ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಅಸ್ತು ಎಂದ ಹೈಕೋರ್ಟ್

Subscribe to Oneindia Kannada

ಮುಂಬೈ, ಏಪ್ರಿಲ್, 07: ಇಂಡಿಯನ್ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯಕ್ಕೆ ಮುಂಬೈ ಹೈ ಕೋರ್ಟ್ ಅಸ್ತು ಎಂದಿದೆ. ತೀವ್ರ ಬರದ ನಡುವೆ ಅಗತ್ಯಕ್ಕಿಂತ ಹೆಚ್ಚಿನ ನೀರು ಪೋಲು ಮಾಡಿ ಪಂದ್ಯ ನಡೆಸಬೇಡಿ ಎಂದು ಖಾರವಾಗಿ ಹೇಳಿದ್ದ ಕೋರ್ಟ್ ಅವಕಾಶ ಕಲ್ಪಿಸಿಕೊಟ್ಟಿದೆ.

ಇದೀಗ ಏಪ್ರಿಲ್ 9 ರಂದು ಮುಂಬೈ ಇಂಡಿಯನ್ಸ್ ಮತ್ತು ರೂಸಿಂಗ್ ಪುಣೆ ಸೂಪರ್ ಜೈಂಟ್ಸ್ ನಡುವಿನ ಪಂದ್ಯಕ್ಕೆ ಇದ್ದ ಅಡ್ಡಿ ಆತಂಕಗಳು ದೂರವಾಗಿದೆ. ಕ್ರೀಡಾಂಗಣಕ್ಕೆ ಬೇಕಾದ ನೀರನ್ನು ಮಹಾರಾಷ್ಟ್ರ ಸರ್ಕಾರ ನೀಡುವುದಾಗಿ ಸಮ್ಮತಿ ಸೂಚಿಸಿದ ನಂತರ ಎಪ್ರಿಲ್ 9ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.[ಕ್ರಿಕೆಟ್‌ಗಿಂತ ಜನರೇ ಮುಖ್ಯ ಎಂದ ಮುಂಬೈ ಹೈ ಕೋರ್ಟ್]

ipl

ಇನ್ನುಳಿದ ಪಂದ್ಯಗಳನ್ನು ನಡೆಸುವ ಬಗ್ಗೆ ಕೋರ್ಟ್ ಏಪ್ರಿಲ್ 12 ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಕುಡಿಯಲು ನೀರಿಲ್ಲದೆ ಇರುವಾಗ ಕ್ರೀಡಾಂಗಣಕ್ಕೆ ಹೇಗೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ. ಹೀಗಾಗಿ ಪಂದ್ಯಕ್ಕೆ ತಡೆ ನೀಡಬೇಕು ಎಂದು ಕೋರಿ ಎನ್ ಜಿಒ ಸಂಘಟನೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಎಂ ಕಾನಡೆ ಹಾಗೂ ನ್ಯಾಯಮೂರ್ತಿ ಎಂಎಸ್ ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ನಡೆಸಿ ಬಿಸಿಸಿಐಗೆ ಛೀಮಾರಿ ಹಾಕಿತ್ತು.[ರವೀಂದ್ರ ಜಡೇಜ ಮದುವೆಗೆ ಧೋನಿ, ರೈನಾಗೆ ಆಹ್ವಾನವಿಲ್ಲ!]

ಒಂದೆಡೆ ಬರ ತಾಂಡವವಾಡುತ್ತಿದೆ. ಇಂಥ ಸಂದರ್ಭದಲ್ಲಿ ನೀವು ಕ್ರೀಡಾಂಗಣ ದುರಸ್ತಿ ಮಾಡಲು, ಸ್ವಚ್ಛ ಮಾಡಲು ಮನಸೋ ಇಚ್ಛೆ ನೀರು ಬಳಕೆ ಮಾಡುತ್ತಿದ್ದೀರಾ.. ಬೇಕಾದರೆ ಪಂದ್ಯಗಳನ್ನು ಬೇರೆ ರಾಜ್ಯಗಳಿಗೆ ಶಿಫ್ಟ್ ಮಾಡಿ' ಹೀಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆಗಳನ್ನು ಬಾಂಬೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bombay High Court on Thursday (April 7) permitted the inaugural Indian Premier League 2016 (IPL) match between Mumbai Indians and Rising Pune Supergiants to be held at the Wankhede Stadium here on Saturday (April 9) as scheduled.
Please Wait while comments are loading...