ದಯವಿಟ್ಟು ಮಾಸ್ಟರ್ ಬ್ಲಾಸ್ಟರ್ ಗೆ ಹೋಲಿಸ್ಬೇಡಿ: ಕೊಹ್ಲಿ

Posted By:
Subscribe to Oneindia Kannada

ಸಿಡ್ನಿ, ಜ. 22 : ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನೋಡಿ ಅವರನ್ನು ಕ್ರಿಕೆಟ್ ದಿಗ್ಗಜರೊಡನೆ ಹೋಲಿಕೆ ಮಾಡುವುದು ಮಾಮೂಲಿ. ಆದರೆ, ಮಾಸ್ಟರ್ ಬ್ಲಾಸ್ಟರ್ ಸರ್ ವಿವಿಯನ್ ರಿಚರ್ಡ್ಸ್ ಗೆ ಹೋಲಿಕೆ ಮಾಡುವುದಕ್ಕೆ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ದಿಗ್ಗಜರೊಡನೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಕೊಹ್ಲಿ ಕೇಳಿಕೊಂಡಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ವಿವಿಯನ್ ರಿಚರ್ಡ್ಸ್ ಅವರು ಕೊಹ್ಲಿ ಅವರ ಬ್ಯಾಟಿಂಗ್ ಪ್ರಶಂಸಿದ್ದರು. ಕೊಹ್ಲಿ ಅವರ ತ್ವರಿತ ಗತಿ ಬ್ಯಾಟಿಂಗ್ ಶೈಲಿ ಅನುಕರಣೀಯ, ನಾನು ಬ್ಯಾಟಿಂಗ್ ಮಾಡುವಾಗ ಇದ್ದ ಮನಸ್ಥಿತಿಯನ್ನು ಕೊಹ್ಲಿಯಲ್ಲೂ ಕಾಣುತ್ತಿದ್ದೇನೆ ಎಂದಿದ್ದರು. [25ನೇ ಶತಕ ಸಿಡಿಸಿ, ವಿರಾಟ್ ಕೊಹ್ಲಿರಿಂದ ದಾಖಲೆ]

ರಿಚರ್ಡ್ಸ್ ಅವರ ಹೊಗಳಿಕೆಗೆ ತಕ್ಕಂತೆ 27 ವರ್ಷ ವಯಸ್ಸಿನ ಕೊಹ್ಲಿ ಕೂಡಾ ಬ್ಯಾಟಿಂಗ್ ಮಾಡುತ್ತಿದ್ದು, ಇತ್ತೀಚೆಗೆ ತ್ವರಿತ ಗತಿಯಲ್ಲಿ 7,000 ರನ್ ಪೂರೈಸಿದರು. ಜೊತೆಗೆ 25 ಏಕದಿನ ಕ್ರಿಕೆಟ್ ಶತಕ ಬಾರಿಸಿ ದಾಖಲೆ ಬರೆದಿದರು. ಹೀಗಾಗಿ ಹಲವು ಬಾರಿ ರಿಚರ್ಡ್ಸ್ ಅವರೊಂದಿಗೆ ಕೊಹ್ಲಿ ಬ್ಯಾಟಿಂಗ್ ಹೋಲಿಕೆ ಮಾಡಲಾಗಿದೆ.

I don't deserve comparisons with great Vivian Richards: Virat Kohli

ಸಿಡ್ನಿಯಲ್ಲಿ ನಡೆಯುವ ಐದನೇ ಪಂದ್ಯಕ್ಕೂ ಮುನ್ನ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ರೀತಿ ಹೋಲಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಸದ್ಯ ನಾವು ಆಡುವಾಗ ಕಾಮೆಂಟರಿ ಕೇಳಿಸಿಕೊಳ್ಳಲಾಗುತ್ತಿಲ್ಲ. ["ವಿರಾಟ್ ಕೊಹ್ಲಿರನ್ನು ಕ್ಯಾಪ್ಟನ್ ಮಾಡಲು ಇದು ಸಕಾಲ"]

ಇಲ್ಲದಿದ್ದರೆ ನಾವು ಕನಸಿನಲ್ಲೇ ತೇಲುತ್ತಿರಬೇಕಾಗುತ್ತಿತ್ತು. ಮುಂದಿನ ಎಸೆತ ಎದುರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹೋಲಿಕೆ ಬಂದಾಗ ಹೆಮ್ಮೆ ಎನಿಸುತ್ತದೆ ನಿಜ. ನಿಮ್ಮ ವೃತ್ತಿ ಬದುಕಿನ ಶ್ರೇಷ್ಠ ಆಟಗಾರರೊಡನೆ ನಿಮ್ಮನ್ನು ಹೋಲಿಕೆ ಮಾಡಿದರೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ಉತ್ಸಾಹ ಬರುತ್ತದೆ.

ಆದರೆ, ನಾನು ಎಂದಿಗೂ ವಿವಿಯನ್ ರಿಚರ್ಡ್ಸ್ ಸರ್ ಅವರ ಸಮಕ್ಕೆ ನಿಲ್ಲಲು ಸಾಧ್ಯವಿಲ್ಲ. ಅವರು ಆಡಿದ ಕಾಲಘಟ್ಟದಲ್ಲಿ ಇದ್ದ ವ್ಯವಸ್ಥೆ, ಹೆಲ್ಮೆಟ್, ಪ್ಯಾಡ್ ಇಲ್ಲದ ದಿನಗಳು ಹಾಗೂ ಬೌಲರ್ ಗಳಿಗೆ ಹೋಲಿಸಿದರೆ ನನ್ನ ಸಾಧನೆ ಅತ್ಯಲ್ಪ ಎಂದಿದ್ದಾರೆ.[ಕೊಹ್ಲಿ 25ನೇ ಶತಕ, ಮತ್ತೆ ದಾಖಲೆಗಳು ಧ್ವಂಸ]

ರಿಚರ್ಡ್ಸ್ ಅವರು ಸಾಧಾರಾಣ ಕ್ಯಾಪ್ ಧರಿಸಿ ಶ್ರೇಷ್ಠ ವೇಗಿಗಳನ್ನು ಎದುರಿಸಿದವರು, ಮೊದಲ ಓವರ್ ನಲ್ಲೇ ಸ್ಕ್ವೇರ್ ಲೆಗ್ ನಲ್ಲಿ ಸಿಕ್ಸರ್ ಬಾರಿಸಿದವರು. ಹೀಗಾಗಿ ಅವರೊಂದಿಗೆ ಹೋಲಿಕೆ ಮಾಡುವುದು ಸರಿ ಕಾಣುವುದಿಲ್ಲ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
He might be compared with some of the greats of the game including Sir Vivian Richards but a modest Virat Kohli thinks he doesn't deserve to be compared to the West Indian legend.
Please Wait while comments are loading...