ಅರರೇǃ ಹಾರ್ದಿಕ್ ಪಾಂಡ್ಯ ಇದೇನ್ ಹೇರ್ ಸ್ಟೈಲ್

Posted By:
Subscribe to Oneindia Kannada

ನವದೆಹಲಿ, ಜುಲೈ 17:ಶ್ರೀಲಂಕಾಕ್ಕೆ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸುದ್ದಿಯಲ್ಲಿದ್ದಾರೆ.

ಟ್ವೀಟ್, ಡ್ರೆಸಿಂಗ್ ರೂಮ್ ಗಲಾಟೆ, ವಿಕೆಟ್ ಕಿತ್ತಾಗ ವಿಶಿಷ್ಟ ಸಂಭ್ರಮಾಚರಣೆಗಳ ಮೂಲಕ ಸುದ್ದಿಯಾಗಿದ್ದ ಹಾರ್ದಿಕ್ ಈ ಬಾರಿ ತಮ್ಮ ಕೇಶವಿನ್ಯಾಸದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾರ್ದಿಕ್ಪಾಂಡ್ಯ ಅಲ್ಲದೆ ರೋಹಿತ್ ಶರ್ಮ ಹಾಗೂ ಅಜಿಂಕ್ಯರಹಾನೆ ಕೂಡಾ ತಮ್ಮ ಕೇಶ ವಿನ್ಯಾಸ ಬದಲಾಯಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದೇಕೆ?

ಇವರೆಲ್ಲರ ನೆತ್ತಿಯ ಮೇಲೆ ಕತ್ತರಿ ಹಾಕಿದವರು ಹಕೀಮ್ ಅಲಿಮ್. ಅಲಿಮ್ ಅವರ ಪ್ರತಿಭೆಯನ್ನು ಹಾರ್ದಿಕ್ ಅವರು ಕೊಂಡಾಡಿ ಟ್ವೀಟ್ ಮಾಡಿದ್ದಾರೆ. ಹಲವು ಭಂಗಿಯಲ್ಲಿ ನಿಂತು ಚಿತ್ರ ತೆಗೆಸಿಕೊಂಡುತಮ್ಮ ಹೊಸ ಕೇಶ ವಿನ್ಯಾಸವನ್ನು ಪ್ರದರ್ಶಿಸಿದ್ದಾರೆ.ಜುಲೈ 21ರಿಂದ ಶುರುವಾಗುವ ಶ್ರೀಲಂಕಾ ಪ್ರವಾಸಕ್ಕೆ ಮುನ್ನ ನನ್ನ ಹೊಸ ಹೇರ್ ಸ್ಟೈಲ್ ಎಂದು ಇನ್ಸ್ಟಾಗ್ರಾಮ್ ನಲ್ಲಿ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.

ಪಾಂಡ್ಯ ಬ್ರದರ್ಸ್ ಟ್ವೀಟ್ ವಾರ್ ಗೆ ಸಕತ್ ಉತ್ತರ ನೀಡಿದ ಸೆಹ್ವಾಗ್

ಚಿತ್ರಕೃಪೆ: ಹಾರ್ದಿಕ್ ಪಾಂಡ್ಯ, ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮ ಇನ್ಸ್ಟಾಗ್ರಾಮ್ ಐಡಿ

ಅಲಿಮ್ ಹೇರ್ ಸ್ಟೈಲ್

ಅಲಿಮ್ ಹೇರ್ ಸ್ಟೈಲ್

ಅಲಿಮ್ ಹೇರ್ ಸ್ಟೈಲ್ ಗೆ ಪಾಂಡ್ಯ ಅವರು ಟ್ವೀಟ್ ಮಾಡಿ, ನೀವೊಬ್ಬ ಜಾದೂಗಾರ. ಹಾಗಾಗಿಯೇ, ನಾವು ನಿಮ್ಮನ್ನು ಇಷ್ಟಪಡ್ತೇವೆ ಎಂದಿದ್ದಾರೆ. ಕೇಶ ವಿನ್ಯಾಸದ ಚಿತ್ರಗಳ ಜತೆಗೆ ಅಲಿಮ್ ಜತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಕ್ರಿಕೆಟರ್ಸ್ ಅಚ್ಚುಮೆಚ್ಚು

