಡೆ ಪಾಕಿಸ್ತಾನ,ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದೆ. ಈ ಟೂರ್ನಿಯ ಫೇವರೀಟ್ ಎನಿಸಿದ್ದ ಅತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಸರ್ಫರಾಜ್ ಅಹ್ಮದ್ ಪಡೆ ಅಂತಿಮ ಹಂತಕ್ಕೇರಿದೆ.

ICC Champions Trophy final: India Vs Pakistan: Schedule, Venue, TV and Live streaming info

50 ಓವರ್ ಗಳ ಟೂರ್ನಮೆಂಟ್ ಪೈಕಿ 1999ರ ವಿಶ್ವಕಪ್ ನಲ್ಲಿ ಕೊನೆ ಬಾರಿ ಪಾಕಿಸ್ತಾನ ಫೈನಲ್ ಗೇರಿತ್ತು. ಆಸ್ಟ್ರೇಲಿಯಾದ ವಿರುದ್ಧ ಪಾಕಿಸ್ತಾನ ಸೋಲು ಕಂಡಿತ್ತು.

ಪಂದ್ಯದಲ್ಲಿನ ಗೆಲುವಿಗೆ ಧೋನಿ ನೀಡಿದ ಆ ಸಲಹೆಯೇ ಕಾರಣ: ಕೊಹ್ಲಿ

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್ ಬಗ್ಗೆ ವಿವರ:

* ಜೂನ್ 18 (ಭಾನುವಾರ)- ಫೈನಲ್ - 3PM IST(10.30 AM Local, 9.30 AM GMT)- ದಿ ಓವಲ್, ಲಂಡನ್.
*ಲೈವ್ ಪ್ರಸಾರ: ಸ್ಟಾರ್ ಸ್ಫೋರ್ಟ್ ನೆಟ್ವರ್ಕ್ (ಹಿಂದಿ, ತಮಿಳು ಭಾಷೆಯಲ್ಲೂ ಕಾಮೆಂಟ್ರಿ ಲಭ್ಯ), ದೂರದರ್ಶನ, ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲೂ ಪಂದ್ಯ ವೀಕ್ಷಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defending Champions India decimated Bangladesh in the semi-final to set up summit clash with arch-rivals Pakistan in the ICC Champions Trophy 2017.
Please Wait while comments are loading...