"ವರದಿಗಾರ್ತಿಯನ್ನು ಕಿಚಾಯಿಸಿದ್ದ ಪೋಲಿ ಗೇಲ್‌ರನ್ನು ಬ್ಯಾನ್ ಮಾಡಿ"

Subscribe to Oneindia Kannada

ಸಿಡ್ನಿ, ಜನವರಿ, 08: ವರದಿಗಾರ್ತಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಅವರನ್ನು ಎಲ್ಲ ಬಗೆಯ ಕ್ರಿಕೆಟ್ ನಿಂದ ನಿಷೇಧಿಸಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಪ್ರತಿಪಾದಿಸಿದ್ದಾರೆ.

ಪ್ರಕರಣದ ನಂತರ ಗೇಲ್ ಅವರಿಗೆ 10 ಸಾವಿರ ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಲಾಗಿತ್ತು. ಬಿಗ್ ಬಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುತ್ತಿರುವ ಎಡಗೈ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು 'ನೆಟ್ವರ್ಕ್ ಟೆನ್' ಪತ್ರಕರ್ತೆ ಮೆಲ್ ಮೆಕ್ ಲಾಫ್ಲಿನ್ ಅವರಿಗೆ ಪಂದ್ಯದ ನಂತರ ನಾವಿಬ್ಬರು ಡ್ರಿಂಕ್ಸ್ ಗೆ ಹೋಗಬೇಕು ಎಂದು ಹೇಳಿದ್ದರು. ಇದು ಲೈವ್ ನಲ್ಲಿ ಪ್ರಸಾರವಾಗಿತ್ತು. ನಂತರ 'don't blush, baby' ಎಂದಿದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.[ಸೆಕ್ಸಿ ಕಾಮೆಂಟ್ ಮಾಡಿ ಸ್ಸಾರಿ ಎಂದ ಪ್ಲೇ ಬಾಯ್ ಗೇಲ್]

Ian Chappell wants Chris Gayle to be banned from all T20 leagues

ಇಂಥ ಭಾಷೆಯನ್ನು ಬಳಸಿರುವ ಗೇಲ್ ಅವರಿಗೆ ನಿಷೇಧ ಹೇರಬೇಕು. ಈ ಬಗೆಯ ದೇಶಗಳೊಂದಿಗೆ ಆಸ್ಟ್ರೇಲಿಯಾ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಚಾಪೆಲ್ ಹೇಳಿದ್ದಾರೆ.[ಗೇಲ್ ಧೂಳಿಪಟ ಮಾಡಿದ ವಿಶ್ವ ದಾಖಲೆಗಳ ಪಟ್ಟಿ]

ಗೇಲ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರವಾಗಿಯೂ ಆಡುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ತೆಗೆದುಕೊಂಡರೆ ಗೇಲ್ ಕ್ರಿಕೆಟ್ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗುವುದರಲ್ಲಿ ಅನುಮಾನವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Australian captain Ian Chappell has called for a worldwide ban on West Indies opener Chris Gayle for his controversial comments to a TV journalist during the Big Bash League (BBL) Twenty20 match recently. Gayle was fined by his BBL team Melbourne Renegades Australian dollars 10,000 after he made "inappropriate" comments to a female reporter during a match in Hobart.
Please Wait while comments are loading...