2017ರ ಚಾಂಪಿಯನ್ಸ್ ಟ್ರೋಫಿಗೆ ಟಿಕೆಟ್ ಗಳನ್ನು ಕಾಯ್ದಿರಿಸಿ

By: ಕ್ರೀಡಾ ಡೆಸ್ಕ್
Subscribe to Oneindia Kannada

ದುಬೈ ಸೆಪ್ಟೆಂಬರ್, 02 : 2017 ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಈಗಿನಿಂದಲೇ ಟಿಕೆಟ್ ಗಾಗಿ ಐಸಿಸಿ ಆನ್ ಲೈನ್ ನಲ್ಲಿ ಅರ್ಜಿ ಅಹ್ವಾನಿಸಿದೆ. ಮುಂದಿನ ವರ್ಷ ಜೂನ್ 1 ರಿಂದ 18ರ ವರೆಗೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಈ ಟೂರ್ನಿಯ ಪಂದ್ಯಗಳ ಟಿಕೆಟ್ ಗಳನ್ನು ಕಾಯ್ದಿರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ www.icc-cricket.com ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.

ಟೆಕೆಟ್ ಕಾಯ್ದಿರಿಸಲು ಸೆ.01 ರಿಂದ www.icc-cricket.com ವೆಬ್ ಸೈಟ್ ನಲ್ಲಿ ಆರಂಭವಾಗಿದ್ದು ಸೆ.30ರ ವರೆಗೆ ಟೆಕೆಟ್ ಗಾಗಿ ಅರ್ಜಿ ಸಲ್ಲಿಸಬಹುದು ಎಂದು ಐಸಿಸಿ ತಿಳಿಸಿದೆ. ಈ ಟೂರ್ನಿಯಲ್ಲಿ 15 ಲೀಗ್‌ ಪಂದ್ಯಗಳು ನಡೆಯಲಿದ್ದು, ಒಬ್ಬ ಅರ್ಜಿದಾರನಿಗೆ ಪಂದ್ಯದಗಳ ಅನುಗುಣವಾಗಿ 4 ರಿಂದ 10 ಟಿಕೆಟ್ ಗಳನ್ನು ನೀಡಲಾಗುತ್ತದೆ. ಮಕ್ಕಳಿಗೆ £5 ವಯಸ್ಕರರಿಗೆ £20 ದರವನ್ನು ಐಸಿಸಿ ನಿಗದಿಪಡಿಸಿದೆ.

 ICC Champions Trophy 2017 ticket ballot opens; India-Pakistan match on June 4

ಇನ್ನು ಟೂರ್ನಿ ಪ್ರಾರಂಭವಾಗುವ 9 ತಿಂಗಳು ಮುಂಚಿತವಾಗಿಯೇ ಟಿಕೆಟ್ ಗಳಿಗೆ ಅರ್ಜಿ ಅಹ್ವಾಸಿರುವುದು ವಿಶೇಷ. ವಿಶ್ವ ಕ್ರಿಕೆಟ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಎನ್ನುವುದೊಂದು ದೊಡ್ಡ ಟೂರ್ನಿಯಾಗಿದೆ. 2013ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಯಶಸ್ವಿ ಕಂಡಿದೆ. ಈಗ 2017 ರ ಪಂದ್ಯವಳಿಗಳನ್ನು ಕ್ರಿಕೆಟ್ ಅಭಿಮಾನಿಗಳು ಎದುರುನೋಡುತ್ತಿದ್ದಾರೆಂದು ಐಸಿಸಿ ಮುಖ್ಯ ಕಾರ್ಯನಿರ್ವಹಕ ಡೇವಿಡ್ ರಿಚಾರ್ಡ್ ಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಟೂರ್ನಿಯಲ್ಲಿ 8 ತಂಡಗಳು 15 ಪಂದ್ಯಗಳನ್ನು ಆಡಲಿವೆ. 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ಈ ಪಂದ್ಯಗಳು ನಡೆಯಲಿವೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The International Cricket Council (ICC) has announced that the ticket ballot for next year's ICC Champions Trophy 2017, to be staged in England and Wales from 1-18 June, opens today (September 1) (not before 10 AM BST, 2.30 PM IST) giving cricket fans the opportunity to apply to watch one of the 15 games. Tickets prices start at just £5 for children and £20 for adults.
Please Wait while comments are loading...