ರವಿ ಶಾಸ್ತ್ರಿ ಅವರ ಹೇಳಿಕೆಯಿಂದ ನೋವಾಗಿದೆ: ಗಂಗೂಲಿ

Posted By:
Subscribe to Oneindia Kannada

ಕೋಲ್ಕತ್ತಾ, ಜೂನ್ 30 : ಟೀಂ ಇಂಡಿಯಾದ ಕೋಚ್ ಹುದ್ದೆ ಕೈತಪ್ಪಿದ್ದರಿಂದ ಬೇಸರಗೊಂಡು ಸೌರವ್ ಗಂಗೂಲಿ ಅವರ ವಿರುದ್ಧ ರವಿಶಾಸ್ತ್ರಿ ಅವರು ಕಿಡಿಕಾರಿದ್ದು ಗೊತ್ತಿರಬಹುದು. ರವಿಶಾಸ್ತ್ರಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗಂಗೂಲಿ ಅವರು ಶಾಸ್ತ್ರಿ ಹೇಳಿಕೆಯಿಂದ ನೋವಾಗಿದೆ ಎಂದಿದ್ದಾರೆ.

ರವಿಶಾಸ್ತ್ರಿ ಅವರು ನನ್ನ ಮೇಲೆ ಮಾಡಿರುವ ಆರೋಪದಿಂದ ಅಪಾರ ನೋವಾಗಿದೆ ಎಂದು ಎಂದು ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಹೇಳಿದ್ದಾರೆ. [ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ]

ಶಾಸ್ತ್ರಿ ಅವರು ನನ್ನ ಸ್ಥಿತಿಯನ್ನು ಅರಿಯದೆ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅಂದು ಐದು ಗಂಟೆಗೆ ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಯ ಸಭೆ ಏರ್ಪಾಡು ಮಾಡಲಾಗಿತ್ತು. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿ ನಾನು ಅಲ್ಲಿ ಇರಬೇಕಾಗಿತ್ತು. ಆದ್ದರಿಂದ ಶಾಸ್ತ್ರಿ ಅವರ ಸಂದರ್ಶನ ಸಮಯದಲ್ಲಿ ಹಾಜರಿರಲಿಲ್ಲ.

'Hurt and extremely saddenned' by Ravi Shastri's comments: Sourav Ganguly

ಭಾರತ ಕ್ರಿಕೆಟ್ ತಂಡದ ಕೋಚ್ ಆಗಲು ಬಯಸಿದವರು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಯ ಮುಂದೆ ಬಂದು ಸಂದರ್ಶನ ನೀಡಬೇಕೆ ಹೊರತು ಬ್ಯಾಂಕಾಕಿನಲ್ಲಿ ಕುಳಿತು ಹೇಳಿಕೆ ನೀದುವುದು ಸರಿಯಿಲ್ಲ ಇದು ನಮಗೆ ಅವಮಾನ ಮಾಡಿದಂತಲ್ಲವೇ ಎಂದು ಗಂಗೂಲಿ ಅವರು ಮರು ಪ್ರಶ್ನಿಸಿದ್ದಾರೆ. ನನ್ನಿಂದಾಗಿ ಶಾಸ್ತ್ರಿ ಅವರಿಗೆ ಕೋಚ್ ಸ್ಥಾನ ತಪ್ಪಿತು ಎಂಬುದು ಮೂರ್ಖತನನದ ಹೇಳಿಕೆ ಎಂದು ಸೌರವ್ ಅವರು ತಿರುಗೇಟು ನೀಡಿದ್ದಾರೆ. [ಗಂಗೂಲಿ ವಿರುದ್ಧ ನೇರವಾಗಿ ಕಿಡಿಕಾರಿದ ರವಿಶಾಸ್ತ್ರಿ]

ನನ್ನ ಸಂದರ್ಶನದ ದಿನ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ, ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯ(ಸಚಿನ್, ವಿವಿಎಸ್ ಲಕ್ಷ್ನಣ್ ಇತರೆ ಸದಸ್ಯರು) ಸೌರವ್ ಗಂಗೂಲಿ ಅವರು ಗೈರು ಹಾಜರಾಗಿದ್ದು ಒಂಚೂರು ಹಿಡಿಸಲಿಲ್ಲ. ಈ ರೀತಿ ಅಗೌರವದಿಂದ ನಡೆದುಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ ಎಂದು ರವಿಶಾಸ್ತ್ರಿ ಅವರು ಬೇಸರ ವ್ಯಕ್ತಪಡಿಸಿದ್ದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former captain Sourav Ganguly on eednesday (June 29) said he was "hurt" and "extremely saddenned" by Ravi Shastri's comments on him after the selection of the head coach of Team India.
Please Wait while comments are loading...