6 ಎಸೆತಗಳಲ್ಲಿ 6 ಸಿಕ್ಸರ್ ಮತ್ತೆ ಬಾರಿಸುವೆ: ಯುವರಾಜ್

Posted By:
Subscribe to Oneindia Kannada

ಮೊಹಾಲಿ, ಮೇ 16: ಕ್ಯಾನ್ಸರ್ ನಿಂದ ಮುಕ್ತಿಗೊಂಡ ವಿಶ್ವಕಪ್ ಹೀರೊ, ಟೀಂ ಇಂಡಿಯಾ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು 17 ಮಕ್ಕಳೊಡನೆ ಕೆಲ ಕಾಲ ಸಂತಸದ ಕ್ಷಣಗಳನ್ನು ಕಳೆದರು. ಇದೇ ಸಂದರ್ಭದಲ್ಲಿ ಮತ್ತೊಮ್ಮೆ 6 ಎಸೆತಗಳಲ್ಲಿ 6 ಸಿಕ್ಸ್ ಸಿಡಿಸುವೆ ಎಂದು ಘೋಷಿಸಿದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಪಿಎಲ್ 9 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಪರ ಆಡುತ್ತಿರುವ ಯುವರಾಜ್ ಅವರು ಕಿಂಗ್ಸ್ XI ಪಂಜಾಬ್ ವಿರುದ್ಧ 24 ಎಸೆತಗಳಲ್ಲಿ 42ರನ್ ಚೆಚ್ಚಿ ಉತ್ತಮ ಲಯದಲ್ಲಿದ್ದಾರೆ. ಪಿಸಿಎ ಸ್ಟೇಡಿಯಂನಲ್ಲಿ ಇತ್ತೀಚೆಗೆ ಏಳೆಂಟು ವಯೋಮಾನದ ಮಕ್ಕಳೊಡನೆ ಯುವ ಕೆಲಕಾಲ ಕಳೆದರು.

ಈ ಸಂದರ್ಭದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗೆ ಉತ್ತರಿಸಿದ 34 ವರ್ಷ ವಯಸ್ಸಿನ ಯುವರಾಜ್, 6 ಎಸೆತಗಳಲ್ಲಿ 6 ಸಿಕ್ಸ್ ಬಾರಿಸಿದ್ದು ಹೇಗೆ ಎಂಬುದು ಮರೆತು ಹೋಗಿದೆ. ಈಗ ಮತ್ತೊಮ್ಮೆ 6 ಸಿಕ್ಸ್ ಬಾರಿಸಬೇಕಿದೆ ಎಂದರು.

I will hit 6 sixes again, says Yuvraj Singh

ದಕ್ಷಿಣ ಆಫ್ರಿಕಾದಲ್ಲಿ ನಡೆದ 2007ರ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಬೌಲಿಂಗ್ ನಲ್ಲಿ 6 ಸಿಕ್ಸ್ ಸಿಡಿಸಿದ್ದರು.

2011ರ ವಿಶ್ವಕಪ್ ನ ಹೀರೋ ಯುವರಾಜ್ ಅವರು ಅದೇ ವರ್ಷ ಕ್ಯಾನ್ಸರ್ ಪೀಡಿತರಾದ ಸುದ್ದಿ ಕೇಳಿ ಆಘಾತವಾಯಿತು. ಯುವರಾಜ್ ನಮಗೆಲ್ಲ ಸ್ಪೂರ್ತಿದಾಯಕ ಎಂದು ಕ್ಯಾನ್ಸರ್ ಪೀಡಿತ 8 ವರ್ಷ ವಯಸ್ಸಿನ ಬಾಲಕ ಹೆಮ್ಮೆಯಿಂದ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A cancer survivor and a World Cup hero, India batsman Yuvraj Singh gave some vital tips to 17 young kids, who fought their own battles against the dreaded disease, during an interaction here.
Please Wait while comments are loading...