ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದೇಕೆ?

Posted By:
Subscribe to Oneindia Kannada

ಲಂಡನ್, ಜೂನ್ 19: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಹೀನಾಯವಾಗಿ ಸೋಲುವುದನ್ನು ತಪ್ಪಿಸಲು ಹಾರ್ದಿಕ್ ಪಾಂಡ್ಯ ಯತ್ನಿಸಿದ್ದು ನೆನಪಿರಬಹುದು.

ಆದರೆ, ರವೀಂದ್ರ ಜಡೇಜ ಜತೆ ಹೊಂದಾಣಿಕೆ ಇಲ್ಲದೆ ರನ್ ಔಟ್ ಆದ ಹಾರ್ದಿಕ್ ಪಾಂಡ್ಯ ಮಾಡಿದ್ದೇನು? ಡ್ರೆಸಿಂಗ್ ರೂಮಿಗೆ ಹೋಗಿ ಜಡೇಜ ಜತೆ ಕಿತ್ತಾಟ ಮಾಡಿಕೊಂಡ್ರಾ? ಎಂಬ ಕೆಟ್ಟ ಕುತೂಹಲ ಎಲ್ಲರಲ್ಲೂ ಇತ್ತು. ಇದಕ್ಕೆ ಪೂರಕವಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡಾ ಏನೇನೋ ಟ್ವೀಟ್ ಮಾಡಿದ್ದಾರೆ.

Hardik Pandya takes a veiled dig at 'teammates' for loss against Pakistan, deletes tweet later

ಸಿಟ್ಟಿನಲ್ಲಿ ಟ್ವೀಟ್ ಮಾಡಿ ಟೀಂ ಇಂಡಿಯಾದ ಸದಸ್ಯರ ಮೇಲೆ ಕಿಡಿಕಾರಿದ್ದು ನಿಜವೇ? ಟ್ವೀಟ್ ಆಮೇಲೆ ಡಿಲೀಟ್ ಆಗಲು ಯಾರು ಕಾರಣ? ಉತ್ತರ ಗೊತ್ತಿಲ್ಲನಿನ್ನೆ ರಾತ್ರಿ ಸುಮಾರು 10.15ರ ವೇಳೆ ಟ್ವೀಟ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ, 'ನಮ್ಮವರೇ ನಮ್ಮನ್ನು ಲೂಟಿ ಮಾಡಿದರು, ಬೇರೆಯವರನ್ನು ಯಾಕೆ ದೂರಬೇಕು' ಎಂದಿದ್ದರು.

43ಎಸೆತಗಳಲ್ಲಿ ಪಾಂಡ್ಯಾ ಗಳಿಸಿದ್ದು ಬರೋಬ್ಬರಿ 76ರನ್ ಗಳಿಸಿದ್ದ ಪಾಂಡ್ಯ ಪಂದ್ಯವನ್ನು ಮುಗಿಸುವ ಹುಮ್ಮಸ್ಸಿನಲ್ಲಿದ್ದರು. ಅದರೆ, ರನೌಟ್ ಆಗುತ್ತಿದ್ದಂತೆ ಪೆವಿಲಿಯನ್ ತಲುಪುವ ತನಕ ಬೈದುಕೊಂಡೆ ಹೋದರು. 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಆಡಂ ಗಿಲ್ ಕ್ರಿಸ್ಟ್ ದಾಖಲೆಯನ್ನು ಮುರಿದಿದ್ದರು.

ನಂತರ ಡ್ರೆಸಿಂಗ್ ರೂಮಿನಲ್ಲಿ ಏನು ಮಾತುಕತೆ ನಡೆಯಿಯೋ ಏನೋ,ಶತಕ ಬಾರಿಸಿದ ಫಖಾರ್ ಜಮಾನ್ ಗೆ ಜೀವದಾನ(ನೋಬಾಲ್ ಮಾಡಿ) ನೀಡಿದ ಬೂಮ್ರಾ, ರನೌಟ್ ಮಾಡಿಸಿದ ಜಡೇಜ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸೋದರರು ಇದೇ ಟ್ವೀಟ್ ಮಾಡಿ ಕಿತ್ತಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan humiliated India by a huge margin of 180 runs to lift their maiden ICC Champions Trophy on Sunday (June 18).After losing the final, India cricketer Hardik Pandya took a veiled dig at Bumrah's no-ball, which cost India badly in the game.
Please Wait while comments are loading...