ಸಾವಿರ ರನ್ ಬಾರಿಸಿ ಇತಿಹಾಸ ನಿರ್ಮಿಸಿದ ಪ್ರಣವ್

Posted By:
Subscribe to Oneindia Kannada

ಮುಂಬೈ, ಜ.05: ಸರಿ ಸುಮಾರು 116 ವರ್ಷಗಳ ಹಿಂದಿನ ದಾಖಲೆಯೊಂದನ್ನು ಧ್ವಂಸಗೊಳಿಸಿದ ಬ್ಯಾಟ್ಸ್ ಮನ್ ಪ್ರಣವ್ ಧನವಾಡೆ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. 652ರನ್ ಗಳಿಸಿ ವಿಶ್ವದಾಖಲೆ ಬರೆದ ಪ್ರಣವ್ ಈಗಷ್ಟೇ(ಜನವರಿ 5) 1,000 ವೈಯಕ್ತಿಕ ರನ್ ಪೂರೈಸಿದ್ದಾರೆ.

ಸೋಮವಾರ ಶಾಲಾ ಟೂರ್ನಿಯೊಂದರಲ್ಲಿ 199 ಎಸೆತಗಳಲ್ಲಿ 652ರನ್ ದಾಖಲಿಸಿದ್ದರು. ಈಗ 1,000ರನ್ ಗಳಿಸಿ ಆಡುತ್ತಿದ್ದಾರೆ. ಇಲ್ಲಿ ತನಕ ಯಾರೊಬ್ಬರೂ ಸಾವಿರ ರನ್ ವೈಯಕ್ತಿಕ ಮೊತ್ತ ದಾಖಲಿಸಿದ ಉದಾಹರಣೆಗಳಿಲ್ಲ.

ಕೊನೆಗೆ ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸಿ ನಾಟೌಟ್ ಆಗಿ ಉಳಿದರು. (323 ಎಸೆತಗಳು, 395 ನಿಮಿಷಗಳು, 129X4, 59X6) 312.38 ಸ್ಟ್ರೈಕ್ ರೇಟ್.ಪ್ರಣವ್ ಸಾಧನೆಯಿಂದ ಶ್ರೀಮತಿ ಕೆಸಿ ಗಾಂಧಿ ಹೈಸ್ಕೂಲ್ 1,465 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. [652ರನ್ ಚೆಚ್ಚಿ ವಿಶ್ವ ದಾಖಲೆ ಬರೆದ ರಿಕ್ಷಾ ಚಾಲಕನ ಮಗ!]

Historic feat: Auto rickshaw driver's son Pranav Dhanawade scores a world record 1,000 runs

ಆಟೋರಿಕ್ಷಾ ಚಾಲಕರೊಬ್ಬರ ಮಗನಾಗಿರುವ 15 ವರ್ಷ ವಯಸ್ಸಿನ ಪ್ರಣವ್ ಅವರು ಅತ್ಯಧಿಕ ವೈಯಕ್ತಿಕ ಮೊತ್ತ ದಾಖಲಿಸಿದ ಸಾಧನೆ ಮಾಡಿದ್ದಾರೆ. 1899ರಲ್ಲಿ ಎಇಜೆ ಕಾಲಿನ್ಸ್ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು. ಕಾಲಿನ್ಸ್ ಅವರು ಔಟಾಗದೆ 628 ರನ್ ಗಳಿಸಿದ್ದರು.

ಮುಂಬೈನ ಕಲ್ಯಾಣ್ ಪ್ರದೇಶದಲ್ಲಿರುವ ಶ್ರೀಮತಿ ಕೆಸಿ ಗಾಂಧಿ ಹೈಸ್ಕೂಲ್ ಪರ ಆಡಿದ ಪ್ರಣವ್ ಅವರು 72 ಬೌಂಡರಿ, 28 ಸಿಕ್ಸರ್ ಸಿಡಿಸಿ ತಮ್ಮ ಹೆಸರನ್ನು ವಿಶ್ವದಾಖಲೆ ಪುಟದಲ್ಲಿ ಕೆತ್ತಿದರು. ಭಂಡಾರಿ ಕಪ್ ಅಂತರ್ ಶಾಲಾ ಪಂದ್ಯಾವಳಿಯಲ್ಲಿ ಆರ್ಯ ಗುರುಕುಲ ಶಾಲೆ ವಿರುದ್ಧ ಈ ದಾಖಲೆ ಮೊತ್ತ ಪೇರಿಸಿದರು.

ಪ್ರಶಾಂತ್ ಅವರ ಪ್ರತಿಕ್ರಿಯೆ: ಪ್ರಣವ್ 300ರನ್ ಬಾರಿಸಿದಾಗ ಅವರ ತಂದೆ ಪ್ರಶಾಂತ್ ಅವರು ಮೈದಾನಕ್ಕೆ ಬಂದರು. ಮಗನ ಆಟವನ್ನು ಕಣ್ತುಂಬಿಸಿಕೊಂಡಿದ್ದಾರೆ.11 ವರ್ಷಗಳ ಪರಿಶ್ರಮದ ಫಲವಾಗಿ ಈ ಸಾಧನೆ ಹೊರ ಬಂದಿದೆ.

ಕಲ್ಯಾಣ್ ಪ್ರದೇಶದಲ್ಲಿ ಉತ್ತಮ ಅನುಕೂಲ ಇಲ್ಲದ ಕಾರಣ ಬಾಂದ್ರಾದಲ್ಲಿ ಮಗನಿಗೆ ಕೋಚಿಂಗ್ ಕೊಡಿಸಬೇಕಾಯಿತು. ಮೊದಮೊದಲು ನಾನು ಅವನನ್ನು ಮೈದಾನದ ತನಕ ಬಿಟ್ಟು ಬರುತ್ತಿದ್ದೆ. ನಂತರ ತನ್ನ ಗೆಳೆಯರೊಡನೆ ಹೋಗ ತೊಡಗಿದ. ಆತನ ಕಠಿಣ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದಿದ್ದಾರೆ.

ವಿವಿಧ ಕ್ರಿಕೆಟ್ ಮಾದರಿಯಲ್ಲಿ ಅತ್ಯಧಿಕ ರನ್ ಸ್ಕೋರರ್ಸ್
* ಟೆಸ್ಟ್ : 400 ನಾಟೌಟ್ -ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
* ಪ್ರಥಮ ದರ್ಜೆ : 501 ನಾಟೌಟ್ ಬ್ರಿಯಾನ್ ಲಾರಾ (ವಾರ್ ವಿಕ್ ಶೈರ್)
* ಏಕದಿನ ಕ್ರಿಕೆಟ್ : 264-ರೋಹಿತ್ ಶರ್ಮ (ಭಾರತ)
* ಲಿಸ್ಟ್ ಎ (50 ಓವರ್ಸ್) -268- ಅಲಿ ಬ್ರೌನ್ (ಸರೆ)
* ಟಿ 20ಐ-156- ಅರೋನ್ ಫಿಂಚ್ (ಆಸ್ಟ್ರೇಲಿಯಾ)
* ಟಿ20-175 ನಾಟೌಟ್ - ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)


(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It had never happened in the history of cricket. But it all changed on a Tuesday afternoon (January 5) in Mumbai when 15-year-old schoolboy Pranav Dhanawade scored an incredible 1,000 runs during an Under-16 inter-school match. He is currently batting on 1,002 as the match continues.
Please Wait while comments are loading...