ಐಸಿಸಿ 2016ರ ಪ್ರಶಸ್ತಿ: ಆರ್ ಅಶ್ವಿನ್ ಗೆ ಡಬ್ಬಲ್ ಖುಷಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 22: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಗುರುವಾರ (ಡಿಸೆಂಬರ್ 22) ಪ್ರಕಟಿಸಿದೆ.

ರವಿಚಂದ್ರನ್ ಅಶ್ವಿನ್ ಅವರು ಟಾಪ್ 2 ಗೌರವಗಳನ್ನು ಪಡೆದುಕೊಂಡಿದ್ದಾರೆ. 30 ವರ್ಷವಯಸ್ಸಿನ ಅಶ್ವಿನ್ ಅವರು ಸರ್ ಗರ್ ಫೀಲ್ಡ್ ಸೋಬರ್ಸ್ ಟ್ರೋಫಿ -ವರ್ಷದ ಕ್ರಿಕೆಟರ್ ಪ್ರಶಸ್ತಿ ಹಾಗೂ ವರ್ಷದ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ವಾರ್ಷಿಕ ಪ್ರಶಸ್ತಿಗೆ ಭಾಜನರಾಗುವ ಆಟಗಾರರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಇತರರು ಇದ್ದಾರೆ.

ಪಾಕಿಸ್ತಾನದ ನಾಯಕ ಮಿಸ್ಬಾ ಉಲ್ ಹಕ್ ಅವರಿಗೆ ಮೊಟ್ಟ ಮೊದಲ ಪ್ರಶಸ್ತಿ ಸಿಕ್ಕಿದೆ. ಮಿಸ್ಬಾ ಅವರನ್ನು ವರ್ಷದ ಸ್ಫೂರ್ತಿದಾಯಕ ಎಂದು ಘೋಷಿಸಲಾಗಿದೆ. ವರ್ಷದ ಅಂಪೈರ್ ಪ್ರಶಸ್ತಿ ದಕ್ಷಿಣ ಆಫ್ರಿಕಾದ ಮಾರಿಯಾಸ್ ಎರಾಸ್ಮಸ್ ಅವರ ಪಾಲಾಗಿದೆ.

ICC 2016 Awards announced; Misbah, Erasmus early winners

ಮಿಸ್ಬಾ ಅವರು ಈ ಪ್ರಶಸ್ತಿಗೆ ಭಾಜನರಾದ ಮೊದಲ ಪಾಕಿಸ್ತಾನಿ ನಾಯಕರಾಗಿದ್ದಾರೆ. ಈ ಮುಂಚೆ ಎಂಎಸ್ ಧೋನಿ(2011), ಡೇನಿಯಲ್ ವೆಟ್ಟೋರಿ (2012), ಮಹೇಲ ಜಯವರ್ಧನೆ (2013), ಕಾಥರೇನ್ ಬ್ರಂಟ್ (2014), ಬ್ರೆಂಡನ್ ಮೆಕಲಮ್ (2015) ಪ್ರಶಸ್ತಿ ಪಡೆದುಕೊಂಡಿದ್ದಾರೆ.

ICC 2016 Awards announced; 2 top honours for India's R Ashwin

ಸೆಪ್ಟೆಂಬರ್ 14, 2015ರಿಂದ ಸೆಪ್ಟೆಂಬರ್ 20, 2016ರ ತನಕದ ಅವಧಿಯಲ್ಲಿನ ಸಾಧನೆಯನ್ನು ಪರಿಗಣಿಸಿ ಮತ ಹಾಕಲಾಗುತ್ತದೆ. ಆಯ್ಕೆ ಸಮಿತಿಯಲ್ಲಿ ರಾಹುಲ್ ದ್ರಾವಿಡ್, ಗ್ಯಾರಿ ಕಿರ್ಸ್ಟನ್, ಕುಮಾರ್ ಸಂಗಕ್ಕಾರ ಮುಂತಾದವರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: ICC 2016 Awards announced
English summary
India's star offspinner Ravichandran Ashwin stole the limelight at the International Cricket Council's (ICC) annual awards by winning 2 top honours on Thursday (December 22).
Please Wait while comments are loading...