ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಭಜನ್ ಮದ್ವೆಯಲ್ಲಿ ಗಲಾಟೆ, ಸ್ಸಾರಿ ಕೇಳಿದ ಭಜ್ಜಿ

By Mahesh

ಜಲಂಧರ್, ಅ.30: ಪಂಜಾಬಿ ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಗೆಳತಿ ಗೀತಾ ಬಸ್ರಾರನ್ನು ಭವ್ಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಈ ಶುಭ ಸಂದರ್ಭದ ನಡುವೆ ಮದುವೆ ಮನೆಯಲ್ಲಿ ಭಾರಿ ಗದ್ದಲ, ಗಲಾಟೆ ಏರ್ಪಟ್ಟಿತ್ತು.

ಮಾಧ್ಯಮ ಪ್ರತಿನಿಧಿಗಳಿಗೆ ತಡೆಯೊಡ್ಡಿದ್ದಕ್ಕೆ ಪ್ರತಿಭಟನೆ ನಡೆಸಲಾಯಿತು. ಕೊನೆಗೆ ಹರ್ಭಜನ್ ಸಿಂಗ್ ಅವರೇ ಮನೆಯಿಂದ ಹೊರಬಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಕೈ ಜೋಡಿಸಿ ಕ್ಷಮೆಯಾಚಿಸಿ ಗಲಾಟೆಯನ್ನು ತಣ್ಣಗಾಗಿಸಿದ್ದಾರೆ.[ಹರ್ಭಜನ್ -ಗೀತಾ ಮದುವೆಗೆ ಸಾಕ್ಷಿಯಾದ ಸಚಿನ್]

ಹರ್ಭಜನ್ ಸಿಂಗ್ ಅವರ ಮದುವೆ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿತ್ತು. ಅದರೆ, ದೇಶದ ವಿಐಪಿ, ವಿವಿಐಪಿಗಳು ಮದುವೆಗೆ ಆಗಮಿಸುತ್ತಿದ್ದರು. ಹೀಗಾಗಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿತ್ತು. ಅದರಲ್ಲೂ ಹರ್ಭಜನ್ ಸಿಂಗ್ ಅವರ ಆಪ್ತ ಅಂಗರಕ್ಷಕರು(ಬೌನ್ಸರ್ ಗಳು) ಹಾಗೂ ವಿಡಿಯೋ ಜನರ್ಲಿಸ್ಟ್ ಗಳ ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ.

Harbhajan Singh-Geeta Basra Marriage

ಕೊನೆಗೆ ವಿಡಿಯೋ ಜನರ್ಲಿಸ್ಟ್ ಗಳ ಬಳಿ ಇದ್ದ ಕೆಮೆರಾ ಕಿತ್ತುಕೊಂಡ ಬೌನ್ಸರ್ ಗಳು ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಾಧ್ಯಮಪ್ರತಿನಿಧಿಗಳು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ಘಟನೆ ಬಗ್ಗೆ ವೇದಿಕೆ ಮೇಲಿದ್ದ ನವ ವಧುವರರ ಕಿವಿಗೂ ಮುಟ್ಟಿದೆ.

ಮಾಧ್ಯಮ ಪ್ರತಿನಿಧಿಗಳು ಯಾರ ಮಾತಿಗೂ ಬಗ್ಗದ ಕಾರಣ, ಖುದ್ದು ಹರ್ಭಜನ್ ಸಿಂಗ್ ಅವರು ಧರಣಿ ನಿರತರ ಬಳಿ ಬಂದು ಕ್ಷಮೆಯಾಚಿಸಿದ್ದಾರೆ. ಅದರೆ, ಹರ್ಭಜನ್ ಸಿಂಗ್ ಅವರ ಅಂಗರಕ್ಷಕರ ವಿರುದ್ಧ ಜಲಂಧರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮೆಹಂದಿ, ಸಂಗೀತ್ ಸಮಾರಂಭದ ನಂತರ ಹರ್ಭಜನ್ ಹಾಗೂ ಗೀತಾ ಮದುವೆ ಪಂಜಾಬಿ ಸಂಪ್ರದಾಯದಂತೆ ನೆರವೇರಿದೆ. ನ.01ರಂದು ಐಷಾರಾಮಿ ಹೋಟೆಲ್ ನಲ್ಲಿ ಮದುವೆ ಆರತಕ್ಷತೆ ನಡೆಯಲಿದ್ದು, ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ಆಗಮಿಸುವ ನಿರೀಕ್ಷೆಯಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X