ಶಮಿ ಮಗು ಐಸಿಯುನಲ್ಲಿದ್ದ ವಿಷ್ಯ ತಿಳಿದೇ ಇರಲಿಲ್ಲ: ಕೊಹ್ಲಿ

Posted By:
Subscribe to Oneindia Kannada

ಇಂದೋರ್, ಅಕ್ಟೋಬರ್ 12: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ವೇಗಿ ಮೊಹಮ್ಮದ್ ಶಮಿ ಕೂಡಾ ಉತ್ತಮ ಪ್ರದರ್ಶನ ನೀಡಿದ್ದನ್ನು ನಾಯಕ ಕೊಹ್ಲಿ ಸ್ಮರಿಸಿಕೊಂಡಿದ್ದಾರೆ. ಇಂದೋರ್ ಟೆಸ್ಟ್ ಗೆಲ್ಲುವ ಮೂಲಕ ಕಿವೀಸ್ ವಿರುದ್ಧ 3-0 ಅಂತರದಲ್ಲಿ ಸರಣಿ ಗೆದ್ದ ಖುಷಿಯಲ್ಲಿರುವ ಭಾರತದ ನಾಯಕ ಕೊಹ್ಲಿ ಅವರು 'ಶಮಿ ಅವರ ಮಗು ಐಸಿಯುನಲ್ಲಿದ್ದ ವಿಷ್ಯ ತಿಳದಿರಲಿಲ್ಲ' ಎಂದಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವಂತೂ ಭಾರತ ವೇಗಿ ಮೊಹಮ್ಮದ್ ಶಮಿ ಅವರ ಪಾಲಿಗೆ ಮರೆಯಲಾಗದ ಪಂದ್ಯ. ಶಮಿ ಅವರ ಪುತ್ರಿ ಆಯಿರಾ ಅವರು ಐಸಿಯುನಲ್ಲಿದ್ದಾಗಲೂ ಶಮಿ ಪಂದ್ಯವಾಡಿದ್ದರು.

I had no clue Mohammed Shami's daughter was in ICU: Virat Kohli

ಎರಡೂ ಇನಿಂಗ್ಸ್​ಗಳಲ್ಲಿ ತಲಾ ಮೂರು ವಿಕೆಟ್ ಉರುಳಿಸಿದ್ದ ಶಮಿ, ಭಾರತ ತಂಡದ ಟೆಸ್ಟ್ ಸರಣಿ ಗೆಲುವಿನೊಂದಿಗೆ ಐಸಿಸಿ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇರುವಲ್ಲಿ ನೆರವಾದರು. ಕೋಲ್ಕತ ಟೆಸ್ಟ್​ನ 2ನೇ ದಿನದ ವೇಳೆ, ಅಯಿರಾಗೆ ತೀವ್ರ ಜ್ವರ, ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದ್ದರಿಂದ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಈ ವಿಚಾರವನ್ನು 2ನೇ ದಿನದಾಟದ ಮುಕ್ತಾಯದ ಬಳಿಕ ಶಮಿಗೆ ತಿಳಿಸಲಾಗಿತ್ತು.[ಐಸಿಯುನಲ್ಲಿ ಪುತ್ರಿ ಇದ್ದರೂ ಪಂದ್ಯವಾಡಿದ ಶಮಿಗೆ ಶಹಬ್ಬಾಸ್!]

ಆದರೆ, ಪಂದ್ಯದಲ್ಲಿ ಮುಂದುವರೆಯಲು ಶಮಿ ನಿರ್ಧರಿಸಿದ್ದರು. ಈ ಬಗ್ಗೆ ತಂಡದ ನಾಯಕ ಕೊಹ್ಲಿಗೂ ಕೂಡಾ ತಿಳಿಸಿರಲಿಲ್ಲವಂತೆ. ಇಂಥ ನಡೆಗಳಿಂದಲೇ ಶಮಿ ಎಲ್ಲರಿಗೂ ಅತ್ಯಂತ ಪ್ರೀತಿಪಾತ್ರರಾಗಿದ್ದಾರೆ. ಡ್ರೆಸಿಂಗ್ ರೂಮ್ ಇರಲಿ ಮೈದಾನವಿರಲಿ ಶಮಿ ಎಲ್ಲರೊಡನೆ ನಡೆದುಕೊಳ್ಳುವ ರೀತಿ ಅನುಕರಣೀಯ. ನಮಗೆ ಅವರ ನೋವಿನ ಬಗ್ಗೆ ತಿಳಿದಿರಲಿಲ್ಲ. ಆಯೀರಾ ಹುಷಾರಾದ ನಂತರ ನಮಗೆ ತಿಳಿಸಿದರು ಎಂದು ಕೊಹ್ಲ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಮಿಯಂಥ ಆಟಗಾರರು ತಂಡದಲ್ಲಿದ್ದರೆ ಇತರೆ ಆಟಗಾರರು ಉತ್ಸಾಹದಿಂದ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಬಲ್ಲರು. ಶಮಿ ಅವರು ಟೀಂ ಇಂಡಿಯಾದ ಪ್ರಮುಖ ಬೌಲರ್ ಹಾಗೂ ಸದಸ್ಯ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಕೊಹ್ಲಿ ಹೊಗಳಿದರು. (ಒನ್ಇಂಡಿಯಾ ಸುದ್ದಿ)


ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
His daughter was in the ICU but fast bowler Mohammed Shami chose not to inform his team-mates and played the Kolkata Test against New Zealand recently. Captain Virat Kohli revealed that he "had no clue" about what Shami was going through and was informed by the bowler only later.
Please Wait while comments are loading...