ಕೆಎಲ್ ರಾಹುಲ್ ರಂತೆ ಸ್ಮಾರ್ಟ್ ಆಗಿರ್ಬೇಕಿತ್ತು : ಕೊಹ್ಲಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 02: 'ನಿನ್ ವಯಸ್ಸಿನಲ್ಲಿ ನಾನು ಹೆಂಗೆ ಆಡುತ್ತಿದ್ದೆ. ಗೊತ್ತಾ?' ಎಂದು ಹಿರಿಯರು -ಕಿರಿಯರಿಗೆ ಡೈಲಾಗ್ ಹೊಡೆಯುವುದನ್ನು ಕೇಳಿರುತ್ತೀರಿ. ಈಗ ಇದೇ ರೀತಿ ಡೈಲಾಗ್ ಕೊಹ್ಲಿ ಬಾಯಿಂದ ಬಂದಿದೆ. ಆದರೆ, ಕೊಹ್ಲಿ ಅವರು ಕೆಎಲ್ ರಾಹುಲ್ ರನ್ನು ಹೊಗಳಿ ಹೇಳಿಕೆ ನೀಡಿದ್ದಾರೆ.

ಟ್ವೆಂಟಿ20 ಅಂತಾರಾಷ್ಟ್ರೀಯ ತಂಡಕ್ಕೆ ನಾಯಕನಾದ ಮೊದಲ ಸರಣಿಯಲ್ಲೇ ಜಯಭೇರಿ ಬಾರಿಸಿದ ಸಂತಸದಲ್ಲಿ ಕೊಹ್ಲಿ ಇದ್ದಾರೆ. ಇಂಗ್ಲೆಂಡ್ ವಿರುದ್ಧ್ ಬೆಂಗಳೂರಿನಲ್ಲಿ ನಡೆದ ಮೂರನೆ ಹಾಗೂ ಅಂತಿಮ ಟಿ20 ಪಂದ್ಯವನ್ನು 75 ರನ್ ಗಳಿಂದ ಗೆದ್ದ ಟೀಂ ಇಂಡಿಯಾ, ಸರಣಿಯನ್ನು 2-1ರಲ್ಲಿ ತನ್ನದಾಗಿಸಿಕೊಂಡಿತು. [ಚಾಹಲ್ ಗೆ 6 ವಿಕೆಟ್, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ 2-1 ಜಯ]

I wish I was as 'smart' as KL Rahul at 24, says Virat Kohli

ರಾಹುಲ್ ಬಗ್ಗೆ ಮೆಚ್ಚುಗೆ: ರಾಹುಲ್ ಅವರು ಅವರ ವಯಸ್ಸಿಗೆ ಹೊಂದಿರುವ ಪ್ರೌಢತೆ, ಕೌಶಲ್ಯ ನಿಜಕ್ಕೂ ಮೆಚ್ಚುವಂತದ್ದು. ಕಠಿಣ ಪರಿಶ್ರಮ, ಪ್ರತಿಭೆ ಹಾಗೂ ಜಾಣ್ಮೆ ಅವರಲ್ಲಿದೆ. ಆತ್ಮವಿಶ್ವಾಸ ಹಾಗೂ ಸರಳ ಸ್ವಭಾವ 24ನೇ ವಯಸ್ಸಿನಲ್ಲಿ ಹೊಂದಿರುವುದು ಅಸಾಧಾರಣ. ನಾನು ಆ ವಯಸ್ಸಿನಲ್ಲಿ ಆ ರೀತಿ ಇರಬೇಕಿತ್ತು ಎಂದೆನಿಸುತ್ತದೆ ಎಂದು 28 ವರ್ಷ ವಯಸ್ಸಿನ ನಾಯಕ ಕೊಹ್ಲಿ ಹೊಗಳಿದರು.

ಕಳೆದ ವರ್ಷದ ಐಪಿಎಲ್ ನಂತರ ಚುಟುಕು ಕ್ರಿಕೆಟ್ ನಲ್ಲಿ ರಾಹುಲ್ ಆಡುವ ರೀತಿ ಸಂಪೂರ್ಣ ಬದಲಾಗಿದೆ. ಆರ್ ಸಿಬಿಯಲ್ಲಿ ರಾಹುಲ್ ಅವರೊಟ್ಟಿಗೆ ಆಡುವುದು ಒಳ್ಳೆ ಅನುಭವ. ಕಳೆದ 11 ತಿಂಗಳಿನಲ್ಲಿ ಕ್ರಿಕೆಟ್ ನ ಮೂರು ಮಾದರಿಗೆ ರಾಹುಲ್ ಅವರು ಹೊಂದಿಕೊಂಡ ರೀತಿ ಅನನ್ಯ ಎಂದು ಕೊಹ್ಲಿ ಹೇಳಿದರು. ಬಲಗೈ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು 12 ಟೆಸ್ಟ್, 6 ಏಕದಿನ ಪಂದ್ಯ ಹಾಗೂ 8 ಟಿ20ಐ ಪಂದ್ಯಗಳನ್ನಾಡಿದ್ದಾರೆ.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian captain Virat Kohli was full of praise for young opening batsman KL Rahul describing him as "confident, smart and humble".
Please Wait while comments are loading...