ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಗುಜರಾತ್!

Written By: Ramesh
Subscribe to Oneindia Kannada

ಇಂದೋರ್, ಜನವರಿ. 14 : ನಾಯಕ ಪಾರ್ಥಿವ್ ಪಟೇಲ್ 143 ರನ್ ಗಳ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಗುಜರಾತ್ ತಂಡ ಚೊಚ್ಚಲ ರಣಜಿ ಕ್ರಿಕೆಟ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತು.

65 ವರ್ಷಗಳ ನಂತರ ರಣಜಿ ಪೈನಲ್ ತಲುಪಿದ್ದ ಗುಜರಾತ್ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 41 ಬಾರಿ ಚಾಂಪಿಯನ್ ಮುಂಬೈ ತಂಡವನ್ನು ಮಣಿಸಿತು.

46ನೇ ಬಾರಿಗೆ ರಣಜಿ ಪೈನಲ್ ಗೆ ಬಂದಿದ್ದ ಬಲಿಷ್ಠ ಮುಂಬೈ ವಿರುದ್ದ 5 ವಿಕೆಟ್‌ಗಳ ಅಂತರದಿಂದ ಜಯಗಳಿಸಿದಗುಜರಾತ್ ಚೊಚ್ಚಲ ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

Historic: Captain Parthiv Patel (143) takes Gujarat to maiden Ranji Trophy title

ಮುಂಬೈ ನೀಡಿದ್ದ 312 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಗುಜರಾತ್ 89 ರನ್ ಗಳಿಸಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕ್ರೀಸ್ ಗೆ ಬಂದ ನಾಯಕ ಪಾರ್ಥಿವ್ ಪಟೇಲ್ ಹಾಗೂ ಮನ್ ಪ್ರೀತ್ ಜುನೇಜಾ ಜೋಡಿ ತಂಡಕ್ಕೆ ನೆರವಾಯಿತು.

ಪಾರ್ಥಿವ್ ಪಟೇಲ್ ಹಾಗೂ ಮನ್ ಪ್ರೀತ್ ಜುನೇಜಾ ಜೋಡಿ ನಾಲ್ಕನೇ ವಿಕೆಟ್ ಗೆ ಬರೋಬ್ಬರಿ 116 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಜುನೇಜಾ 54ರನ್ ಮತ್ತು ಪಾರ್ಥಿವ್ 196 ಎಸೆತಗಳಲ್ಲಿ 24 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್ ನೆರವಿನಿಂದ 143 ರನ್ ಗಳಿಸಿ ತಂಡದ ಗೆಲುವಿನ ರೂವಾರಿಯಾದರು.

ಸ್ಕೋರ್ ವಿವರ:
ಮುಂಬೈ: ಮೊದಲ ಇನ್ನಿಂಗ್ಸ್ 228 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 411 ರನ್ ಗಳಿಸಿತ್ತು.
ಗುಜರಾತ್: ಮೊದಲ ಇನ್ನಿಂಗ್ಸ್ ನಲ್ಲಿ 328 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 313 ರನ್ ಗಳಿಸಿ ರಣಜಿ ಚಾಂಪಿಯನ್ ಆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Captain Parthiv Patel (143) led from the front, hitting a match-winning century to take Gujarat to their maiden Ranji Trophy title here on Saturday (January 14).
Please Wait while comments are loading...