ಹುಬ್ಬಳ್ಳಿಯಲ್ಲಿ ನ.21 ರಿಂದ ರಣಜಿ ಕ್ರಿಕೆಟ್ ಪಂದ್ಯ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 16: ಇಲ್ಲಿನ ರಾಜನಗರದ ಕೆಎಎಸ್ ಸಿಎ ಕ್ರೀಡಾಂಗಣದಲ್ಲಿ ನ.21 ರಿಂದ 24 ರ ವರೆಗೆ ರಣಜಿ ಕ್ರಿಕೆಟ್ ಪಂಧ್ಯ ನಡೆಯಲಿದೆ. ಗುಜರಾತ್ ಮತ್ತು ಮುಂಬಯಿ ತಂಡಗಳು ಸೆಣಸಲಿವೆ.

ಈಗಾಗಲೇ ಕೆಪಿಎಲ್ ಪಂದ್ಯಾವಳಿಗಳು ನಡೆದಿದ್ದ ರಾಜನಗರ ಮೈದಾನದಲ್ಲಿ ಪೂರ್ವ ಸಿದ್ಧತೆಗಳು ಆರಂಭಗೊಂಡಿವೆ. ನ.19 ಕ್ಕೆ ತಂಡಗಳು ನಗರಕ್ಕೆ ಆಗಮಿಸಲಿದ್ದು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿದ್ದಾರೆ ಎಂದು ಕೆಎಸ್ಸಿಎ ಧಾರವಾಡ ವಲಯ ನಿಯಂತ್ರಕ ಬಾಬಾ ಭೂಸದ ಹೇಳಿದ್ದಾರೆ.

Hubballi KSCA Stadium Gujarat vs Mumbai, Group A

"ಎ" ಗುಂಪಿನಲ್ಲಿ ಆರನೇ ಪಂದ್ಯವನ್ನು ಗುಜರಾತ್ ತಂಡ ಮುಂಬಯಿ ವಿರುದ್ಧ ಆಡಲಿವೆ. ಗುಜರಾತ್ ತಂಡವು ಆಡಿರುವ ಮೂರು ಪಂದ್ಯಗಳಲ್ಲಿ ಎರಡಲ್ಲಿ ಗೆಲುವು ಮತ್ತು ಒಂದನ್ನು ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 15 ಪಾಯಿಂಟ್ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ.

ಮುಂಬಯಿ ತಂಡವು ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಎರಡು ಡ್ರಾ ಮಾಡಿಕೊಂಡು 19 ಪಾಯಿಂಟ್ ಗಳಿಸಿಕೊಂಡು 1ನೇ ಸ್ಥಾನದಲ್ಲಿದೆ.

ಗುಜರಾತ್: ಪಾರ್ಥೀವ್ ಪಟೇಲ್, ಆರ್ ಪಿ ಸಿಂಗ್, ಈಶ್ವರ್ ಚೌಧರಿ, ಮನ್ ಪ್ರೀತ್ ಜುನೇಜ, ರಷ್ ಕಲಾರಿಯಾ, ಅಕ್ಷರ್ ಪಟೇಲ್, ಪ್ರಿಯಾಂಕ್ ಪಾಂಚಲ್, ಮೆಹುಲ್ ಪಟೇಲ್, ಭಾರ್ಗವ್ ಮೆರಾಯಿ, ರುಜುಲ್ ಭಟ್, ಸಮಿತ್ ಗೊಹೆಲ್, ಚಿರಾಗ್ ಗಾಂಧಿ, ಜಸ್ ಪ್ರೀತ್ ಬೂಮ್ರಾ, ಹಾರ್ದಿಕ್ ಪಟೇಲ್, ಕರಣ್ ಪಟೇಲ್, ಧ್ರುವ್ ರಾವಲ್, ಚಿಂತನ್ ಗಜ, ಅಬ್ದುಲಾಹಾದ್ ಮಲೆಕ್

ಮುಂಬೈ: ಧವಳ್ ಕುಲಕರ್ಣಿ, ಅಭಿಶೇಕ್ ನಾಯರ್, ಆದಿತ್ಯಾ ತಾರೆ, ಸೂರ್ಯ ಕುಮಾರ್ ಯಾದವ್, ಕೌಸ್ತುಭ್ ಪವಾರ್, ಬಲ್ವಿಂದರ್ ಸಂಧು, ನಿಖಿಲ್ ಪಟೇಲ್, ಅಖಿಲ್ ಹೆರ್ವಾಡ್ಕರ್, ಸೂಫಿಯಾನ್ ಶೇಖ್, ಶಾರ್ದೂಲ್ ಠಾಕೂರ್, ವಿಶಾಲ್ ದಭೊಲ್ಕರ್, ಸಿದ್ದೇಶ್ ಲಾಡ್, ಶ್ರೇಯಸ್ ಐಯರ್,ಜಾಯ್ ಗೋಕುಲ್ ಬಿಸ್ತಾ, ಅರ್ಮಾನ್ ಜಾಫರ್, ತುಷಾರ್ ದೇಶ್ ಪಾಂಡೆ, ವಿಜಯ್ ಗೋಹಿಲ್, ಆದಿತ್ಯಾ ಧುಮಾಲ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KSCA will be hosting Ranji Trophy Match between Gujarat Cricket Association & Mumbai Cricket Association from 21st November 2016 to 24th November 2016 at KSCA Stadium, Rajnagar, Hubli.
Please Wait while comments are loading...