ಯುವಿ ಬದಲಿಗೆ ತಂಡಕ್ಕೆ ಹಾರ್ದಿಕ್ , ಟ್ವಿಟ್ಟರ್ ಫ್ಯಾನ್ಸ್ ಗರಂ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 02: ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಚೊಚ್ಚಲ ಪಂದ್ಯವಾಡಿ ಗಮನ ಸೆಳೆದ ಪ್ರತಿಭೆ. ಆದರೆ, ಟೆಸ್ಟ್ ತಂಡಕ್ಕೆ ಹಾರ್ದಿಕ್ ಆಯ್ಕೆಯಾಗಿರುವುದರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಂಗ್ಲೆಂಡ್ ವಿರುದ್ಧ ಮುಂಬರುವ ಎರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಬಿಸಿಸಿಐ ಬುಧವಾರ(ನವೆಂಬರ್ 02) ಪ್ರಕಟಿಸಿದೆ. ನವೆಂಬರ್ 09ರಂದು ರಾಜ್ ಕೋಟ್ ನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. 15 ಸದಸ್ಯರ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಆಯ್ಕೆ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. [ಇಂಗ್ಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ, ಕರುಣ್ ಇನ್!]

23 ವರ್ಷ ವಯಸ್ಸಿನ ಬರೋಡಾದ ಕ್ರಿಕೆಟರ್ ಹಾರ್ದಿಕ್ ಮಾತ್ರ ಟೆಸ್ಟ್ ತಂಡದಲ್ಲಿ ಹೊಸ ಮುಖ ಎನಿಸಿಕೊಂಡಿದ್ದಾರೆ. ಹಾರ್ದಿಕ್ ಆಯ್ಕೆ ಅಚ್ಚರಿಯಾಗಿದೆ ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಯುವರಾಜ್ ಸಿಂಗ್ ಕಡೆಗಣಿಸಿದ್ದೇಕೆ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ ಯುವರಾಜ್ ಸಿಂಗ್ ಅವರು ದ್ವಿಶತಕ ಬಾರಿಸಿದರೂ ಆಯ್ಕೆದಾರರರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ.

ಆದರೆ, ಟೀಂ ಇಂಡಿಯಾ 'ಎ' ತಂಡ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಪಡೆದುಕೊಂಡಿರುವ ಹಾರ್ದಿಕ್ ಪಾಂಡ್ಯ್ ಅವರು ಆಲ್ ರೌಂಡರ್ ಎಂಬ ಕಾರಣಕ್ಕೆ ಪರಿಗಣಿಸಲಾಗಿದೆ ಎಂದು ಆಯ್ಕೆದಾರರ ಸಮಿತಿಯ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಆಯ್ಕೆ ಸಮರ್ಥಿಸಿಕೊಂಡ ಎಂಎಸ್ ಕೆ ಪ್ರಸಾದ್

ಆಯ್ಕೆ ಸಮರ್ಥಿಸಿಕೊಂಡ ಎಂಎಸ್ ಕೆ ಪ್ರಸಾದ್

ಬಿಸಿಸಿಐ ಆಯ್ಕೆದಾರರ ಸಮಿತಿಯ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಪ್ರತಿಕ್ರಿಯಿಸಿ, ನಾವು ಕಪಿಲ್ ದೇವ್ ನಂತರ ವೇಗದ ಬೌಲರ್ ಕಮ್ ಬ್ಯಾಟ್ಸ್ ಮನ್ ಗಾಗಿ ಹುಡುಕಾಟ ನಡೆಸಿದ್ದೇವೆ. ಯುವ ಪ್ರತಿಭೆಗೆ ಅವಕಾಶ ನೀಡುವುದು ಮುಖ್ಯ. ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಮಾರ್ಗದರ್ಶನ ಪಾಂಡ್ಯಗೆ ಸಿಕ್ಕಿದೆ ಎಂದಿದ್ದಾರೆ.

ಆಯ್ಕೆದಾರರಿಗೆ ಡೋಪಿಂಗ್ ಟೆಸ್ಟ್ ಮಾಡಿಸಿ

ಆಯ್ಕೆದಾರರಿಗೆ ಡೋಪಿಂಗ್ ಟೆಸ್ಟ್ ಮಾಡಿಸಬೇಕು. ಪಾಂಡ್ಯ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದರೆ, ಇದರಲ್ಲಿ ಏನೋ ಮೋಸವಿದೆ. ಸತ್ಯ ಹೊರಬರಲಿ.

