ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಗುಜರಾಯಿಸಿದ ರವಿಶಾಸ್ತ್ರಿ

Posted By:
Subscribe to Oneindia Kannada

ಮುಂಬೈ, ಜೂನ್ 07: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಮಾಜಿ ಕ್ರಿಕೆಟರ್ ಸಂದೀಪ್ ಪಾಟೀಲ್ ಅರ್ಜಿ ಹಾಕಿದ ಬಳಿಕ ರವಿಶಾಸ್ತ್ರಿ ಅವರು ಕಣಕ್ಕಿಳಿದಿದ್ದಾರೆ. ಬಿಸಿಸಿಐಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಸಂದೀಪ್ ಪಾಟೀಲ್ ಅವರು ಅರ್ಜಿ ಹಾಕಿ ಅಚ್ಚರಿ ಮೂಡಿಸಿದ್ದರು. ಈಗ ಟೀಂ ಇಂಡಿಯಾ ನಿರ್ದೇಶಕರಾಗಿ 18 ತಿಂಗಳುಗಳ ಕಾಲ ತಂಡ ಜತೆಗಿದ್ದ ರವಿಶಾಸ್ತ್ರಿ ಅವರು ಕೋಚ್ ಹುದ್ದೆಯನ್ನು ಬಯಸಿದ್ದಾರೆ. ಐಸಿಸಿ ವಿಶ್ವ ಟಿ20 ಅವರ ಗುತ್ತಿಗೆ ಅವಧಿ ಮುಕ್ತಾಯವಾಗಿದೆ.[ಸಂದೀಪ್ ಪಾಟೀಲ್ -ಟೀಂ ಇಂಡಿಯಾಕ್ಕೆ ಮತ್ತೆ ಕೋಚ್?]

I have applied for Team India head coach's post: Ravi Shastri


ಶಾಸ್ತ್ರಿ ಅವರು ನಿರ್ದೇಶಕರಾಗಿದ್ದ ಅವಧಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ವಿಜಯ, ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆಲುವು, ಶ್ರೀಲಂಕಾ ವಿರುದ್ಧ 22 ವರ್ಷಗಳ ಬಳಿಕ ಐತಿಹಾಸಿಕ ಟೆಸ್ಟ್ ಸರಣಿ ಜಯ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಅಲ್ಲದೆ ವಿಶ್ವಕಪ್ ನಲ್ಲಿ ಸೆಮಿಫೈನಲ್ ಹಾಗೂ ವಿಶ್ವಟಿ20ಯಲ್ಲಿ ಉತ್ತಮ ಸಾಧನೆಯನ್ನು ಹೆಸರಿಸಬಹುದು.[ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ಜಿಂಬಾಬ್ವೆ ಪ್ರವಾಸದ ಹಾಗೂ ನಂತರದ ಜುಲೈ-ಆಗಸ್ಟ್​ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮೇ 23ರಂದೇ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.ಆದರೆ, ಕೋಚ್ ಆಯ್ಕೆ ಮಾಡದೆ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.[ಕೊಹ್ಲಿ ನಾಯಕತ್ವದಲ್ಲಿ ಧೋನಿ ಆಡಿದರೆ ತಪ್ಪೇನಿಲ್ಲ: ಶಾಸ್ತ್ರಿ]

ರವಿಶಾಸ್ತ್ರಿ ಜತೆಗೆ ಕಾರ್ಯನಿರ್ವಹಿಸಿದ ಸಂಜಯ್ ಬಂಗಾರ್, ಆರ್ ಶ್ರೀಧರ್, ಭರತ್ ಅರುಣ್ ಅವರು ಇನ್ನೂ ಬಿಸಿಸಿಐಗೆ ತಮ್ಮ ಗುತ್ತಿಗೆ ನವೀಕರಿಸುವಂತೆ ಅರ್ಜಿ ಹಾಕಿಲ್ಲ. ಈಗ ಸದ್ಯಕ್ಕೆ ಸಂದೀಪ್ ಪಾಟೀಲ್ ಹಾಗೂ ರವಿಶಾಸ್ತ್ರಿ ಇಬ್ಬರಲ್ಲಿ ಒಬ್ಬರು ಕೋಚ್ ಆಗಬಹುದು. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I have applied for Team India head coach's post: Ravi ShastriFormer Team India Director Ravi Shastri today (June 6) applied for the chief coach's post of the Indian cricket team, staking strong claims of returning at the helm.
Please Wait while comments are loading...