ಟೆಸ್ಟ್ ಕ್ರಿಕೆಟ್ ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ

Posted By:
Subscribe to Oneindia Kannada

ಪಲ್ಲೆಕೆಲೆ, ಆಗಸ್ಟ್ 13 : ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಿಡಿಸುವುದರ ಜತೆಗೆ ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಚಚ್ಚಿದ ಏಕೈಕ ಭಾರತೀಯ ಆಟಗಾರನೆಂಬ ಹೆಗ್ಗಳಿಕೆ ಹಾರ್ದಿಕ್ ಪಾಂಡ್ಯಾ ಪಾತ್ರರಾಗಿದ್ದಾರೆ.

ಫೈನಲ್ ಪಂದ್ಯದಲ್ಲಿ ತ್ವರಿತ ಅರ್ಧಶತಕ, ದಾಖಲೆ ಬರೆದ ಪಾಂಡ್ಯ

ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ನ 2ನೇ ದಿನವಾದ ಭಾನುವಾರದಂದು 116ನೇ ಓವರ್ ನಲ್ಲಿ ಪಾಂಡ್ಯಾ 26 ರನ್ ಚಚ್ಚಿದರು. ಈ ಮೂಲಕ 1990ರಲ್ಲಿ ಕಪಿಲ್ ದೇವ್ ಅವರ ಹೆಸರಿನಲ್ಲಿದ್ದ ಒಂದೇ ಓವರ್ ನಲ್ಲಿ 24 ರನ್ ಹೊಡೆದಿದ್ದ ದಾಖಲೆಯನ್ನು ಪಾಂಡ್ಯಾ ಮುರಿದರು.

Hardik pandya breaks kapil dev's record in Test Cricket

ಎಡಗೈ ಸ್ಪಿನ್ನರ್ ಮಲಿಂದ ಪುಷ್ಪಕುಮಾರ ಎಸೆದ ಆರಂಭದ ಎರಡು ಎಸೆತವನ್ನು ಬೌಂಡರಿಗೆ ಅಟ್ಟಿದ್ದರೆ, ನಂತರ ಮೂರು ಎಸೆತದಲ್ಲಿ ಪಾಂಡ್ಯಾ ಸತತ ಮೂರು ಸಿಕ್ಸರ್ ಹೊಡೆಯುವ ಆ ಓವರ್ ನಲ್ಲಿ ಬರೋಬ್ಬರಿ 26 ರನ್ ಗಳಿಸಿ ಈ ದಾಖಲೆ ನಿರ್ಮಿಸಿದರು.

ಅರರೇǃ ಹಾರ್ದಿಕ್ ಪಾಂಡ್ಯ ಇದೇನ್ ಹೇರ್ ಸ್ಟೈಲ್

India vs Srilanka : Dhawan And KL Rhaul Scored Half Centuries

ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ವೆಸ್ಟ್ ಇಂಡೀಸ್‍ ನ ಬ್ರಿಯಾನ್ ಲಾರಾ ಮತ್ತು ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಅವರ ಹೆಸರಿನಲ್ಲಿದೆ. ಇವರಿಬ್ಬರು ಒಂದೇ ಓವರ್ ನಲ್ಲಿ 28 ರನ್ ಹೊಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The big-hitting Indian all-rounder was at it again when he blasted record-breaking 26 runs in an over against Sri Lanka in Pallekele on Sunday, August 13.
Please Wait while comments are loading...