ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅರರೇǃ ಹಾರ್ದಿಕ್ ಪಾಂಡ್ಯ ಇದೇನ್ ಹೇರ್ ಸ್ಟೈಲ್

By Mahesh

ನವದೆಹಲಿ, ಜುಲೈ 17: ಶ್ರೀಲಂಕಾಕ್ಕೆ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸುದ್ದಿಯಲ್ಲಿದ್ದಾರೆ.

ಟ್ವೀಟ್, ಡ್ರೆಸಿಂಗ್ ರೂಮ್ ಗಲಾಟೆ, ವಿಕೆಟ್ ಕಿತ್ತಾಗ ವಿಶಿಷ್ಟ ಸಂಭ್ರಮಾಚರಣೆಗಳ ಮೂಲಕ ಸುದ್ದಿಯಾಗಿದ್ದ ಹಾರ್ದಿಕ್ ಈ ಬಾರಿ ತಮ್ಮ ಕೇಶವಿನ್ಯಾಸದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾರ್ದಿಕ್ ಪಾಂಡ್ಯ ಅಲ್ಲದೆ ರೋಹಿತ್ ಶರ್ಮ ಹಾಗೂ ಅಜಿಂಕ್ಯರಹಾನೆ ಕೂಡಾ ತಮ್ಮ ಕೇಶ ವಿನ್ಯಾಸ ಬದಲಾಯಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದೇಕೆ?ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದೇಕೆ?

ಇವರೆಲ್ಲರ ನೆತ್ತಿಯ ಮೇಲೆ ಕತ್ತರಿ ಹಾಕಿದವರು ಹಕೀಮ್ ಅಲಿಮ್. ಅಲಿಮ್ ಅವರ ಪ್ರತಿಭೆಯನ್ನು ಹಾರ್ದಿಕ್ ಅವರು ಕೊಂಡಾಡಿ ಟ್ವೀಟ್ ಮಾಡಿದ್ದಾರೆ. ಹಲವು ಭಂಗಿಯಲ್ಲಿ ನಿಂತು ಚಿತ್ರ ತೆಗೆಸಿಕೊಂಡು ತಮ್ಮ ಹೊಸ ಕೇಶ ವಿನ್ಯಾಸವನ್ನು ಪ್ರದರ್ಶಿಸಿದ್ದಾರೆ. ಜುಲೈ 21ರಿಂದ ಶುರುವಾಗುವ ಶ್ರೀಲಂಕಾ ಪ್ರವಾಸಕ್ಕೆ ಮುನ್ನ ನನ್ನ ಹೊಸ ಹೇರ್ ಸ್ಟೈಲ್ ಎಂದು ಇನ್ಸ್ಟಾಗ್ರಾಮ್ ನಲ್ಲಿ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.

ಪಾಂಡ್ಯ ಬ್ರದರ್ಸ್ ಟ್ವೀಟ್ ವಾರ್ ಗೆ ಸಕತ್ ಉತ್ತರ ನೀಡಿದ ಸೆಹ್ವಾಗ್ಪಾಂಡ್ಯ ಬ್ರದರ್ಸ್ ಟ್ವೀಟ್ ವಾರ್ ಗೆ ಸಕತ್ ಉತ್ತರ ನೀಡಿದ ಸೆಹ್ವಾಗ್

ಚಿತ್ರಕೃಪೆ: ಹಾರ್ದಿಕ್ ಪಾಂಡ್ಯ, ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮ ಇನ್ಸ್ಟಾಗ್ರಾಮ್ ಐಡಿ

ಅಲಿಮ್ ಹೇರ್ ಸ್ಟೈಲ್

ಅಲಿಮ್ ಹೇರ್ ಸ್ಟೈಲ್

ಅಲಿಮ್ ಹೇರ್ ಸ್ಟೈಲ್ ಗೆ ಪಾಂಡ್ಯ ಅವರು ಟ್ವೀಟ್ ಮಾಡಿ, ನೀವೊಬ್ಬ ಜಾದೂಗಾರ. ಹಾಗಾಗಿಯೇ, ನಾವು ನಿಮ್ಮನ್ನು ಇಷ್ಟಪಡ್ತೇವೆ ಎಂದಿದ್ದಾರೆ. ಕೇಶ ವಿನ್ಯಾಸದ ಚಿತ್ರಗಳ ಜತೆಗೆ ಅಲಿಮ್ ಜತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಕ್ರಿಕೆಟರ್ಸ್ ಅಚ್ಚುಮೆಚ್ಚು

