ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗೆ ಸಿಕ್ಕಿರುವ ದೊಡ್ಡ ಗೌರವ ಇದಾಗಿದೆ: ರೋಹಿತ್ ಶರ್ಮ

By Mahesh

ಮುಂಬೈ, ಏ.27: ಟೀಂ ಇಂಡಿಯಾದ ಆರಂಭಿಕ ಆಟಗಾರ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರು ತಮ್ಮ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿರುವ ಬಿಸಿಸಿಐಗೆ ಥ್ಯಾಂಕ್ಸ್ ಹೇಳಿದ್ದಾರೆ. ನಿಜಕ್ಕೂ ಇದು ನನಗೆ ಸಿಕ್ಕಿರುವ ದೊಡ್ಡ ಗೌರವ ಎಂದಿದ್ದಾರೆ.

ಕ್ರೀಡಾಲೋಕದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಸೋಮವಾರ (ಏ.27) ಶಿಫಾರಸು ಮಾಡಿತ್ತು.ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ಭಾನುವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿತ್ತು.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಸಭೆಯ ನಂತರ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ರೋಹಿತ್ ಶರ್ಮ ಅವರ ಹೆಸರನ್ನು ಈ ವರ್ಷದ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಪ್ರಕಟಿಸಿದರು.

I am honoured that BCCI recommended my name for Arjuna Award: Rohit Sharma

ಐಪಿಎಲ್ 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮ ಟೀಂ ಇಂಡಿಯಾ ಪರ 10 ಟೆಸ್ಟ್ ಪಂದ್ಯಗಳನ್ನಾಡಿದ್ದು, 135 ಏಕದಿನ ಹಾಗೂ 42 ಟಿ20 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ.

27ವರ್ಷ ವಯಸ್ಸಿನ ಮುಂಬೈ ಮೂಲದ ಆಟಗಾರ ರೋಹಿತ್ ಶರ್ಮ ಅವರು ಶ್ರೀಲಂಕಾ ವಿರುದ್ಧ 264ರನ್ ಚೆಚ್ಚುವ ಮೂಲಕ ಇಡೀ ಕ್ರಿಕೆಟ್ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದರು. ಏಕದಿನ ಕ್ರಿಕೆಟ್ ನಲ್ಲಿ ಎರಡು ಬಾರಿ ದ್ವಿಶತಕ ಸಿಡಿಸಿರುವ ರೋಹಿಟ್ ಶರ್ಮ ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಅಂಗಳದಲ್ಲಿ ಹರಿಸಿದ ರನ್ ಹೊಳೆ ಇಂದಿಗೂ ಅಭಿಮಾನಿಗಳಿಗೆ ಕಣ್ಣಿಗೆ ಕಟ್ಟಿದ್ದಂತೆ ಇದೆ.

ನೇಪಾಳದ ಭೂಕಂಪದ ಬಗ್ಗೆ ಅನುಕಂಪ:

ಅರ್ಜುನ ಪ್ರಶಸ್ತಿ ಬಗ್ಗೆ: "Kushi to bahut hai (I feel very happy). I am honoured that BCCI has recommended my name. It felt very good when I heard it yesterday," ಎಂದು ಅಡಿಡಾಸ್ ಕಂಪನಿ ಪ್ರಾಯೋಜಿತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರೋಹಿತ್ ಹೇಳಿದರು.

ಐಪಿಎಲ್ ಬಗ್ಗೆ : ಮುಂಬೈ ತಂಡದಲ್ಲಿ ಆಸ್ಟ್ರೇಲಿಯಾದ ಜೋಶ್ ಹೇಜಲ್ ವುಡ್ ಹಾಗೂ ನ್ಯೂಜಿಲೆಂಡ್ ನ ಆಲ್ ರೌಂಡರ್ ಕೋರೆ ಆಂಡರ್ಸನ್ ಇಲ್ಲದಿರುವುದು ಭಾರಿ ಹೊಡೆತ ನೀಡಿದೆ. ನ್ಯೂಜಿಲೆಂಡ್ ನ ಕಾಲಿನ್ ಮುನ್ರೋ ಹಾಗು ಮಿಚೆಲ್ ಮೆಕ್ ಕ್ಲೆನಘನ್ ಕರೆಸಿಕೊಳ್ಳಲಾಗಿದೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದಿದ್ದಾರೆ. (ಪಿಟಿಐ)

Story first published: Monday, February 19, 2018, 17:07 [IST]
Other articles published on Feb 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X