ದ್ವಿಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ಆಮ್ಲ ಗುಡ್ ಬೈ

Posted By:
Subscribe to Oneindia Kannada

ನ್ಯೂಲ್ಯಾಂಡ್ಸ್, ಜ.06: ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಹಶೀಂ ಆಮ್ಲಾ ಅವರು ತಮ್ಮ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜನವರಿ 06ರಿಂದ ಜಾರಿಗೆ ಬರುವಂತೆ ಸ್ಥಾನವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಈಗ ಟೆಸ್ಟ್ ತಂಡಕ್ಕೆ ಉಪ ನಾಯಕ ಎಬಿ ಡಿವಿಲಿಯರ್ಸ್‌ ಅವರು ನಾಯಕರಾಗಿ ನೇಮಕಗೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಡ್ರಾ ನಲ್ಲಿ ಮುಕ್ತಾಯವಾದ ಬೆನ್ನಲ್ಲೇ ಆಮ್ಲಾ ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ನಾಯಕರಾಗಿ ಆಮ್ಲಾ ಅವರು 14 ಟೆಸ್ಟ್‌ಗಳಲ್ಲಿ ಮುನ್ನಡೆಸಿ, ನಾಲ್ಕು ಗೆಲುವು, 6 ಡ್ರಾ ಹಾಗೂ 6 ಸೋಲು ಕಂಡಿದ್ದರು.

2015ರಲ್ಲಿ ಕಳೆದ 12 ಇನ್ನಿಂಗ್ಸ್ ನಲ್ಲಿ ಕೇವಲ 251ರನ್ ಗಳಿಸಿ 22.81ರನ್ ಸರಾಸರಿ ಮಾತ್ರ ಹೊಂದಿದ್ದರು. ಆದರೆ, ಕಳೆದ ಇನ್ನಿಂಗ್ಸ್ ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದರು.

Hashim Amla steps down as South Africa Test skipper

ಜೂನ್ 2014ರಲ್ಲಿ ನಾಯಕ ಗ್ರೇಮ್ ಸ್ಮಿತ್ ನಿವೃತ್ತಿಯ ಬಳಿಕ ಅಮ್ಲ ದಕ್ಷಿಣ ಆಫ್ರಿಕದ ಟೆಸ್ಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು.

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಆಫ್ರಿಕ ಸೋಲು ಅನುಭವಿಸಿತ್ತು. ಎರಡನೆ ಟೆಸ್ಟ್‌ನ್ನು ಡ್ರಾ ಮಾಡಿಕೊಂಡಿದೆ.ಕಳೆದ ವರ್ಷ ಭಾರತ ಪ್ರವಾಸದಲ್ಲಿ ಆಫ್ರಿಕ ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿತ್ತು. ಅಮ್ಲ ನಾಯಕತ್ವದಲ್ಲಿ ವೈಫಲ್ಯ ಅನುಭವಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಇಂಗ್ಲೆಂಡ್ ವಿರುದ್ದ ಮುಕ್ತಾಯಗೊಂಡ ಎರಡನೇ ಟೆಸ್ಟ್‌ನಲ್ಲಿ ದ್ವಿಶತಕ ದಾಖಲಿಸಿ ಫಾರ್ಮ್‌ಗೆ ಮರಳಿದ್ದರು. ಇದು ನಾಲ್ಕನೆ ದ್ವಿಶತಕ 707 ನಿಮಿಷಗಳ ಬ್ಯಾಟಿಂಗ್‌ನಲ್ಲಿ 477 ಎಸೆತಗಳನ್ನು ಎದುರಿಸಿ 27 ಬೌಂಡರಿಗಳ ಸಹಾಯದಿಂದ 201 ರನ್ ಗಳಿಸಿದ್ದರು. 32ರ ಹರೆಯದ ಅಮ್ಲ 90 ಟೆಸ್ಟ್‌ಗಳಲ್ಲಿ ಈ ವರೆಗೆ 24 ಶತಕ ಮತ್ತು 28 ಅರ್ಧಶತಕಗಳನ್ನು ಒಳಗೊಂಡ 7,108 ರನ್ ಸಂಪಾದಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hashim Amla has resigned from South Africa Test skipper's position on Wednesday, Jan 6, with immediate effect.
Please Wait while comments are loading...