ಕ್ರಿಕೆಟರ್ಸ್ ಅಚ್ಚುಮೆಚ್ಚು

ಬಹುಶಃ ಎಂಎಸ್ ಧೋನಿ ಹೊರತುಪಡಿಸಿ ಹಾಲಿ ತಂಡದ ಪ್ರಮುಖ ಆಟಗಾರರ ತಲೆ ಮೇಲೆ ಅಲಿಮ್ ಕತ್ತರಿಯಾಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವಿರಾಟ್ ಕೊಹ್ಲಿ ತಲೆಗೆ ಹೊಸ ರೂಪ ನೀಡಿದ್ದರು. ಈಗ ಆರಂಭಿಕ ಆಟಗಾರರಾದ ರೋಹಿತ್ ಶರ್ಮ, ಅಜಿಂಕ್ಯ ರಹಾನೆಗೆ ಶಾರ್ಪ್ ಹೇರ್ ಕಟ್ ಹಾಗೂ ಸ್ಟೈಲಿಶ್ ಲುಕ್ ನೀಡಿದ್ದಾರೆ.

ಸೆಲೆಬ್ರಿಟಿಗಳ ಮೆಚ್ಚಿನ ಹೇರ್ ಸ್ಟೈಲಿಶ್

ಸೆಲೆಬ್ರಿಟಿಗಳ ಮೆಚ್ಚಿನ ಹೇರ್ ಸ್ಟೈಲಿಶ್

ಹೃತಿಕ್ ರೋಷನ್, ರಣಬೀರ್ ಕಪೂರ್, ವರುಣ್ ಧವನ್ ಸೇರಿದಂತೆ ಅನೇಕ ನಟರಿಗೆ ಅಲಿಮ್ ಅವರು ಕೇಶವಿನ್ಯಾಸಕರಾಗಿದ್ದಾರೆ. ಇತ್ತೀಚೆಗೆ ಅಜಾನ್ ವಿವಾದದಿಂದಾಗಿ ಸವಾಲು ಸ್ವೀಕರಿಸಿ ತಲೆ ಬೋಳಿಸಿಕೊಂಡ ಗಾಯಕ ಸೋನು ನಿಗಮ್ ಅವರ ತಲೆ ಕೂದಲು ಬೋಳಿಸಿದ್ದು ಹಕಿಮ್.

ಮೋಹ್ವಕ್ ಶೈಲಿಗೆ ಬೇಡಿಕೆ

ಮೋಹ್ವಕ್ ಶೈಲಿಗೆ ಬೇಡಿಕೆ

ಧೋನಿ ಅವರು ಹಿಂದೊಮ್ಮೆ ಮೋಹ್ವಕ್ ಕೇಶ ವಿನ್ಯಾಸ ಹೊಂದಿದ್ದರು. ಇದೇ ರೀತಿ ಶೈಲಿ ಹೊಂದಲು ರಹಾನೆ ಹಾಗೂ ಹಾರ್ದಿಕ್ ಬಯಸಿದ್ದರು. ಕೊನೆಗೆ ಮೋಹ್ವಕ್ ಶೈಲಿ ವಿನ್ಯಾಸವನು ಸ್ವಲ್ಪ ಬದಲಾಯಿಸಿ ಹಾರ್ದಿಕ್ ಹೊಸ ವಿನ್ಯಾಸಕ್ಕೆ ಮೊರೆ ಹೋದರೆ, ರಹಾನೆ ಸರಳವಾದ ಶಾರ್ಪ್ ಕಟ್ ವಿನ್ಯಾಸವನ್ನು ಒಪ್ಪಿಕೊಂಡಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X