ರೋಹಿತ್ ಶರ್ಮ ಗಾಯಾಳುವಾಗಿದ್ದೆ ಸಮಸ್ಯೆ

ರೋಹಿತ್ ಶರ್ಮ ಗಾಯಾಳುವಾಗಿದ್ದೆ ಆಯ್ಕೆದಾರರಿಗೆ ಸಮಸ್ಯೆಯಾಗಿರಬೇಕು. ಯಾರನ್ನು ಆಯ್ಕೆ ಮಾಡುವುದು ಎಂದು ತಿಳಿಯದೆ ಪಾಂಡ್ಯಗೆ ಅವಕಾಶ ನೀಡಿದ್ದಾರೆ. ಯುವರಾಜ್ ಸಿಂಗ್ ಅವರು ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಪರಿಗಣಿಸದೆ ಇರುವುದು ದುರದೃಷ್ಟಕರ.

ಟೀಂ ಇಂಡಿಯಾ ತಂಡ ಹೊಸ ವಾಟರ್ ಬಾಯ್

ಬ್ರೇಕಿಂಗ್ ನ್ಯೂಸ್: ಟೀಂ ಇಂಡಿಯಾ ತಂಡ ಹೊಸ ವಾಟರ್ ಬಾಯ್ ಹಾರ್ದಿಕ್ ಪಾಂಡ್ಯ ಎಂದು ಘೋಷಿಸಿದ ಟ್ವೀಟ್ ಲೋಕ.

ಕೆಎಲ್ ರಾಹುಲ್ ಗೆ ಸ್ಥಾನವಿಲ್ಲ ಪಾಂಡ್ಯಗೆ ಸ್ಥಾನ

ಕೆಎಲ್ ರಾಹುಲ್ ಗೆ ಸ್ಥಾನವಿಲ್ಲ ಪಾಂಡ್ಯಗೆ ಸ್ಥಾನ ಇದಕ್ಕಿಂತ ಅಚ್ಚರಿಯ ವಿಷ್ಯವಿದೆಯೇ? ಕೆಎಲ್ ರಾಹುಲ್ ಗಾಯ ಇನ್ನೂ ಮಾಗಿಲ್ಲವೇ?

ಎಚ್ ಪಿ ಎಂದರೆ ಹೈ ಪವರ್

ಹಾರ್ದಿಕ್ ಪಾಂಡ್ಯ ಎಂದರೆ ಎಚ್ ಪಿ HP HIGH POWER, ನಿಮ್ಮ ಪ್ರತಿಭೆಯೇ ನಿಮ್ಮನ್ನು ಇಲ್ಲಿ ತನಕ ಕರೆದುಕೊಂಡು ಬಂದಿದೆ ಎಂದ ಫ್ಯಾನ್ಸ್

ಇಶಾಂತ್, ಗೌತಮ್ ಗೆ ವೆಲ್ ಕಮ್ ಬ್ಯಾಕ್

ಇಶಾಂತ್, ಗೌತಮ್ ಗೆ ವೆಲ್ ಕಮ್ ಬ್ಯಾಕ್ , ಹಾರ್ದಿಕ್ ಪಾಂಡ್ಯಗೆ ಉತ್ತಮ ಅವಕಾಶ ಲಭಿಸಿದೆ ಎಂದಿದ್ದಾರೆ ರಾಹುಲ್ ದ್ರಾವಿಡ್.

ಆಯ್ಕೆದಾರರಿಗೆ ಹಾರ್ದಿಕ ಶುಭ ಕಾಮನೆ

ಆಯ್ಕೆದಾರರಿಗೆ 'ಹಾರ್ದಿಕ' ಶುಭ ಕಾಮನೆ, ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಆಯ್ಕೆ ಮಾಡಿದ್ದು ಕುತೂಹಲ, ಅಚ್ಚರಿಯ ವಿಷಯ.

ಯುವರಾಜ್ ಸಿಂಗ್ ಆಟಕ್ಕೆ ಬೆಲೆಯೇ ಇಲ್ಲವೇ?

ರಣಜಿಯಲ್ಲಿ 3 ಪಂದ್ಯಗಳಲ್ಲೇ 500 ಪ್ಲಸ್ ರನ್ ಗಳಿಸಿರುವ ಯುವರಾಜ್ ಸಿಂಗ್ ರನ್ನು ಕಡೆಗಣಿಸಿರುವುದು ಸರಿಯಲ್ಲ. ಪಾಂಡ್ಯ ಆಯ್ಕೆ ಏಕೆ? ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All-rounder Hardik Pandya on Wedesday (Nov 2) got maiden Test call-up as the 15-member Indian Test squad announced for the first two matches against England, starting November 9 in Rajkot.
Please Wait while comments are loading...