ಅಭಿಮಾನಿಗೆ 'ನಾಯಿ' ಎಂದು ಕರೆದ ಹರ್ಭಜನ್ ಸಿಂಗ್

Posted By:
Subscribe to Oneindia Kannada

ಮುಂಬೈ, ಮಾರ್ಚ್ 31: ವಿಶ್ವ ಟಿ20 ಟೂರ್ನಮೆಂಟ್ ನಲ್ಲಿ ಆಡುವ ಅವಕಾಶಕ್ಕಾಗಿ ಕಾದಿರುವ ಸ್ಟಾರ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗೆ ಗರಂ ಆಗಿದ್ದರು. ಬಿಟ್ಟಿ ಸಲಹೆ ನೀಡಿ ಕಿಚಾಯಿಸಿದ ಅಭಿಮಾನಿಯನ್ನು ಗಾದೆ ಮಾತಿನ ಮೂಲಕ ಹರ್ಭಜನ್ ತಿರುಗೇಟು ನೀಡಿದ್ದಾರೆ.

ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಟ್ವಿಟರ್​ನಲ್ಲಿ ಚಾಟಿ ಏಟು ನೀಡಿರುವುದು ತಮಾಷೆ ವಿಷಯವಾಗಿಲ್ಲ. ಹಿಂದೊಮ್ಮೆ ಟ್ರಾಫಿಕ್ ಜಾಮ್ ಮಾಡುವ ಲೋಡ್ ಗಾಡಿಯೊಂದರ ಬಗ್ಗೆ ಟ್ವೀಟ್ ಮಾಡಿ ಸಿಟ್ಟು ತೀರಿಸಿಕೊಂಡಿದ್ದರು.[ಝೀವಾ ಜತೆ ವಿರಾಟ್, ಹರ್ಭಜನ್ ಬ್ರಾವೋ ಫೋಟೋ]

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಭಾರತ ತಂಡಕ್ಕೆ ಪುನರ್ ಪ್ರವೇಶ ಪಡೆದ ಹರ್ಭಜನ್ ಸಿಂಗ್ ಹೆಚ್ಚಿನ ಅವಕಾಶ ಸಿಗದೆ ತಂಡದಲ್ಲಿ ಬೆಂಚ್ ಕಾಯುವ ಕೆಲಸದಲ್ಲಿರುವುದು ಅವರ ಅಭಿಮಾನಿಗಳಿಗೆ ನಿರಾಶೆಯಾಗಿರುವುದಂತೂ ಸತ್ಯ. ಇದನ್ನೆ ಹಾಸ್ಯಮಯವಾಗಿ ಹೇಳಿದ್ದು ಹರ್ಭಜನ್ ಗೆ ಸಿಟ್ಟು ತರಿಸಿರಬಹುದು.[ಹರ್ಭಜನ್ ಸಿಂಗ್ 'ಎಕ್ಸ್ ಟ್ರಾ ಪ್ಲೇಯರ್' ?]

ತಂಡದಲ್ಲಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅಲ್ಲದೆ ಯುವರಾಜ್ ಸಿಂಗ್ ಕೂಡಾ ಸ್ಪಿನ್ ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರುತ್ತಿರುವುದರಿಂದ ಹರ್ಭಜನ್ ಗೆ ಸ್ಥಾನ ಸಿಗುವುದು ಕಷ್ಟವಾಗಿದೆ. [ಹರ್ಭಜನ್, ಅಶ್ವಿನ್ ಇಬ್ಬರು ಚಕ್ಕರ್ಸ್ ಎಂದ ಪಾಕಿಸ್ತಾನಿ]

ಜವಾಬ್ಧಾರಿಯುತ ನಿರ್ವಹಣೆ ತೋರುತ್ತಿರುವುದರಿಂದ ಕಳೆದ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಭಾರತ ತಂಡಕ್ಕೆ ಪುನರಾಗಮ ಕಂಡಿದ್ದ ಬಜ್ಜಿ ಕೆಲ ಪಂದ್ಯಗಳನ್ನಾಡಿ ಬೆಂಚ್ ಕಾಯಿಸಿದ್ದೇ ಹೆಚ್ಚು.

ಈ ರೀತಿ ಕಿಚಾಯಿಸುವುದು ಕಾಮನ್

ಈ ರೀತಿ ಕಿಚಾಯಿಸುವುದು ಕಾಮನ್

ಏನಿದೆ ಟ್ವೀಟ್ ನಲ್ಲಿ : ಅಣ್ಣಾ ನಿಮ್ಮ ಭಾರತ ಪ್ರವಾಸ ಹೇಗೆ ಸಾಗುತ್ತಿದೆ? ಸಕತ್ ಮಜಾ ಸಿಗುತ್ತಿದ್ದೀಯಾ? ಫ್ರೀ ಹೋಟೆಲ್, ಊಟ, ಡಿನ್ನರ್ ಎಲ್ಲವೂ... ಮಸ್ತ್ ಲೈಫ್ ಅಲ್ವಾ ಎಂದು ಟ್ವೀಟ್ ಮಾಡಿದ್ದರು.

ತಿರುಗೇಟು ನೀಡಿದ ಹರ್ಭಜನ್ ಸಿಂಗ್

ತಿರುಗೇಟು ನೀಡಿದ ಹರ್ಭಜನ್ ಸಿಂಗ್

ಇದಕ್ಕೆ ಪ್ರತಿಕ್ರಿಯಿಸಿದ್ದ ಹರ್ಭಜನ್, ‘ ಬಜಾರಿನಲ್ಲಿ ಆನೆ ನಡೆಯುವಾಗ ಸಾವಿರ ನಾಯಿಗಳು ಬೊಗಳುತ್ತವೆ, ಅವುಗಳಲ್ಲಿ ನೀನು ಒಬ್ಬ'( ಹಾತಿ ಚಲಾ ಬಜಾರ್ ಕುತ್ತೇ ಬೊಕ್ಕೆ ಹಜಾರ್, ಯು ಆರ್ ವನ್ ಆಫ್ ದೆಮ್ ಎಂದು ತಿರುಗೇಟು ನೀಡಿದ್ದರು.

ಗಾದೆ ಮಾತನ್ನು ಹೇಳಿದ ಭಜ್ಜಿ

ಗಾದೆ ಮಾತನ್ನು ಹೇಳಿ ಸಿಟ್ಟು ಪ್ರದರ್ಶಿಸಿದ ಹರ್ಭಜನ್ ಸಿಂಗ್

ಪುಟ್ಟ ಬಾಲಕನನ್ನು ಭೇಟಿ ಮಾಡಿದ್ದ ಭಜ್ಜಿ

ಪುಟ್ಟ ಬಾಲಕನನ್ನು ಭೇಟಿ ಮಾಡಿದ್ದ ಭಜ್ಜಿ, ಫೋಟೊ ಹಂಚಿಕೊಂಡಿದ್ದರು.

ಬ್ರಾವೋ ಜತೆ ಧೋನಿ ಮನೆಗೆ ಹೋದ ಸಮಯ

ಬ್ರಾವೋ ಜತೆ ಧೋನಿ ಮನೆಗೆ ಹೋಗಿ ಧೋನಿ ಪುತ್ರಿ ಝೀವಾ ಜೊತೆ ಫೋಟೊ ಹಂಚಿಕೊಂಡ ಹರ್ಭಜನ್ ಸಿಂಗ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Harbhajan Singh slams a Fan by calling him 'Dog'. A fan took twitter to tease Star spinner by tell him that he is on a tour package getting all the salary, bonus and not working.
Please Wait while comments are loading...