ಕ್ರಿಕೆಟರ್ಸ್ ಅಚ್ಚುಮೆಚ್ಚು

ಬಹುಶಃ ಎಂಎಸ್ ಧೋನಿ ಹೊರತುಪಡಿಸಿ ಹಾಲಿ ತಂಡದ ಪ್ರಮುಖ ಆಟಗಾರರ ತಲೆ ಮೇಲೆ ಅಲಿಮ್ ಕತ್ತರಿಯಾಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವಿರಾಟ್ ಕೊಹ್ಲಿ ತಲೆಗೆ ಹೊಸ ರೂಪ ನೀಡಿದ್ದರು. ಈಗ ಆರಂಭಿಕ ಆಟಗಾರರಾದ ರೋಹಿತ್ ಶರ್ಮ, ಅಜಿಂಕ್ಯ ರಹಾನೆಗೆ ಶಾರ್ಪ್ ಹೇರ್ ಕಟ್ ಹಾಗೂ ಸ್ಟೈಲಿಶ್ ಲುಕ್ ನೀಡಿದ್ದಾರೆ.

ಸೆಲೆಬ್ರಿಟಿಗಳ ಮೆಚ್ಚಿನ ಹೇರ್ ಸ್ಟೈಲಿಶ್

ಸೆಲೆಬ್ರಿಟಿಗಳ ಮೆಚ್ಚಿನ ಹೇರ್ ಸ್ಟೈಲಿಶ್

ಹೃತಿಕ್ ರೋಷನ್, ರಣಬೀರ್ ಕಪೂರ್, ವರುಣ್ ಧವನ್ ಸೇರಿದಂತೆ ಅನೇಕ ನಟರಿಗೆ ಅಲಿಮ್ ಅವರು ಕೇಶವಿನ್ಯಾಸಕರಾಗಿದ್ದಾರೆ. ಇತ್ತೀಚೆಗೆ ಅಜಾನ್ ವಿವಾದದಿಂದಾಗಿ ಸವಾಲು ಸ್ವೀಕರಿಸಿ ತಲೆ ಬೋಳಿಸಿಕೊಂಡ ಗಾಯಕ ಸೋನು ನಿಗಮ್ ಅವರ ತಲೆ ಕೂದಲು ಬೋಳಿಸಿದ್ದು ಹಕಿಮ್.

Champions Trophy 2017: Little Boy Crying and Angry On Jadeja| Hardik Pandya Run Out|Oneindia Kannada
ಮೋಹ್ವಕ್ ಶೈಲಿಗೆ ಬೇಡಿಕೆ

ಮೋಹ್ವಕ್ ಶೈಲಿಗೆ ಬೇಡಿಕೆ

ಧೋನಿ ಅವರು ಹಿಂದೊಮ್ಮೆ ಮೋಹ್ವಕ್ ಕೇಶ ವಿನ್ಯಾಸ ಹೊಂದಿದ್ದರು. ಇದೇ ರೀತಿ ಶೈಲಿ ಹೊಂದಲು ರಹಾನೆ ಹಾಗೂ ಹಾರ್ದಿಕ್ ಬಯಸಿದ್ದರು. ಕೊನೆಗೆ ಮೋಹ್ವಕ್ ಶೈಲಿ ವಿನ್ಯಾಸವನು ಸ್ವಲ್ಪ ಬದಲಾಯಿಸಿ ಹಾರ್ದಿಕ್ ಹೊಸ ವಿನ್ಯಾಸಕ್ಕೆ ಮೊರೆ ಹೋದರೆ, ರಹಾನೆ ಸರಳವಾದ ಶಾರ್ಪ್ ಕಟ್ ವಿನ್ಯಾಸವನ್ನು ಒಪ್ಪಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All rounder Hardik Pandya gets a funky haircut ahead of India tour of Sri Lanka. Rohit Sharma and Ajinkya Rahane also visited Haki Alim for makeover.
Please Wait while comments are loading...