ಆರೋಹಿ ಗೂಗ್ಲಿಗೆ ಕ್ರಿಸ್ ಗೇಲ್ ಬೋಲ್ಡ್

Posted By:
Subscribe to Oneindia Kannada

ಬೆಂಗಳೂರು, ಮೇ 06: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಅವರಿಗೆ ಭಾರತದ ಯುವತಿಯೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಸಕತ್ತಾಗಿ ಗೂಗ್ಲಿ ಹಾಕಿದ್ದಾರೆ. ಯುವತಿ ಆರೋಹಿ ಗೂಗ್ಲಿಗೆ ಗೇಲ್ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ವೆಸ್ಟ್ ಇಂಡೀಸ್ ತಂಡದ ಪ್ಲೇ ಬಾಯ್ ಗಳ ಪಟ್ಟಿಯಲ್ಲಿ ಸದಾ ಕಾಣಿಸಿಕೊಳ್ಳುವ ಗೇಲ್ ಅವರು ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ನಲ್ಲಿ ಕ್ರೀಡಾ ವರದಿಗಾರ್ತಿಯೊಬ್ಬರಿಗೆ 'ಡೋಂಟ್ ಬ್ಲಶ್ ಬೇಬಿ' ಎಂದು ಹೇಳಿ ದಂಡ ತೆತ್ತಿದ್ದು ನೆನಪಿರಬಹುದು.

Here's what happened when Chris Gayle was asked out for a date by Indian girl

ಇತ್ತೀಚೆಗಷ್ಟೇ ಗೆಳತಿಯಿಂದ ಮಗುವನ್ನು ಪಡೆದು 'ಬ್ಲಶ್' ಎಂದು ಹೆಸರಿಟ್ಟಿದ್ದರು. ಈಗ ಮತ್ತೆ ಐಪಿಎಲ್ ನಲ್ಲಿ ಆಡಲು ಬಂದಿರುವ ಗೇಲ್ ಅವರು ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬರ ಜೊತೆ ಸರಸ ಸಂಭಾಷಣೆ ನಡೆಸಿದ್ದಾರೆ.

ಗೇಲ್ ನಿಮ್ಮ ಜೊತೆ ಡೇಟಿಂಗ್ ಹೋಗುವ ಮನಸ್ಸಾಗಿದೆ ಎಂದು ಆರೋಹಿ ಎಂಬ ಯುವತಿ ಕೇಳಿದರೆ, ಅದಕ್ಕೆ ಉತ್ತರಿಸಿದ ಗೇಲ್, ಬಿಲ್ ನೀವೇ ಕಟ್ಟಬೇಕು ಎಂದಿದ್ದಾರೆ.

ಇದಕ್ಕೆ ಸಕತ್ ರಿಪ್ಲೇ ನೀಡಿದ ಯುವತಿ, ಓಹೋ ಅದಕ್ಕೇನಂತೆ, ಬಿಲ್ ಕಟ್ಟುವೆ ಆದ್ರೆ, ಆರ್ ಸಿಬಿ ಪರ ಶತಕ ಸಿಡಿಸಬೇಕು ಎಂದು ಕಂಡೀಷನ್ ಹಾಕಿದ್ದಾರೆ.

ಇವರಿಬ್ಬರ ಟ್ವೀಟ್ಸ್ ನೋಡಿ ಮತ್ತಷ್ಟು ಅಭಿಮಾನಿಗಳು ಪ್ರತಿಕ್ರಿಯೆಗಳನ್ನು ಹರಿಸಿದ್ದಾರೆ.

ಆರ್ ಸಿಬಿ ತಂಡದ ಪರ ಮೂರು ಪಂದ್ಯಗಳನ್ನಾಡಿರುವ ಗೇಲ್ ಅವರು ಕೇವಲ 7ರನ್ ಗಳಿಸಿದ್ದಾರೆ. ಅಲ್ಲದೆ, ಆರ್ ಸಿಬಿ ಕೂಡಾ ಕೇವಲ 2 ಪಂದ್ಯ ಮಾತ್ರ ಗೆದ್ದು ಹೀನಾಯ ಸ್ಥಿತಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Explosive West Indies batsman Chris Gayle has a huge fan following in India as well as outside India. Recently, one of Gayle's Indian female fans went on to Twitter and asked him, "@henrygayle my heart is pumping only for u boss..! Can we go for a date?"
Please Wait while comments are loading...