ಆಟಗಾರರ ಸಂಭಾವನೆ ಹೆಚ್ಚಳಕ್ಕೆ ಕುಂಬ್ಳೆಗೆ ಹರ್ಭಜನ್ ಮನವಿ

Posted By:
Subscribe to Oneindia Kannada

ಮುಂಬೈ, ಮೇ 18: ರಣಜಿ ಆಟಗಾರರಿಗೆ ಸಿಗುತ್ತಿರುವ ಕಡಿಮೆ ಸಂಭಾವನೆ ಬಗ್ಗೆ ಹಿರಿಯ ಕ್ರಿಕೆಟರ್ ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಕೋಚ್ ಅನಿಲ್ ಕುಂಬ್ಳೆ ಅವರಿಗೆ ಪತ್ರ ಬರೆದು ಸಂಭಾವನೆ ಹೆಚ್ಚಳ ಮಾಡುವಂತೆ ಆಗ್ರಹಪೂರ್ವಕ ಮನವಿ ಮಾಡಿಕೊಂಡಿದ್ದಾರೆ.

ದೇಶೀಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಆಡುವ ಆಟಗಾರರಿಗೆ ಕೇವಲ 1.5 ಲಕ್ಷ ರು. ಸಂಭಾವನೆ ಸಿಗುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ರಣಜಿ ಆಡುವವನಾಗಿ ನನ್ನ ಸಹ ಆಟಗಾರರು ಹಣಕಾಸಿನ ವಿಚಾರಕ್ಕೆ ಪರದಾಡುವುದನ್ನು ನೋಡಿದ್ದೇನೆ. ದಯಮಾಡಿ ಇವರ ಸಮಸ್ಯೆಯತ್ತ ಬಿಸಿಸಿಐ ಗಮನಹರಿಸುವಂತೆ ಮಾಡಿ' ಎಂದು ಹರ್ಭಜನ್ ಸಿಂಗ್ ಪತ್ರದಲ್ಲಿ ಬರೆದಿದ್ದಾರೆ.

Harbhajan Singh raises issue of low match fees in Ranji Trophy with Anil Kumble

ಮೇ 21ರಂದು ಸಿಒಎ ಅಧಿಕಾರಿಗಳೊಂದಿಗೆ ಅನಿಲ್ ಕುಂಬ್ಳೆ ಚರ್ಚೆ ನಡೆಸಲಿದ್ದು, ಕ್ರಿಕೆಟ್ ಆಟಗಾರರ ಸಂಭಾವನೆ ಕುರಿತು ಚರ್ಚಿಸಲಿದ್ದಾರೆ.

ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ದೇಶೀ ಕ್ರಿಕೆಟಿಗರ ಹಣಕಾಸಿನ ಸಮಸ್ಯೆಯ ಬಗ್ಗೆ ಬಿಸಿಸಿಐ ಗಮನಕ್ಕೆ ತರುವಂತೆ ಭಜ್ಜಿ ಪತ್ರ ಬರೆದಿದ್ದು, ಮೇ 21 ರಂದು ಕುಂಬ್ಳೆ ಬಿಸಿಸಿಐನ ಆಡಳಿತಾಧಿಕಾರಿಗಳ ಎದುರು ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಷಯ ಮಂಡಿಸಲಿದ್ದಾರೆ.(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Time away from national team has given Harbhajan Singh a fresh perspective about the condition of an average domestic cricketer, prompting him to request chief national coach Anil Kumble to raise the issue of their match fees with the COA.
Please Wait while comments are loading...