ಟಿ20ಯಲ್ಲಿ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

Posted By:
Subscribe to Oneindia Kannada

ವಡೋದರಾ (ಗುಜರಾತ್), ಜ. 11: ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ರೋಚಕ ಬ್ಯಾಟಿಂಗ್ ನಡುವೆಯೂ ಬರೋಡಾ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಸೋಲು ಕಂಡಿದೆ. ಭಾನುವಾರ (ಜನವರಿ 10) ನಡೆದ ಪಂದ್ಯದಲ್ಲಿ ಪಾಂಡ್ಯ ಅವರು ಒಂದೇ ಓವರ್ ನಲ್ಲಿ 5 ಸಿಕ್ಸರ್ ಹಾಗೂ 1 ಬೌಂಡರಿ ಚೆಚ್ಚಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ.

ವಡೋದರಾದ ರಿಲಯನ್ಸ್ ಸ್ಟೇಡಿಯಂನಲ್ಲಿ 22 ವರ್ಷ ವಯಸ್ಸಿನ ಪ್ರತಿಭೆ ಪಾಂಡ್ಯ ಅವರು ಇನ್ನು ಒಂದೇ ಒಂದು ಸಿಕ್ಸ್ ಹೊಡೆದಿದ್ದರೆ ದಾಖಲೆ ವೀರರ ಪಟ್ಟಿ ಸೇರುತ್ತಿದ್ದರು. 6 ಎಸೆಗಳಲ್ಲಿ 6 ಸಿಕ್ಸರ್ ಬಾರಿಸಿದವರ ಪೈಕಿ ಸರ್ ಗ್ಯಾರಿಫೀಲ್ಡ್ ಸೋಬರ್ಸ್ (1968ರಲ್ಲಿ), ರವಿಶಾಸ್ತ್ರಿ(1985), ಹರ್ಷಲ್ ಗಿಬ್ಸ್ (2007), ಯುವರಾಜ್ ಸಿಂಗ್ (2007) ಹಾಗೂ ಅಲೆಕ್ಸ್ ಹೇಲ್ಸ್ (2015) ರಲ್ಲಿ ಈ ಸಾಧನೆ ಮಾಡಿದ್ದಾರೆ. [ಟಿ20: ಉತ್ತಪ್ಪ ಉತ್ತಮ ಆಟ, ಕರ್ನಾಟಕಕ್ಕೆ ಜಯ]

Hardik Pandya smashes 5 sixes in T20 record 39-run over

ಪಾಂಡ್ಯ ಅವರಿಗೆ ಸ್ವಲ್ಪದರಲ್ಲೇ ಈ ದಾಖಲೆ ಮಿಸ್ ಆಯಿತು. ಎಡಗೈ ವೇಗಿ ಅಕಾಶ್ ಸೂದನ್ ಆವರ ಬೌಲಿಂಗ್ ನಲ್ಲಿ 19ನೇ ಓವರ್ ನಲ್ಲಿ 39ರನ್ ಬಂದಿತು. ಪಾಂಡ್ಯ ಅವರೇ 34ರನ್ ಚೆಚ್ಚಿದರು. 4 ಬೈ ಹಾಗೂ 1 ನೋಬಾಲ್ ಕೂಡಾ ಸೇರಿಕೊಂಡಿತು. ಟಿ 20 ಇತಿಹಾಸದಲ್ಲೇ ಇದು ಅತ್ಯಂತ ದುಬಾರಿ ಓವರ್ ಎನಿಸಿದೆ. ಈ ಹಿಂದೆ ನ್ಯೂಜಿಲೆಂಡ್ ನ ಸ್ಕಾಟ್ ಸ್ಟೈರಿಸ್ ಅವರು ಸಸೆಕ್ಸ್ ಪರ ಆಡುತ್ತಾ ಗ್ಲೊಸೆಸ್ಟಷೈರ್ ವಿರುದ್ಧ ಇಂಗ್ಲೆಂಡಿನಲ್ಲಿ 2012ರಲ್ಲಿ 38ರನ್ ಚೆಚ್ಚಿಸಿಕೊಂಡಿದ್ದರು.

ಪಾಂಡ್ಯ ಅವರ ವೀರೋಚಿತ ಬ್ಯಾಟಿಂಗ್ ನಡುವೆಯೂ ಬರೋಡಾ ತಂಡದ ವಿರುದ್ಧ ದೆಹಲಿ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಗಳ ಜಯ ದಾಖಲಿಸಿತು. ಪಾಂಡ್ಯ 51 ಎಸೆತಗಳಲ್ಲಿ 81 ರನ್ (5x4,6x6) ಬಾರಿಸಿದರು. ಸೂದನ್ 4 ಓವರ್ ಗಳಲ್ಲಿ 2/47 ಕೊಟ್ಟರು.

ಬರೋಡಾ 20 ಓವರ್ ಗಳಲ್ಲಿ 153/6
ದೆಹಲಿ 156/5, 19.3 ಓವರ್ಸ್

ದಾಖಲೆ ಓವರ್ ನ ಪ್ರತಿ ಎಸೆತದ ವಿವರ (ಪಾಂಡ್ಯಗೆ ಸೂದನ್ ಎಸೆತ)

* ಮೊದಲ ಎಸೆತ- 6
* 2ನೇ ಎಸೆತ- 4 ಬೈಸ್
* 3ನೇ ಎಸೆತ- 6
* 4ನೇ ಎಸೆತ- 6+1 ನೋಬಾಲ್
* 5ನೇ ಎಸೆತ- 6
* 6ನೇ ಎಸೆತ- 6
* 7ನೇ ಎಸೆತ- 6

ಒಟ್ಟಾರೆ-
39ರನ್ (34 ಪಾಂಡ್ಯ ಬ್ಯಾಟಿನಿಂದ :1 ನೋಬಾಲ್, 4 ಬೈಸ್)

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All-rounder Hardik Pandya, who was last month included in the Indian Twenty20 squad to tour Australia, belatedly celebrated the call-up in a big way as he smashed 5 sixes and 1 four for Baroda against Delhi in a Syed Mushtaq Ali Trophy T20 game on Sunday (January 10).
Please Wait while comments are loading...