ರೊನಾಲ್ಡೊ ನನ್ನ ಸ್ಫೂರ್ತಿ : ವಿರಾಟ್ ಕೊಹ್ಲಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 02 : ತಮಗೆ ಸ್ಪೂರ್ತಿ ತುಂಬುವ ಆಟಗಾರ ಯಾರು ಎಂಬುದನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಹೇಳಿಕೊಂಡಿದ್ದಾರೆ. ಜನಪ್ರಿಯ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ನನಗೆ ಪ್ರೇರಣೆಯಾಗಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗೆ ನೀಡಿದ ಸಂದರ್ಶನದ ವೇಳೆಯಲ್ಲಿ ಕೊಹ್ಲಿ ಅವರು ನನಗೆ ರೊನಾಲ್ಡೊ ಪ್ರೇರಣೆ ನೀಡುತ್ತಾರೆ. ರೊನಾಲ್ಡೊ ಅವರ ಪರಿಶ್ರಮ, ಯಶಸ್ಸು ಎಲ್ಲರಿಗೂ ಮಾದರಿ ಎಂದಿದ್ದಾರೆ.

ಮೆಸ್ಸಿ ಕೂಡಾ ರೊನಾಲ್ಡೊರಂಥೆ ಪ್ರತಿಭಾವಂತ ಆದರೆ, ಪರಿಶ್ರಮದ ವಿಷಯದಲ್ಲಿ ರೊನಾಲ್ಡೊ ಅವರನ್ನು ಮೀರಿಸುವವರಿಲ್ಲ. ಅವರ ಪ್ರತಿಭೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನಾವು ಕಾಣಬಹುದಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

I am inspired by Cristiano Ronaldo: Virat Kohli

ಪೋರ್ಚುಗಲ್ ತಂಡದ ಪರ ಆಡಿ ಯುರೋ ಕಪ್, ರಿಯಲ್ ಮ್ಯಾಡ್ರಿಡ್ ಪರ ಆಡಿ ಯುಇಎಫ್ಎ ಚಾಂಪಿಯನ್ಸ್ ಲೀಗ್ ಗೆದ್ದಿದ್ದಾರೆ ಜತೆಗೆ ಬಲಾನ್ ಡಿ ಓರ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ರೊನಾಲ್ಡೊ ಇದ್ದಾರೆ. ಕೊಹ್ಲಿ ಅವರು 35 ಅಂತಾರಾಷ್ಟ್ರೀಯ ಪಂದ್ಯಗಳಿಂದ 2515 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಜನವರಿ 15ರ ನಂತರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಟಿ20ಐ ಪಂದ್ಯಗಳಲ್ಲಿ ಆಡಲು ಉತ್ಸುಕರಾ
ಿರುವುದಾಗಿ ಕೊಹ್ಲಿ ಹೇಳಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian Test cricket team captain Virat Kohli says he takes inspiration from the world's best footballer currently, Cristiano Ronaldo.
Please Wait while comments are loading...