ಧೋನಿ ಹೆಸರು ಹೇಳದ ಅಶ್ವಿನ್ ವಿರುದ್ಧ ಫ್ಯಾನ್ಸ್ ಗರಂ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 22: ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಗುರುವಾರ (ಡಿಸೆಂಬರ್ 22) ಐಸಿಸಿ ವಾರ್ಷಿಕ ಕ್ರಿಕೆಟರ್ (ಸರ್ ಗರ್ಫೀಲ್ಡ್ ಸೋಬರ್ಸ್ ಟ್ರೋಫಿ) ಪ್ರಶಸ್ತಿ ಹಾಗೂ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಆದರೆ, ಈ ಸಂತಸದ ಕ್ಷಣದಲ್ಲಿ ತನ್ನ ಗುರು ಧೋನಿ ಹೆಸರನ್ನು ಮರೆತಿರುವುದು ಫ್ಯಾನ್ಸ್ ಗೆ ಸಿಟ್ಟು ತರಿಸಿದೆ.

ತಮಿಳುನಾಡು ಮೂಲದ ಆಲ್ ರೌಂಡರ್ ಅಶ್ವಿನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಇಂಡಿಯನ್ ಟೀಮ್ ನಲ್ಲಿ ತಮ್ಮ ಪ್ರತಿಭೆ ತೋರಿಸಲು ನಾಯಕ ಎಂಎಸ್ ಧೋನಿ ಅವಕಾಶ ಕಲ್ಪಿಸಿದ್ದರು ಎಂಬುದನ್ನು ಮರೆಯುವಂತಿಲ್ಲ. [ಐಸಿಸಿ 2016ರ ಪ್ರಶಸ್ತಿ: ಆರ್ ಅಶ್ವಿನ್ ಗೆ ಡಬ್ಬಲ್ ಖುಷಿ]

ಆದರೆ, ಐಸಿಸಿಯ ಎರಡು ಪ್ರಶಸ್ತಿ ಗಳಿಸಿದ ಅಶ್ವಿನ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸಚಿನ್ ಹಾಗೂ ರಾಹುಲ್ ದ್ರಾವಿಡ್ ರಂಥ ದಿಗ್ಗಜ ಸಾಲಿನಲ್ಲಿ ನಿಂತು ಐಸಿಸಿ ಕ್ರಿಕೆಟರ್ ಪ್ರಶಸ್ತಿ ಪಡೆಯಲು ಖುಷಿಯಾಗುತ್ತಿದೆ ಎಂದಿದ್ದಾರೆ. ಎಂಎಸ್ ಧೋನಿ ಅವರು ನಿವೃತ್ತರಾದ ಬಳಿಕ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದೆ, ಹೊಸ ತಂಡ ಹೊಸ ಹುರುಪಿನಲ್ಲಿದೆ ಎಂದು ಹೇಳಿದ್ದಾರೆ.

ಧೋನಿ ಹೆಸರು ಹೇಳದ ಅಶ್ವಿನ್

ಧೋನಿ ಹೆಸರು ಹೇಳದ ಅಶ್ವಿನ್

ತಮಿಳುನಾಡು ಮೂಲದ ಆಲ್ ರೌಂಡರ್ ಅಶ್ವಿನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಇಂಡಿಯನ್ ಟೀಮ್ ನಲ್ಲಿ ತಮ್ಮ ಪ್ರತಿಭೆ ತೋರಿಸಲು ನಾಯಕ ಎಂಎಸ್ ಧೋನಿ ಅವಕಾಶ ಕಲ್ಪಿಸಿದ್ದರು ಎಂಬುದನ್ನು ಮರೆಯುವಂತಿಲ್ಲ.

ಧೋನಿ ಹೆಸರು ಮರೆತ್ತಿದ್ದು ಏಕೆ?

ಧೋನಿ ಹೆಸರು ಮರೆತ್ತಿದ್ದು ಏಕೆ? ನಿಮಗೆ ಎಷ್ಟು ಅವಕಾಶ ನೀಡಿದ್ದಾರೆ ಎಂಬುದು ಮರೆತು ಹೋಗಿದೆಯೇ?

ವೃತ್ತಿಗೆ ನೆರವಾದ ಧೋನಿಗೆ ಅಪಮಾನ

ಅಶ್ವಿನ್ ಅವರು ತಮ್ಮ ವೃತ್ತಿಗೆ ನೆರವಾದ ಧೋನಿಗೆ ಅಪಮಾನ ಮಾಡಿದ್ದಾರೆ.

ಅಶ್ವಿನ್ ಉದ್ದೇಶಪೂರ್ವಕವಾಗಿ ಮಾಡಿರಲಿಕ್ಕಿಲ್ಲ

ಅಶ್ವಿನ್ ಉದ್ದೇಶಪೂರ್ವಕವಾಗಿ ಮಾಡಿರಲಿಕ್ಕಿಲ್ಲ, ಆದರೂ, ಇದು ದೊಡ್ಡ ತಪ್ಪು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Team India's frontline spinner Ravichandran Ashwin on Thursday (December 22) was named the ICC cricketer of the year and a Test cricketer of the year.
Please Wait while comments are loading...