2007ರ ವಿಶ್ವ ಟಿ20 ಹೀರೋ ಈಗ ಹರ್ಯಾಣದ ಪೊಲೀಸ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 11: ವಿಶ್ವ ಟಿ20 ಚೊಚ್ಚಲ ಟೂರ್ನಮೆಂಟ್ ನಲ್ಲಿ ಟೀಂ ಇಂಡಿಯಾಕ್ಕೆ ರೋಚಕ ಜಯ ತಂದು ಕೊಟ್ಟ ವೇಗಿ ಜೋಗಿಂದರ್ ಶರ್ಮ ನೆನಪಿದ್ಯಾ. ಜೋಗಿಂದರ್ ಶರ್ಮರನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಟಿವಿ ಮಾಧ್ಯಮಗಳು ಈಗ ಹೊಸ ರೂಪದಲ್ಲಿರುವ ಶರ್ಮರನ್ನು ಮತ್ತೊಮ್ಮೆ ಪರಿಚಯಿಸಿವೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಜೋಗಿಂದರ್ ಶರ್ಮ ಅವರ ಬಗ್ಗೆ ಚರ್ಚೆ, ಪ್ರತಿಕ್ರಿಯೆ, ಅಚ್ಚರಿ ಭಾರಿ ಪ್ರಮಾಣದಲ್ಲಿ ವ್ಯಕ್ತವಾಗುತ್ತಿವೆ. ನೀಲಿ ಜರ್ಸಿ ತೊಟ್ಟು ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟ ವೇಗಿ ಈಗ ಖಾಕಿ ದಿರಿಸು ತೊಟ್ಟು ಖಡಕ್ ಸೆಲ್ಯೂಟ್ ಹೊಡೆಯುವ ಚಿತ್ರಗಳು ಓಡಾಡುತ್ತಿವೆ. [ವಿಶ್ವ ಟ್ವೆಂಟಿ20 2016 ಟೂರ್ನಿಗೆ ಫುಲ್ ಗೈಡ್]

ಹೌದು, ಟೀಂ ಇಂಡಿಯಾದಿಂದ ಹೊರ ಬಂದ ಮೇಲೆ ಜೋಗಿಂದರ್ ಶರ್ಮ ಅವರು ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಸಿಕ್ಕಿದ್ದ ಹುದ್ದೆಯಲ್ಲಿ ಮುಂದುವರೆದಿದ್ದರು. ಈಗ ಹರ್ಯಾಣದ ಉಪ ಅಧೀಕ್ಷಕ (ಡಿಎಸ್ ಪಿ) ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಾರತ ಪರ 4 ಏಕದಿನ ಕ್ರಿಕೆಟ್ ಪಂದ್ಯ ಹಾಗೂ 4 ಟಿ20 ಪಂದ್ಯವಾಡಿರುವ ಜೋಗಿಂದರ್ ಶರ್ಮ ಅವರ ಪ್ರತಿಭೆ ಮೆಚ್ಚಿ ನಾಯಕ ಎಂಎಸ್ ಧೋನಿ ಅವರು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಅವಕಾಶ ನೀಡಿದ್ದರು.

 ಜೋಗಿಂದರ್ ಶರ್ಮ ಅವರ ಬಗ್ಗೆ ಚರ್ಚೆ, ಪ್ರತಿಕ್ರಿಯೆ, ಅಚ್ಚರಿ

ಜೋಗಿಂದರ್ ಶರ್ಮ ಅವರ ಬಗ್ಗೆ ಚರ್ಚೆ, ಪ್ರತಿಕ್ರಿಯೆ, ಅಚ್ಚರಿ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಜೋಗಿಂದರ್ ಶರ್ಮ ಅವರ ಬಗ್ಗೆ ಚರ್ಚೆ, ಪ್ರತಿಕ್ರಿಯೆ, ಅಚ್ಚರಿ ಭಾರಿ ಪ್ರಮಾಣದಲ್ಲಿ ವ್ಯಕ್ತವಾಗುತ್ತಿವೆ. ನೀಲಿ ಜರ್ಸಿ ತೊಟ್ಟು ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟ ವೇಗಿ ಈಗ ಖಾಕಿ ದಿರಿಸು ತೊಟ್ಟು ಖಡಕ್ ಸೆಲ್ಯೂಟ್ ಹೊಡೆಯುವ ಚಿತ್ರಗಳು ಓಡಾಡುತ್ತಿವೆ.

