ಚಾಂಪಿಯನ್ಸ್ ಟ್ರೋಫಿ: ಬಾಂಗ್ಲಾವನ್ನು ಬಗ್ಗುಬಡಿದ ಭಾರತ ಫೈನಲಿಗೆ

Posted By:
Subscribe to Oneindia Kannada

ಲಂಡನ್, ಜೂನ್ 15: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿಂದು ಬರ್ಮಿಂಗ್ ಹ್ಯಾಮ್ ನಲ್ಲಿ ಬಾಂಗ್ಲಾವನ್ನುಬಗ್ಗುಬಡಿದ ಭಾರತ, ಫೈನಲ್ ತಲುಪಿದೆ.

ಟಾಸ್ ಗೆದ್ದ ಭಾರತ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು, ಬಾಂಗ್ಲಾದೇಶವನ್ನು 264/7 ಸ್ಕೋರಿಗೆ ನಿಯಂತ್ರಿಸಿತು. ನಂತರ ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಮುಟ್ಟಿ ಜಯಭೇರಿ ಬಾರಿಸಿತು.

ಚಾಂಪಿಯನ್ಸ್ ಟ್ರೋಫಿ : ಗ್ಯಾಲರಿ

ಟೀಂ ಇಂಡಿಯಾ ಇನ್ನಿಂಗ್ಸ್:
* ಚಾಂಪಿಯನ್ಸ್ ಟ್ರೋಫಿಯಲ್ಲಿ ಚೊಚ್ಚಲ ಶತಕ, ವೃತ್ತಿ ಬದುಕಿನ 11ನೇ ಹಾಗೂ ಬಾಂಗ್ಲಾದೇಶ ವಿರುದ್ಧ 2ನೇ ಶತಕ ಸಿಡಿಸಿದ ರೋಹಿತ್ ಶರ್ಮ.
* 46 ರನ್ ಗಳಿಸಿ ಶಿಖರ್ ಧವನ್ ಔಟಾಗಿದ್ದಾರೆ.
* ನಾಯಕ ವಿರಾಟ್ ಕೊಹ್ಲಿ 78 ಎಸೆತಗಳಲ್ಲಿ 96ರನ್ (13 ಬೌಂಡರಿ) ಬಾರಿಸಿದರು.
* 40.1 ಓವರ್ ಗಳಲ್ಲಿ 265/1 ಸ್ಕೋರ್ ಮಾಡಿದ ಭಾರತ ಫೈನಲ್ ತಲುಪಿದೆ.
* ಜೂನ್ 18ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್ ನಡೆಯಲಿದೆ.


ಬಾಂಗ್ಲಾ ಇನ್ನಿಂಗ್ಸ್ :
* ತಮೀಮ್ ಇಕ್ಬಾಲ್ ತಮ್ಮ ಅದ್ಭುತ ಲಯ ಮುಂದುವರೆಸಿ 82 ಎಸೆತಗಳಲ್ಲಿ 70ರನ್ ಗಳಿಸಿದರು.
* ಮುಷ್ಪಿಕರ್ ರಹೀಮ್ 61, ನಾಯಕ ಮೊರ್ತಜಾ 30ರನ್(25 ಎಸೆತಗಳು) ಗಳಿಸಿ ರನ್ ಗತಿ ಹೆಚ್ಚಿಸಿದರು.
* ಭಾರತದ ಪರ ಕೇದಾರ್ ಜಾಧವ್ 2/22, ಜಸ್ ಪ್ರೀತ್ ಬೂಮ್ರಾ 2/39, ಭುವನೇಶ್ವರ್ ಕುಮಾರ್ 2/53 ಗಳಿಸಿದರು.
ಟಾಸ್ ಆದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಒಂದು ವೇಳೆ ಮಳೆ ಬಿದ್ದು ಪಂದ್ಯ ಸಂಪೂರ್ಣವಾಗಿ ರದ್ದಾದರೆ ಭಾರತ ಫೈನಲ್ ತಲುಪಲಿದೆ.

ಈ ಪಂದ್ಯಕ್ಕೆ ಬದಲಿ ದಿನವನ್ನು ನಿಗದಿ ಪಡಿಸಿಲ್ಲ. ಅಲ್ಲದೇ, ಐಸಿಸಿ ನಿಯಮದ ಪ್ರಕಾರ ಲೀಗ್ ಹಂತದಲ್ಲಿ ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿರುವ ಭಾರತ ಸಹಜವಾಗಿ ಫೈನಲಿಗೆ ಅರ್ಹತೆ ಪಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India beat Bangladesh by 9 wickets in the second semi-final of the Champions Trophy 2017 here on Thursday (June 15). India now set up summit clash with Pakistan on June 18, 2017
Please Wait while comments are loading...