ಧೋನಿಯನ್ನು ಕ್ಷಮಿಸಿದ್ದೇನೆ ಎಂದ ಯೋಗರಾಜ್ ಸಿಂಗ್

Posted By:
Subscribe to Oneindia Kannada

ಬೆಂಗಳೂರು, ಜನವರಿ 20: 'ಟೀಂ ಇಂಡಿಯಾದಿಂದ ಯುವರಾಜ್ ಸಿಂಗ್ ಹೊರಗುಳಿಯಲು ಧೋನಿಯೇ ಕಾರಣ' ಎಂದು ಸದಾಕಾಲ ದೂಷಿಸುತ್ತಿದ್ದ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಈಗ ಧೋನಿಯನ್ನು ಹಾಡಿ ಹೊಗಳಿದ್ದಾರೆ.

ಎಂಎಸ್ ಧೋನಿಯನ್ನು ನಾನು ಕ್ಷಮಿಸಿದ್ದೇನೆ, ಧೋನಿ ಇನ್ನಷ್ಟು ಶತಕ ಬಾರಿಸಲಿ, ದೇವರು ಅವರನ್ನು ಕಾಪಾಡಲಿ ಎಂದು ಯೋಗರಾಜ್ ಅವರು ಡೆಕ್ಕನ್ ಕ್ರಾನಿಕಲ್ ಜತೆ ಮಾತನಾಡುತ್ತಾ ಹೇಳಿದ್ದಾರೆ.[ಧೋನಿ ವಿರುದ್ಧ ಯುವಿ ಅಪ್ಪ ದೂರು ಕೊಡ್ತಾರಾ? ಗುಲ್ಲೋ ಗುಲ್ಲು]

I forgive MS Dhoni for his evil against my son Yuvraj: Yograj Singh

'ಯುವರಾಜ್ ಸಿಂಗ್ ಅವರ 3 ವರ್ಷಗಳ ವೃತ್ತಿ ಬದುಕು ಹಾಳಾಗಲು ಧೋನಿ ಕಾರಣ, ಧೋನಿ ಇದನ್ನು ದೇವರ ಮುಂದೆ ಒಪ್ಪಿಕೊಳ್ಳಲಿ, ದೇವರು ಎಲ್ಲವನ್ನು ನೋಡಿಕೊಳ್ಳುತ್ತಾನೆ. ನಾನು ಅತನನ್ನು ಕ್ಷಮಿಸಿದ್ದೇನೆ. ದೇವರು ದೊಡ್ಡವನು' ಎಂದು 58 ವರ್ಷ ವಯಸ್ಸಿನ ಮಾಜಿ ಕ್ರಿಕೆಟರ್ ಯೋಗರಾಜ್ ಹೇಳಿದ್ದಾರೆ.[ನನ್ನ ಮಗ ಮಂಜಿನಂತೆ ಕರಗಲ್ಲ: ಯೋಗರಾಜ್ ಸಿಂಗ್]

ಕಟಕ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ತಮ್ಮ ಗರಿಷ್ಠ ವೈಯಕ್ತಿಕ ಮೊತ್ತ ಉತ್ತಮಗೊಳಿಸಿ 150 ರನ್ ಚೆಚ್ಚಿದರೆ, ಧೋನಿ ಅವರು 10ನೇ ಶತಕ ಬಾರಿಸಿದರು ಇಬ್ಬರು 4ನೇ ವಿಕೆಟ್ ಗೆ 256 ರನ್ ಗಳ ಜೊತೆಯಾಟ ಕಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran India cricketer Yuvraj Singh's father Yograj Singh has said he has forgiven former India captain Mahendra Singh Dhoni.
Please Wait while comments are loading...