ಐಪಿಎಲ್ ನಿಂದ ಜಾವಗಲ್ ಶ್ರೀನಾಥ್ ಗೆ ಸಿಕ್ಕ ಸಂಬಳವೆಷ್ಟು?

Posted By:
Subscribe to Oneindia Kannada

ನವದೆಹಲಿ, ಜುಲೈ 12: ದುಡ್ಡು ಮಾಡಲು ಹೇಳಿ ಮಾಡಿಸಿದ್ದಂತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಆಟಗಾರರು, ಫ್ರಾಂಚೈಸಿ ಮಾತ್ರ ಹಣ ಬಾಚುತ್ತಿಲ್ಲ. ಅಂಪೈರ್, ರೆಫ್ರಿಗಳಿಗೂ ಕೈತುಂಬಾ ಸಂಬಳ, ಸಂಭಾವನೆ ಸಿಗುತ್ತಿದೆ. ರೆಫ್ರಿ ಜಾವಗಲ್ ಶ್ರೀನಾಥ್ ಸೇರಿದಂತೆ ಅಂಪೈರ್ ಗಳಿಗೆ ನೀಡಿದ ಮೊತ್ತದ ಲೆಕ್ಕವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಚ್ಚಿಟ್ಟಿದೆ.

ಐಪಿಎಲ್ 2016 ರಲ್ಲಿ ಭಾರತೀಯ ಅಂಪೈರ್ ಗಳಾದ ಅನಿಲ್ ಚೌಧರಿ ಹಾಗೂ ಸಿ ಷಂಶುದ್ದೀನ್ ಅವರಿಗೆ ಸುಮಾರು 40 ಲಕ್ಷ ರು ಸಿಕ್ಕಿದೆ ಎಂಬ ಮಾಹಿತಿ ಬಂದಿದೆ. [ಐಪಿಎಲ್ 2016 ಟೂರ್ನಿಯನ್ನು ವೀಕ್ಷಿಸಿದ ಜನರ ಸಂಖ್ಯೆ ಗೊತ್ತೆ?]

ದೆಹಲಿ ಮೂಲದ ಚೌಧರಿಗೆ 39,63, 762.00 (39.63 ಲಕ್ಷ ರು) ಹಾಗೂ ಷಂಶುದ್ದೀನ್ ಗೆ 40,83,876 (40.83 ಲಕ್ಷ ರು) ಸಿಕ್ಕಿದೆ. ಕೆಎನ್ ಅನಂತ ಪದ್ಮನಾಭ ಹಾಗೂ ಮಾಜಿ ಆಟಗಾರ ರೆಫ್ರಿ ಜಾವಗಲ್ ಶ್ರೀನಾಥ್ ಅವರಿಗೆ ತಲಾ 26 ಲಕ್ಷ ರು ಸಿಕ್ಕಿದೆ. [ಪರಿಸರ ಜಾಗೃತಿ ಬಗ್ಗೆ ಜಾವಗಲ್ ಶ್ರೀನಾಥ್ ಏನಂತಾರೆ?]

Revealed! Whopping salaries of Indian umpires in IPL 2016

ಯಾರಿಗೆ ಎಷ್ಟು ಸಿಕ್ಕಿದೆ ಲೆಕ್ಕ ಇಲ್ಲಿದೆ : (ರುಪಾಯಿಯಲ್ಲಿ)

* ಅನಿಲ್ ದಂಡೇಕರ್ : 26,42,508
* ಜಾವಗಲ್ ಶ್ರೀನಾಥ್: 26,42,508
* ಕೆಎನ್ ಅನಂತಪದ್ಮನಾಭನ್ : 26,65,008
* ಎ ನಂದ ಕಿಶೋರ್ : 28,82,736
* ನಿತಿನ್ ಮೆನನ್: 31,22,964
* ಅನಿಲ್ ಕುಮಾರ್ ಚೌಧರಿ : 39,63,762
* ನಂದನ್ : 40,83,876
* ಸಿ ಷಂಶುದ್ದೀನ್ : 40,83,876
(ಒನ್ಇಂಡಿಯಾ ಕನ್ನಡ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cash-rich Indian Premier League (IPL) is not only the most lucrative franchise-based leagues for players, even Indian umpires and referees are being paid handsomely by the BCCI for discharging their duties in the high-profile tournament.
Please Wait while comments are loading...