ಟ್ವಿಟ್ಟರಲ್ಲಿ ಕ್ರಿಕೆಟ್ ಹುಚ್ಚು : ಭಾರತ-ಪಾಕ್ ಪಂದ್ಯ ಅಚ್ಚು ಮೆಚ್ಚು!

Posted By:
Subscribe to Oneindia Kannada

ಲಂಡನ್, ಜೂನ್ 18: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ನ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇಂಗ್ಲೆಂಡಿನ ಒವಲ್ ನಲ್ಲಿ ಜೂನ್ 18ರಂದು ಸಣಸುತ್ತಿದೆ.

ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ, ಆದರೆ ಅಭಿಮಾನಿಗಳ ಕ್ರೇಜ್ ಮುಗಿಲು ಮುಟ್ಟಿದೆ. ಟ್ವಿಟ್ಟರ್ ನಲ್ಲಿ ವಿವಿಧ ರೀತಿಯ ಟ್ವೀಟ್ ಬರುತ್ತಿವೆ. ಭಾರತ ಮತ್ತೊಮ್ಮೆ ಚಾಂಪಿಯನ್ ಆಗಲಿ ಎಂದು ಯೋಧರು, ಮಾಜಿ ಕ್ರಿಕೆಟರ್ಸ್, ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಸುಮಾರು ಹತ್ತು ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಆಯೋಜನೆಯ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ. 2013ರಲ್ಲಿ ಧೋನಿ ಪಡೆ ಮಾಡಿದ ಮ್ಯಾಜಿಕ್ ಮತ್ತೊಮ್ಮೆ ವಿರಾಟ್ ಕೊಹ್ಲಿ ಪಡೆ ನೀಡಲಿದೆ ಎಂಬ ಆಶಯ ಎಲ್ಲಾ ಭಾರತೀಯ ಅಭಿಮಾನಿಗಳಲ್ಲಿದೆ.

ವಾರಣಾಸಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಭಾರತದ ಗೆಲುವಿಗಾಗಿ ಪೂಜೆ ಪುನಸ್ಕಾರ ನಡೆದಿದೆ. ಜಮ್ಮು ಕಾಶ್ಮೀರದ ಗಡಿಯ ಆರ್‌ಎಸ್‌ ಪುರದಲ್ಲಿ ಯೋಧರು ಭಾರತ ವಿಜಯಶಾಲಿಯಾಗಲಿ ಎಂದು ಶುಭಹಾರೈಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಕೆಟ್ ಕ್ರೇಜ್ ಮುಗಿಲು ಮುಟ್ಟಿದೆ.

ಅಭಿಮಾನಿಳು ಹೇರ್ ಕಟ್

ಅಭಿಮಾನಿಳು ಹೇರ್ ಕಟ್

ಫೈನಲ್‌ ಹಣಾಹಣಿಯಲ್ಲಿ ಭಾರತ ವಿಜಯಶಾಲಿಯಾಗಲಿ ಎಂದು ಅಭಿಮಾನಿಳು ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದಾರೆ.

ಕೋಲ್ಕತ್ತಾದಲ್ಲಿ

ಕೋಲ್ಕತ್ತಾದಲ್ಲಿ

ಕೋಲ್ಕತ್ತಾದಲ್ಲಿ ಬೃಹತ್ ಗಾತ್ರದ ತ್ರಿವರ್ಣ ಧ್ವಜವನ್ನು ಮೆರವಣಿಗೆ ಮಾಡಿ, ಕ್ರಿಕೆಟ್ ಕ್ರೇಜ್ ಹೆಚ್ಚಿಸಲಾಯಿತು.

ಭಾರತಕ್ಕೆ ಶುಭ ಹಾರೈಕೆ

ಭಾರತಕ್ಕೆ ಶುಭ ಹಾರೈಕೆ

'ಗುಡ್ ಲಕ್ ಇಂಡಿಯಾ' ಎಂದು ಭಾರತ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿ ಪೋಸ್ ಕೊಟ್ಟಿರುವ ಕುಟುಂಬ.

ಅಲಹಾಬಾದ್

ಅಲಹಾಬಾದ್

ಅಲಹಾಬಾದಿನ ಮದನ್ ಮೋಹನ್ ಮಾಳವೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಸ್ಥಳೀಯ ಕ್ರೀಡಾಪಟುಗಳು ಟೀಂ ಇಂಡಿಯಾಕ್ಕೆ ಶುಭ ಹಾರೈಸಿದ್ದು ಹೀಗೆ...

ಯೋಧರಿಂದ ಶುಭ ಹಾರೈಕೆ

ಜಮ್ಮು ಕಾಶ್ಮೀರದ ಗಡಿಯ ಆರ್‌ಎಸ್‌ ಪುರದಲ್ಲಿ ಯೋಧರು ನೃತ್ಯ ಮಾಡಿ ಸಂಭ್ರಮಿಸಿ, ಭಾರತ ವಿಜಯಶಾಲಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ವಾರಣಾಸಿಯಲ್ಲಿ ಪೂಜೆ

ವಾರಣಾಸಿಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಭಾರತ ಗೆಲುವು ಸಾಧಿಸಲಿ ಎಂದು ಪೂಜೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ICC Champions Trophy Final 2017 : Cricket enthusiasts here are anxiously waiting for the battle of battles - the ICC Champions Trophy final between India and Pakistan - scheduled for today. Here are the India vs Pakistan Twitter reactions
Please Wait while comments are loading...