ಮೋಹಿತ್ ಶರ್ಮ ಅವರ ಮದುವೆಯಲ್ಲಿ ಜೋಗಿಂದರ್

32 ವರ್ಷ ವಯಸ್ಸಿನ ಜೋಗಿಂದರ್ ಅವರು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇತ್ತೀಚೆಗೆ ಮೋಹಿತ್ ಶರ್ಮ ಅವರ ಮದುವೆ ಅರತಕ್ಷತೆಯಲ್ಲಿ ಮಾಜಿ ಕ್ರಿಕೆಟರ್ ವೀರೇಂದರ್ ಸೆಹ್ವಾಗ್ ಜೊತೆ ಕಾಣಿಸಿಕೊಂಡಿದ್ದರು.

2007ರ ವಿಶ್ವ ಟಿ20 ಮಿಸ್ಬಾ ವಿಕೆಟ್

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಪಾಕಿಸ್ತಾನ ವಿರುದ್ಧದ ಅಂತಿಮ ಹಣಾಹಣಿಯ ಅಂತಿಮ ಓವರ್ ನಲ್ಲಿ ಪಾಕಿಸ್ತಾನದ ನಾಯಕ ಮಿಸ್ಬಾ ಉಲ್ ಹಕ್ ಅವರ ವಿಕೆಟ್ ಪಡೆಯುವ ಮೂಲಕ ಭಾರತ ಕ್ರಿಕೆಟ್ ರಂಗದ ಹೊಸ ಸ್ಟಾರ್ ಎನಿಸಿಕೊಂಡರು.

ಭಾರತ ಕ್ರಿಕೆಟ್ ರಂಗದ ಹೊಸ ಸ್ಟಾರ್ ಎನಿಸಿದ್ದರು.

2007ರ ವಿಶ್ವ ಟಿ20 ಫೈನಲ್ ಪಂದ್ಯದ ಕೊನೆ ಓವರ್ ನಲ್ಲಿ ಸ್ಕೂಪ್ ಮಾಡಲು ಯತ್ನಿಸಿದ ಉಲ್ ಹಕ್ ಅವರು ಶ್ರೀಶಾಂತ್ ಗೆ ಕ್ಯಾಚ್ ನೀಡಿದ್ದರು. ಇದಾದ ಬಳಿಕ ಜೋಗಿಂದರ್ ಭಾರತ ಕ್ರಿಕೆಟ್ ರಂಗದ ಹೊಸ ಸ್ಟಾರ್ ಎನಿಸಿದ್ದರು. ಆಮೇಲೆ ಐಪಿಎಲ್ ನಲ್ಲಿ ಆಡಿದರೂ ಜೋಗಿಂದರ್ ಮಂಕಾದರು. ಪ್ರಥಮ ದರ್ಜೆಯಲ್ಲಿ 2,689ರನ್ ಹಾಗೂ 289 ವಿಕೆಟ್ ಪಡೆದಿದ್ದಾರೆ.

ಯಮುನಾನಗರ್ ನ ಡಿಎಸ್ ಪಿಯಾದ ಜೋಗಿಂದರ್

ಹರ್ಯಾಣದ ಯಮುನಾನಗರ್ ನ ಡಿಎಸ್ ಪಿಯಾದ ಜೋಗಿಂದರ್ ಶರ್ಮ ಅವರ ಚಿತ್ರಗಳು.

ಧೋನಿ ಮುಂದೆ ಏನಾಗಬಹುದು?

ಜೋಗಿಂದರ್ ಶರ್ಮ ಡಿಎಸ್ ಪಿಯಾಗಬಹುದಾದರೆ, ಧೋನಿ ಮುಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾದರೂ ಅಚ್ಚರಿ ಪಡಬೇಕಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
That television is a medium with a powerful impact proved to be true for Joginder Sharma, India's bowling all-rounder who shot to fame for his successul final over against Pakistan in the final of the inaugural T20 World Cup in Johannesburg in South Africa in 2007.
Please Wait while comments are loading...