ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಲಾಕಾಥಾನ್ : ಹಶೀಂ ಆಮ್ಲಾ ಅಭೂತಪೂರ್ವ ದಾಖಲೆ

By Mahesh

ನವದೆಹಲಿ, ಡಿ.07: ಟೆಸ್ಟ್ ಇತಿಹಾಸದಲ್ಲೇ ಈ ರೀತಿ ಎದುರಿಸಿದ ಚೆಂಡುಗಳನ್ನು ಬ್ಲಾಕ್ ಮಾಡಿದ ಉದಾಹರಣೆ ಸುಲಭಕ್ಕೆ ಸಿಗುವುದಿಲ್ಲ. ಭಾರತದ ಬೌಲರ್ ಗಳ ಎಸೆತವನ್ನು ಬ್ಲಾಕ್ ಮಾಡುತ್ತಾ ಬ್ಲಾಕಾಥಾನ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ನಾಯಕ ಹಶೀಂ ಆಮ್ಲಾ ಅವರು ದಾಖಲೆಯ ಪುಸ್ತಕ ಸೇರಿದ್ದಾರೆ. ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಇದಕ್ಕೆ ಕಾರಣ.

ಭಾರತ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಸೋಮವಾರ (ಡಿಸೆಂಬರ್ 07) ಅಸಲಿ ಟೆಸ್ಟ್ ಕ್ರಿಕೆಟ್ ಬ್ಯಾಟ್ಸ್ ಮನ್ ಎಂದರೆ ಹೇಗೆ ಆಡುವುದು ಎಂಬುದನ್ನು ಆಮ್ಲಾ ತೋರಿಸಿದ್ದಾರೆ. ಟಿ20 ಕಾಲದಲ್ಲಿ ಈ ರೀತಿ ಆಟ ಕಂಡು ಬಂದಿರುವುದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಎಲ್ಲರ ತಾಳ್ಮೆ ಪರೀಕ್ಷಿಸಿತು.

| ಸರಣಿಯ ಗ್ಯಾಲರಿ

ಭಾನುವಾರ ಹಾಗೂ ಸೋಮವಾರ ಆಮ್ಲಾ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಸದ್ಯಕ್ಕಂತು ಯಾರೊಬ್ಬರೂ ಮುರಿಯುವ ಲಕ್ಷಣ ಇಲ್ಲ ಬಿಡಿ. ಕೊನೆಗೂ ರವೀಂದ್ರ ಜಡೇಜ ಅವರು 32 ವರ್ಷ ವಯಸ್ಸಿನ ಆಮ್ಲಾ ಅವರ ಆಫ್ ಸ್ಟಂಪ್ ಉದುರಿಸಿ ಪೆವಿಲಿಯನ್ ಗೆ ಅಟ್ಟಿದರು.

Hashim Amla blocks his way into record books

ಔಟಾಗುವ ಆಮ್ಲಾ ಅವರು 244 ಎಸೆತಗಳಲ್ಲಿ 25 ರನ್ (288 ನಿಮಿಷಗಳು) ಗಳಿಸುವ ಮೂಲಕ ದಾಖಲೆ ಬರೆದರು. ಇವರ ಇನ್ನಿಂಗ್ಸ್ ನಲ್ಲಿ 230 ಡಾಟ್ ಬಾಲ್ ಇತ್ತು. 9 ಸಿಂಗಲ್ಸ್ ಹಾಗೂ 2 ಡಬಲ್, 3 ಬೌಂಡರಿ ಬಾರಿಸಿದರು.[ಕೋಟ್ಲಾದಲ್ಲಿ ಕೋಟಳೆ ಮಾಡದೆ ಕೊಹ್ಲಿ ಪಡೆಗೆ ಶರಣಾದ ಹರಿಣಗಳು]

ಜಡೇಜ ಅವರ 87 ಎಸೆತಗಳನ್ನು ಎದುರಿಸಿದ ಆಮ್ಲಾ ಅವರು ಕೇವಲ 5 ರನ್ ಗಳಿಸಿದರು. 84 ಡಾಟ್ ಬಾಲ್ 1 ಸಿಂಗಲ್ ಹಾಗೂ 2 ಡಬಲ್ ಬಾರಿಸಿದ್ದರು.

200 ಹಾಗೂ ಅಧಿಕ ಎಸೆತ ಎದುರಿಸಿದ ಆಟಗಾರರ ಪಟ್ಟಿಯಂತೆ ಆಮ್ಲಾ ಅವರ 10.24 ಸ್ಟ್ರೈಕ್ ರೇಟ್ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಪ್ರಮಾಣ ಸ್ಟ್ರೈಕ್ ರೇಟ್ ಆಗಿದೆ. 88 ಟೆಸ್ಟ್ ಪಂದ್ಯವಾಡಿರುವ ಆಮ್ಲಾ ಅವರ ವೃತ್ತಿ ಬದುಕಿನ ಸ್ಟ್ರೈಕ್ ರೇಟ್ 50ಕ್ಕಿಂತ ಹೆಚ್ಚಾಗಿದೆ.

ಟೆಸ್ಟ್ ಇನ್ನಿಂಗ್ಸ್ ನ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ (200ಕ್ಕಿಂತ ಅಧಿಕ ಎಸೆತಗಳು) ಟಾಪ್ -5:
* ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ) - 244 ಎಸೆತಗಳಲ್ಲಿ 25 ರನ್ (ಸ್ಟ್ರೈಕ್ ರೇಟ್ 10.24) vs ಭಾರತ, ನವದೆಹಲಿ (2015)

* ಜಾಕ್ ರಸೆಲ್ (ಇಂಗ್ಲೆಂಡ್)- 235 ಎಸೆತಗಳಲ್ಲಿ 29 ಅಜೇಯ (12.34) vs ದಕ್ಷಿಣ ಆಫ್ರಿಕಾ, ಜೋಹಾನ್ಸ್ ಬರ್ಗ್ (1995)

* ಕ್ರಿಸ್ ಟಾವರ್ (ಇಂಗ್ಲೆಂಡ್) - 240 ಎಸೆತಗಳಲ್ಲಿ 35 ಅಜೇಯ (14.58) vs ಭಾರತ, ಚೆನ್ನೈ (1982)

* ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) - 220 ಎಸೆತಗಳಲ್ಲಿ 33 ರನ್ (15.04) vs ಭಾರತ, ಅಹಮದಾಬಾದ್ (2012)

* ಯೂನಿಸ್ ಅಹ್ಮದ್ (ಪಾಕಿಸ್ತಾನ)- 226 ಎಸೆತಗಳಲ್ಲಿ 34 ಅಜೇಯ (15.04) vs ಭಾರತ, ಅಹಮದಾಬಾದ್ (1987)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X