ಚಾಂಪಿಯನ್ಸ್ ಟ್ರೋಫಿಗೆ ರಾಯಭಾರಿಗಳಾಗಿ ಹರ್ಭಜನ್ ಸೇರಿ 8 ಕ್ರಿಕೆಟರ್ಸ್ ಆಯ್ಕೆ

Posted By:
Subscribe to Oneindia Kannada

ದುಬೈ, ಏಪ್ರಿಲ್ 13 : 2017ರ ಚಾಂಪಿಯನ್ಸ್ ಟ್ರೋಫಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಂಟು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನು ರಾಯಭಾರಿಗಳನ್ನಾಗಿ ನೇಮಕ ಮಾಡಿದೆ.

ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಜೂನ್‌ 1ರಿಂದ 18ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದ ಈ ಟೂರ್ನಿಗೆ ಬುಧವಾರ ಐಸಿಸಿ
ಎಂಟು ರಾಯಭಾರಿಗಳಲ್ಲಿ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಆಯ್ಕೆ ಮಾಡಿದೆ.[ಗಿಲ್ಲಿ ದಂಡಾ ಅಡುವುದು ಹೇಗೆ? ಹರ್ಭಜನ್ ಫ್ರೀ ಕೋಚಿಂಗ್]

Harbhajan Singh among 8 ambassadors for ICC Champions Trophy 2017

ಭಾರತದ ಹರ್ಭಜನ್ ಸೇರಿದಂತೆ, ಪಾಕಿಸ್ತಾನದ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಹಬೀಬುಲ್ ಬಾಶರ್, ಇಂಗ್ಲೆಂಡ್‌ ನ ಇಯಾನ್ ಬೆಲ್‌, ನ್ಯೂಜಿಲೆಂಡ್ ತಂಡದ ಶೇನ್ ಬಾಂಡ್, ಆಸ್ಟ್ರೇಲಿಯಾದ ಮೈಕ್ ಹಸ್ಸಿ, ಶ್ರೀಲಂಕಾದ ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅವರನ್ನು ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

'ವಿಶ್ವ ಮಟ್ಟದ ಟೂರ್ನಿಗೆ ರಾಯಭಾರಿಯಾಗಿ ಆಯ್ಕೆಯಾಗಿರುವುದು ನನಗೆ ಸಿಕ್ಕ ಅತ್ಯುತ್ತಮ ಗೌರವ. ಭಾರತದ ಎಲ್ಲಾ ಪಂದ್ಯಗಳನ್ನು ನೋಡಿ ಪ್ರೋತ್ಸಾಹ ನೀಡಲಿದ್ದೇನೆ. 2013ರಲ್ಲಿ ಗೆದ್ದ ಪ್ರಶಸ್ತಿಯನ್ನು ಭಾರತ ತಂಡ ಈ ಬಾರಿ ಉಳಿಸಿಕೊಳ್ಳಲಿದೆ' ಎಂದು ಹರ್ಭಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With exactly 50 days to go for the 2017 Champions Trophy, the International Cricket Council (ICC) on Wednesday unveiled India off-spinner Harbhajan Singh as one of the eight champion ambassadors for the tournament to be staged at three iconic venues in England and Wales from June 1 to 18.
Please Wait while comments are loading...