ಗಂಭೀರ್ 'ಉರಿ' ಹುತಾತ್ಮರ ಪರ ಟ್ವೀಟ್, ಬಯೋ ಪಿಕ್ ಓಕೆ!

Posted By:
Subscribe to Oneindia Kannada

ನವದೆಹಲಿ, ಸೆ. 19: ನಾಯಕ ಎಂಎಸ್ ಧೋನಿಗೆ ಚುಚ್ಚುವಂತೆ ಟ್ವೀಟ್ ಮಾಡಿ, ಯಾವ ಕ್ರಿಕೆಟರ್ ಕೂಡಾ ಜೀವನಾಧಾರಿತ ಚಿತ್ರ ಹೊಂದಲು ಅರ್ಹ ರಲ್ಲ ಎಂದಿದ್ದ ಗಂಭೀರ್ ಅವರು ಈಗ ಉಲ್ಟಾ ಹೊಡೆದಿದ್ದಾರೆ. ನಾನು ಯಾರ ಬಯೋಪಿಕ್ ಚಿತ್ರವನ್ನು ವಿರೋಧಿಸುವುದಿಲ್ಲ, ನನ್ನ ಮೇಲೆ ಬೇಕಾದರೂ ಸಿನಿಮಾ ಮಾಡಿ ಎಂದಿದ್ದಾರೆ.

ಆಯ್ಕೆದಾರರಿಂದ ಕಡೆಗಣಿಸಲ್ಪಟ್ಟಿರುವ ಭಾರತೀಯ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಅವರು ಪರೋಕ್ಷವಾಗಿ ಎಂಎಸ್ ಧೋನಿಗೆ ಚುಚ್ಚುವಂತೆ ಟ್ವೀಟ್ ಮಾಡಿದ್ದರು. ಕ್ರಿಕೆಟರ್ಸ್ ಕುರಿತು ಸಿನಿಮಾ ಮಾಡಬಾರದು ಎಂದು ಟೀಕಿಸಿದ್ದರು. [ಧೋನಿ ವಿರುದ್ಧ ಕಿಡಿಕಾರಿದ ಗೌತಮ್]

I am not against 'any one' cricketer's biopic, clarifies Gautam Gambhir

ಆದರೆ, ನಂತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತರಾದ ಯೋಧರ ಬಗ್ಗೆ ಚಿತ್ರ ನಿರ್ಮಿಸಿ, ಹುತಾತ್ಮರ ಬಗ್ಗೆ ಚಿತ್ರ ನಿರ್ಮಿಸಿದರೆ ಒಳ್ಳೆಯದು ಎಂದು ಟ್ವೀಟ್ ಮಾಡಿದ್ದಾರೆ.

ಜೀವನಾಧಾರಿತ ಚಿತ್ರಗಳನ್ನು ತೆಗೆಯಲು ಹುತಾತ್ಮರಿಗಿಂತ ಉತ್ತಮ ವ್ಯಕ್ತಿಗಳು ಬೇಕೆ ಎಂದು ಪ್ರಶ್ನಿಸಿದ್ದಾರೆ. ಧೋನಿ ಅವರ ಜೀವನ ಆಧಾರಿತ 'ಎಂ ಎಸ್ ಧೋನಿ : ದಿ ಅನ್ ಟೋಲ್ಡ್ ಸ್ಟೋರಿ' ಚಿತ್ರ ಸೆಪ್ಟೆಂಬರ್ 30ರಂದು ವಿಶ್ವದೆಲ್ಲೆಡೆ ತೆರೆಕಾಣಲು ಸಿದ್ಧವಾಗಿದೆ.

ಈ ಸಂದರ್ಭದಲ್ಲಿ ಧೋನಿ ಕುರಿತ ಚಿತ್ರದ ಬಗ್ಗೆ ಪರೋಕ್ಷವಾಗಿ ಗಂಭೀರ್ ದಾಳಿ ನಡೆಸಿದ್ದನ್ನು ಖಂಡಿಸಿ ಧೋನಿ ಅಭಿಮಾನಿಗಳು ಪ್ರತಿ ಟ್ವೀಟ್ ಮಾಡಿದ್ದರು. ಇದಕ್ಕೂ ಗಂಭೀರ್ ಉತ್ತರ ನೀಡಿದ್ದಾರೆ.

ಕ್ರಿಕೆಟರ್ ಗಳ ಜೀವನ ಚರಿತ್ರೆಗಳ ಬಗ್ಗೆ ನನಗೆ ನಂಬಿಕೆಯಿಲ್ಲ ನಮ್ಮ ಸಮಾಜದಲ್ಲಿ ಕ್ರಿಕೆಟರ್ ಗಳಿಗಿಂತ ಹೆಚ್ಚು ಕೊಡುಗೆ ನೀಡಿದ ಅನೇಕ ವ್ಯಕ್ತಿಗಳಿದ್ದಾರೆ. ಅವರ ಜೀವನ ಕುರಿತ ಚಿತ್ರಗಳು ತೆರೆಗೆ ಬಂದರೆ ಚೆನ್ನ ಎಂದಿದ್ದಾರೆ.

ಮೊಹಮ್ಮದ್ ಅಜರುದ್ದೀನ್ ಅವರ ಜೀವನ ಕುರಿತ 'ಅಜರ್', ದಕ್ಷಿಣ ಆಫ್ರಿಕಾದ ಕ್ರಿಕೆಟರ್ ದಿವಂಗತ ಹ್ಯಾನ್ಸಿ ಕ್ರೋನಿಯೆ ಕುರಿತ' ಹ್ಯಾನ್ಸಿ" ಎ ಟ್ರೂ ಸ್ಟೋರಿ' ಹಾಗೂ ಸಚಿನ್ ತೆಂಡೂಲ್ಕರ್ ಕುರಿತ ಸಚಿನ್ : ಎ ಬಿಲಿಯನ್ ಡ್ರೀಮ್ಸ್ ಎಂಬ ಚಿತ್ರಗಳನ್ನು ಇಲ್ಲಿ ಹೆಸರಿಸಬಹುದು. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After being criticised for his comments on biopics on cricketers, Gautam Gambhir clarified that he is not against "any one" cricketer's film.
Please Wait while comments are loading...