ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2019ರ ವಿಶ್ವಕಪ್ ತಂಡದಲ್ಲಿ ನಾನಿರಬೇಕು: ಶ್ರೀಶಾಂತ್

By Mahesh

ಕೊಚ್ಚಿ, ಆಗಸ್ಟ್ 03: ಇಂಡಿಯನ್ ಪ್ರಿಮಿಯರ್ ಲೀಗ್ ನ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಕರಾಳ ಅಧ್ಯಾಯವನ್ನು ಕಂಡ ಮೇಲೆ ವೇಗಿ ಶ್ರೀಶಾಂತ್ ತನ್ನ ಮನದಾಳದ ಬಯಕೆಯನ್ನು ಬಿಚ್ಚಿಟ್ಟಿದ್ದಾರೆ. 2019ರ ವಿಶ್ವಕಪ್ ಆಡುವುದು ನನ್ನ ಗುರಿ ಎಂದಿದ್ದಾರೆ.

ಕೊಚ್ಚಿಯಲ್ಲಿ ಆರೆಸ್ಸೆಸ್ ಪ್ರಾಯೋಜಿತ ಸೇವಾಭಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಚಿತ ಅಹಾರ ವಿತರಣೆ ಮಾಡಿದ ನಂತರ ಮಾತನಾಡಿದ ಶ್ರೀಶಾಂತ್, ನನಗೆ ಪರಿಸ್ಥಿತಿಯ ಅರಿವಿದೆ. ಕೋರ್ಟ್ ನಿಂದ ಪ್ರಕರಣದಲ್ಲಿ ನಿರ್ದೋಷಿಯೆಂದು ತೀರ್ಪು ಬಂದಿರುವುದು ಸಮಾಧಾನ ತಂದಿದೆ. [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]

ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಇತರರು ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಎರಡೂವರೆ ವರ್ಷ ಕಳೆದ ಮೇಲೆ ಕೋರ್ಟ್ ತೀರ್ಪು ಬಂದಿದೆ. 2019ರೊಳಗೆ ನಾನು ವಿಶ್ವಕಪ್ ತಂಡ ಸೇರುವ ನಿರೀಕ್ಷೆಯಿದೆ.

I want to be part of India team for the 2019 World Cup: Sreesanth

ನನ್ನ ಆಸೆ ಈಡೇರಲು ಕಠಿಣ ಪರಿಶ್ರಮ ಅಗತ್ಯ. ಅದಕ್ಕಾಗಿ ನಾನು ತಯಾರಿ ನಡೆಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ. ಆತ್ಮಸ್ಥೈರ್ಯ ನನಗೆ ಜಯದ ಹಾದಿ ತೋರಬಲ್ಲದು ಎಂದು ಶ್ರೀಶಾಂತ್ ಹೇಳಿದ್ದಾರೆ. [ಫಿಕ್ಸಿಂಗ್ : ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ]

ಎರಡು ವಿಶ್ವಕಪ್ ಆಡಿ ಒಂದು ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಅನುಭವ ಹೊಂದಿರುವ ಶ್ರೀಶಾಂತ್ ಮೇಲಿನ ನಿಷೇಧವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇನ್ನೂ ತೆರವುಗೊಳಿಸಿಲ್ಲ.

'ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್​ರೊಂದಿಗೆ ಸಂಪರ್ಕ ಇದ್ದಿದ್ದರೆ, ನಾನು ದುಬೈನಲ್ಲಿರುತ್ತಿದ್ದೆ, ಕ್ರಿಕೆಟಿಗನಾಗುತ್ತಿರಲಿಲ್ಲ. ವೃತ್ತಿ ಜೀವನಕ್ಕೂ ಹಾಗೂ ಕಠಿಣ ವೇಳೆಯಲ್ಲೂ ಬೆಂಬಲವಾಗಿ ನಿಂತ ಕೇರಳ ಜನತೆಗೆ ಚಿರಋಣಿಯಾಗಿರುತ್ತೇನೆ' ಎಂದು ಶ್ರೀಶಾಂತ್ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X