ಧೋನಿ ಬೆನ್ನು ತಟ್ಟಿದ ಹರ್ಭಜನ್, ಆಮ್ರಪಾಲಿ ವಿರುದ್ಧ ಗರಂ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 17: ಆಮ್ರಪಾಲಿ ಸಮೂಹ ಸಂಸ್ಥೆ ರಾಯಭಾರಿ ಸ್ಥಾನವನ್ನು ಮಹೇಂದ್ರ ಸಿಂಗ್ ಧೋನಿ ಅವರು ತ್ಯಜಿಸಿದ್ದಾರೆ. ಧೋನಿ ಅವರ ನಿರ್ಧಾರವನ್ನು ಮೆಚ್ಚಿ ಬೆನ್ನು ತಟ್ಟಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಆಮ್ರಪಾಲಿ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಧೋನಿ ಅವರು ರಿಯಲ್ ಎಸ್ಟೇಟ್ ಕಂಪನಿ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ಕೆಳಗಿಳಿದ ಬಳಿಕ ಅವರ ಅವರ ಪತ್ನಿ ಸಾಕ್ಷಿ ಧೋನಿ ಕೂಡ ಆಮ್ರಪಾಲಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. [ಮಾರ್ಗದರ್ಶಿ ದರ ಏರಿಕೆ ಇಲ್ಲ, ಆಸ್ತಿ ಖರೀದಿಗೆ ಸುಸಮಯ]

ಈ ನಡುವೆ ಎಂಎಸ್ ಧೋನಿ ಅವರು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. 2011ರಲ್ಲಿ ವಿಶ್ವಕಪ್ ಗೆದ್ದ ಬಳಿಕ ನಮ್ಮ ತಂಡಕ್ಕೆ ವಿಲ್ಲಾ ನೀಡುವುದಾಗಿ ಭರವಸೆ ನೀಡಲಾಗಿತ್ತು. ಇಲ್ಲಿ ತನಕ ವಿಲ್ಲಾ ಸಿಕ್ಕಿಲ್ಲ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Harbhajan Singh backs MS Dhoni and Lashes out at Amrapali Builders

ಆದರೆ, ಇದಕ್ಕೆ ಉತ್ತರಿಸಿದ ಆಮ್ರಪಾಲಿ ಅಧ್ಯಕ್ಷ ಅನಿಲ್ ಶರ್ಮ, 'ಹರ್ಭಜನ್ ಅವರಿಗೆ ವಿಲ್ಲಾ ಮಂಜೂರಾಗಿದೆ. ಯಾವಾಗ ಬೇಕಾದರೂ ವಿಲ್ಲಾ ಪಡೆಯಬಹುದು' ಎಂದಿದ್ದಾರೆ.[ಹರ್ಭಜನ್ ಸಿಂಗ್ 'ಎಕ್ಸ್ ಟ್ರಾ ಪ್ಲೇಯರ್' ಅಂದಿದ್ದು ಯಾರು?]

ಏನಿದು ವಿವಾದ: ಆಮ್ರಪಾಲಿ ಗ್ರೂಪ್ ನಡೆಸುತ್ತಿರುವ ಹೌಸಿಂಗ್ ಪ್ರಾಜೆಕ್ಟ್ ಗಳಿಗೆ ಟೀಮ್‌ ಇಂಡಿಯಾ ನಾಯಕ ಧೋನಿ ರಾಯಭಾರಿಯಾಗಿದ್ದರು. ಅವರ ಪತ್ನಿ ಸಾಕ್ಷಿ ನಿರ್ದೇಶಕರುಗಳ ಮಂಡಳಿಯಲ್ಲಿ ಸದಸ್ಯೆಯಾಗಿದ್ದರು.

2009 ರಲ್ಲಿ ಆಮ್ರಪಾಲಿ ಗ್ರೂಪ್ ನೋಯ್ದಾ ಮತ್ತು ದೆಹಲಿಯ ಉಪ ನಗರ, ನೋಯ್ಡಾದಲ್ಲಿ ಸಫೈರ್ (Saphhire) ಎಂಬ ಅಪಾರ್ಟ್ ಮೆಂಟ್ ನಿರ್ಮಿಸಿ ಸುಮಾರು 1 ಸಾವಿರ ಫ್ಲ್ಯಾಟ್ ಗಳನ್ನು ಮಾರಾಟ ಮಾಡಿತ್ತು. ಆದರೆ, ಫ್ಲ್ಯಾಟ್‌ಗಳನ್ನು ಪಡೆದ ಮಂದಿಗೆ ಮೂಲಭೂತ ಅಗತ್ಯವಾಗಿರುವ ರಸ್ತೆ, ಎಲೆಕ್ಚ್ರಿಕಲ್, ಮತ್ತಿತರರು ಸೌಲಭ್ಯಗಳನ್ನು ನೀಡಿರಲಿಲ್ಲ.

ಅಪಾರ್ಟ್ಮೆಂಟ್ ನಿವಾಸಿಗಳ ಮನವಿಯಂತೆ ಧೋನಿ ಆಮ್ರಪಾಲಿ ಗ್ರೂಪ್ ಆಡಳಿತ ಮಂಡಳಿ ಯನ್ನು ಭೇಟಿ ಮಾಡಿ ಅಪಾರ್ಟ್ಮೆಂಟ್ ನ ನಿವಾಸಿಗಳಿಗೆ ಅಗತ್ಯದ ಸೌಲಭ್ಯವನ್ನು ಒದಗಿಸಿಕೊಡುವಂತೆ ಕೇಳಿಕೊಂಡಿದ್ದರು.

ಆದರೆ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಆಮ್ರಪಾಲಿ ಬಿಲ್ಡರ್ಸ್ ಹೇಳಿದ್ದರು. ಇದರಿಂದ ಅಸಮಾಧಾನಗೊಂಡಿರುವ ಧೋನಿ ಆಮ್ರಪಾಲಿ ಗ್ರೂಪ್ ನ ಬ್ಯ್ರಾಂಡ್ ಅಂಬಾಸಿಡರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Harbhajan Singh has praised Indian cricket team captain MS Dhoni for resigning as the brand ambassador of Amrapali builders and complaining that the builder has not given villas to players as promised after 2011 World Cup victory.
Please Wait while comments are loading...